Train: ಅಷ್ಟು ನೈಸ್ ಇದ್ರೂ ಹಳಿಗಳ ಮೇಲೆ ರೈಲಿನ ಚಕ್ರ ಜಾರಲ್ಲ ಯಾಕೆ ?! ರಿವೀಲ್ ಆಯ್ತು ಯಾರೂ ತಿಳಿಯದ ಹೊಸ ಸತ್ಯ
Train: ರೈಲು ಪ್ರಯಾಣ ಎಂದರೇ ಹೆಚ್ಚಿನವರಿಗೆ ಅಚ್ಚು ಮೆಚ್ಚು. ಅದರಲ್ಲೂ ಕಡಿಮೆ ವೆಚ್ಚದಲ್ಲಿ ಸುಖಕರ ಪ್ರಯಾಣ ಬೆಳೆಸಲು ರೈಲು ಪ್ರಯಾಣ ಅತಿ ಸೂಕ್ತ ಎಂದರೇ ತಪ್ಪಾಗದು. ಭಾರತೀಯ ರೈಲ್ವೇ( Indian Railways) ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ರೈಲು ಪ್ರಯಾಣ ಆರ್ಥಿಕ ದೃಷ್ಟಿಯಿಂದ ಮಾತ್ರವಲ್ಲದೇ, ಆರಾಮದಾಯಕ ಪ್ರಯಾಣದಿಂದಾಗಿ ಹೆಚ್ಚು ಖ್ಯಾತಿ ಪಡೆದಿದೆ. ಆದರೆ, ರೇಲ್ವೆ ಹಳಿಗಳ ಮೇಲೆ ರೈಲಿನ(Train)ಚಕ್ರ ಜಾರೋದಿಲ್ಲ ಎಂಬುದನ್ನು ನೀವು ಗಮನಿಸಿರಬಹುದು!! ಇದಕ್ಕೆ ಕಾರಣವೇನು ಗೊತ್ತಾ??
ರೈಲು ತುಂಬಾ ನಯವಾದ ಹಳಿಗಳ ಮೇಲೆ ವೇಗವಾಗಿ ಚಲಿಸುವ ಸಂದರ್ಭ ರೈಲಿನ ಚಕ್ರಗಳು ಏಕೆ ಜಾರುವುದಿಲ್ಲ ಎಂಬ ಪ್ರಶ್ನೆ ಬಹುತೇಕರನ್ನು ಕಾಡದೇ ಇರದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ!! ನಾವು ಕಾರು ಇಲ್ಲವೇ ಇನ್ನಿತರ ವಾಹನಗಳನ್ನು ಅಸಮವಾದ ರಸ್ತೆಯಲ್ಲಿ ಓಡಿಸಿದ ಸಂದರ್ಭ ಚಕ್ರಗಳು ಹೆಚ್ಚಾಗಿ ಜಾರಿಕೊಳ್ಳುತ್ತವೆ. ಅದರಲ್ಲಿಯು ವಿಶೇಷವಾಗಿ ಮಳೆಗಾಲದಲ್ಲಿ ಕೆಸರಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವಾಹನದ ಪ್ರಭಾವ ಮತ್ತು ಘರ್ಷಣೆಯ ಬಲ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ. ವಾಹನದ ಬಲಕ್ಕೆ ಹೋಲಿಸಿದರೆ ವಾಹನದ ಅಡಿಯಲ್ಲಿರುವ ಬಲವು ತುಂಬಾ ಚಿಕ್ಕದಾಗಿದ್ದು, ವಾಹನಗಳು ಸ್ಕಿಡ್ ಆಗುವುದಕ್ಕೆ ಕಾರಣವಾಗುತ್ತದೆ.
