LPG Price: ಗೃಹಿಣಿಯರಿಗೆ ಬಂಪರ್ ಸಿಹಿ ಸುದ್ದಿ, ಎಲ್ ಪಿಜಿ ಸಿಲಿಂಡರ್ ಬೆಲೆ 450 ರೂ!!

LPG Price: ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್‌ (LPG Cylinder) ಬೆಲೆ ಏರಿಕೆಯಿಂದ (LPG Price) ಕಂಗಾಲಾಗಿರುವ ಜನತೆಗೆ ಬಿಗ್ ಗುಡ್ ನ್ಯೂಸ್(Good News)ಇಲ್ಲಿದೆ. ರಾಜ್ಯದ ಮಹಿಳೆಯರಿಗೆ ಬಂಪರ್ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಜನರಿಗೆ ಸಬ್ಸಿಡಿ ದರದಲ್ಲಿ 450 ರೂ.ಗೆ ಒಂದು ಅಡುಗೆ ಅನಿಲ ಸಿಲಿಂಡರ್‌ ನೀಡುವ ಆಶ್ವಾಸನೆ ನೀಡಿತ್ತು. ಇದರ ಅನುಸಾರ,ರಾಜಸ್ಥಾನದ ಬಿಜೆಪಿ ಸರ್ಕಾರ (Rajasthan BJP Government) ಕೊಟ್ಟ ಮಾತಿನಂತೆ ಜನವರಿ 1ರಿಂದ ರಾಜಸ್ಥಾನದ ನಾಗರಿಕರಿಗೆ ಒಂದು ಎಲ್‌ಪಿಜಿ ಸಿಲಿಂಡರ್‌ 450ರೂಪಾಯಿಗೆ ಸಿಗಲಿದೆ. ಈ ಮೂಲಕ ಬಿಜೆಪಿಯು ಚುನಾವಣೆಯಲ್ಲಿ ನೀಡಿದ ಭರವಸೆಯನ್ನೂ ನೆರವೇರಿಸಲಿದೆ.

ರಾಜಸ್ತಾನದಲ್ಲಿ ಅಡುಗೆ ಅನಿಲ ಸಿಲಿಂಡರ್‌ ದರವನ್ನು 450ರೂಪಾಯಿಗಳಿಗೆ ಇಳಿಸುವುದಾಗಿ ಚುನಾವಣೆ ವೇಳೆಯೇ ಬಿಜೆಪಿ ಘೋಷಣೆ ಮಾಡಿತ್ತು. ರಾಜಸ್ಥಾನದಲ್ಲಿ ಇದುವರೆಗೆ ಒಂದು ಎಲ್‌ಪಿಜಿ ಸಿಲಿಂಡರ್‌ ದರ 500ರೂಪಾಯಿಯಿದ್ದು, ಇದೀಗ, ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮಾ ಅವರು ಎಲ್‌ಪಿಜಿ ಬೆಲೆಯನ್ನು 50 ರೂ. ಇಳಿಸಿದ್ದು, ಪಿಎಂ ಉಜ್ವಲ ಯೋಜನೆಯಡಿಯಲ್ಲಿ ರಾಜ್ಯದ ಜನರು 450 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಫಲಾನುಭವಿ ಮಹಿಳೆಯರ ಖಾತೆಗೆ ನೇರವಾಗಿ ಸಬ್ಸಿಡಿಯ ಹಣವನ್ನು ವರ್ಗಾವಣೆ ಆಗಲಿದೆ.

ಇದನ್ನು ಓದಿ: Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮುಖ್ಯವಾದ ಮಾಹಿತಿ; ಕೇವಲ ಇದೊಂದು ಕೆಲಸ ಗೃಹಲಕ್ಷ್ಮಿ ಶಿಬಿರದಲ್ಲಿ ಮಾಡಿ, ಹಣ ಪಡೆಯಿರಿ!

Leave A Reply

Your email address will not be published.