Petrol-diesel price: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 10ರೂ ಇಳಿಕೆ !!
Petrol-diesel price: ವರ್ಷಗಳ ಹಿಂದೆ ಏರಿಕೆ ಕಂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇದವರೆಗೂ ಎಳಿಕೆಯೇ ಕಂಡಿಲ್ಲ. ಆದರೆ ಇದೀಗ ಸಂತೋಷದ ಸುದ್ದಿ ಒಂದು ಹೊರಬಿದ್ದಿದ್ದು ಹೊಸ ವರ್ಷದ ಮುನ್ನವೇ ಪೆಟ್ರೋಲ್ ಮತ್ತು ಡೀಸೆಲ್(Petrol-diesel price ) ನ ಬೆಲೆಯಲ್ಲಿ 10ರೂಪಾಯಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಹೌದು, ದೇಶದಲ್ಲಿ ಮುಂದಿನ ವರ್ಷ ಲೋಕಸಭಾ ಚುನಾವಣೆ(Parliament election) ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕೆಲವೊಂದು ಬೆಲೆ ಏರಿಕೆಗಳ ಬಗ್ಗೆ ಕ್ರಮವನ್ನು ಕೈಗೊಂಡಿದ್ದು ಹಲವು ದಿನನಿತ್ಯದ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ವರ್ಷಾಂತ್ಯಕ್ಕೆ ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆಯನ್ನು (Diesel Price) ಇಳಿಕೆ ಮಾಡುವ ಸಾಧ್ಯತೆ ಇದ್ದು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗೆ 8 ರೂ.ನಿಂದ 10 ರೂ.ವರೆಗೆ ಇಳಿಸಲಿದೆ. ಈ ಕುರಿತಾದ ಅಧಿಕೃತ ಹೇಳಿಕೆಯನ್ನು ಪ್ರಧಾನಿ ಮೋದಿ ಅವರು ಈ ವರ್ಷಾಂತ್ಯಕ್ಕೆ ನೀಡಲಿದ್ದಾರೆ.
ಇಷ್ಟೇ ಅಲ್ಲದೆ ಈಗಾಗಲೇ ವರದಿಗಳ ಪ್ರಕಾರ, ಪೆಟ್ರೋಲಿಯಂ ಸಚಿವಾಲಯವು ಗುರುವಾರ ಪ್ರಧಾನಿ ಮೋದಿಯವರ ಅನುಮೋದನೆಗಾಗಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ 8 ರಿಂದ 10 ರೂಪಾಯಿಗಳವರೆಗಿನ ಕಡಿತವನ್ನು ಒಳಗೊಂಡ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ₹10 ಇಳಿಕೆಯಾಗಬಹುದು.