ಸಾಮಾನ್ಯವಾಗಿ, ಮಳೆಗಾಲದಲ್ಲಿ ಎಲ್ಲ ವಾಹನಗಳು ನಿಧಾನವಾಗಿ ಚಲಿಸುತ್ತವೆ. ಅದೇ ರೀತಿ ಮಳೆಗಾಲದಲ್ಲಿ ರೈಲಿನ ವೇಗ ಕೂಡ ಕಡಿಮೆಯಾಗುತ್ತದೆ. ಮಾನ್ಸೂನ್ ಸಮಯದಲ್ಲಿ ಘರ್ಷಣೆಯ ಸಾಮಾನ್ಯ ಮಟ್ಟವು 0.1 ಕ್ಕೆ ಇಳಿಯುವುದರಿಂದ ರೈಲಿನ ವೇಗ ಕಡಿಮೆಯಾಗುತ್ತದೆ. ಈ ಮಟ್ಟದ ಘರ್ಷಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈಲಿನಲ್ಲಿ ಹಲವಾರು ಸಾಧನಗಳನ್ನು ಅಳವಡಿಸಲಾಗಿದ್ದು, ಹೀಗಾಗಿ, ಮಳೆಗಾಲದಲ್ಲಿ ರೈಲಿನ ವೇಗ ಕಡಿಮೆಯಾಗುತ್ತದೆ. ರೈಲಿನ ಇಂಜಿನ್‌ನ ಚಕ್ರಗಳಲ್ಲಿರುವ ಸ್ಯಾಂಡ್ ಬಾಕ್ಸ್ ಹಳಿಗಳ ಮೇಲೆ ಚಕ್ರ ಜಾರಿಬೀಳುವುದನ್ನು ತಡೆಯುತ್ತದೆ.
ರಬ್ಬರ್ ಚಕ್ರಗಳಿರುವ ವಾಹನವು ಸಮತಟ್ಟಾದ ರಸ್ತೆಯಲ್ಲಿ ವೇಗವಾಗಿ ಚಲಿಸುವುದು ಕೊಂಚ ಕಷ್ಟವೇ ಸರಿ! ಹೀಗಾಗಿ, ಟೈರ್‌ಗಳನ್ನು ಹಿಡಿತಗಳನ್ನು ಹೊಂದಲು ವಿನ್ಯಾಸ ಮಾಡಲಾಗಿದೆ. ಇವುಗಳಲ್ಲಿ ಘರ್ಷಣೆಯ ಸಾಮಾನ್ಯ ಮಟ್ಟವು 0.7 ರಿಂದ 0.9 ರ ನಡುವೆ ಇರುತ್ತದೆ. ಫ್ಲಾಟ್ ರೈಲು ಚಕ್ರಗಳು 0.4 ಮಟ್ಟದ ಸಾಮಾನ್ಯ ಘರ್ಷಣೆ ಯೊಂದಿಗೆ ಸಲೀಸಾಗಿ ಚಲಿಸುತ್ತವೆ. ಇದು ರೈಲು ಇಂಜಿನ್‌ನಿಂದ ಹೆಚ್ಚಿನ ಮಿತಿಗಳಲ್ಲಿ ಘರ್ಷಣೆ ಬಲಕ್ಕಿಂತ ಕಡಿಮೆ ಬಲವನ್ನು ಉಂಟುಮಾಡುತ್ತದೆ. ಇದು ಎಂಜಿನ್ ಹಳಿಗಳ ಮೇಲೆ ಜಾರಿಬೀಳುವುದನ್ನು ತಡೆಯುತ್ತದೆ. ರೈಲು ಹಳಿತಪ್ಪುವಿಕೆಯ ಬಗ್ಗೆ ನಾವು ಅನೇಕ ಬಾರಿ ಕೇಳಿರುತ್ತೇವೆ. ಆದರೆ ಆ ಅಪಘಾತಗಳಿಗೂ ರೈಲಿನ ಚಕ್ರಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಘರ್ಷಣೆಯು ರೈಲುಗಳು ಅತ್ಯಂತ ಮೃದುವಾದ ಟ್ರ್ಯಾಕ್‌ನಿಂದ ಜಾರಿಬೀಳುವುದನ್ನು ತಡೆಯಲು ಮುಖ್ಯ ಕಾರಣವಾಗಿದೆ. ಅಷ್ಟೇ ಅಲ್ಲದೇ, ಈ ಚಕ್ರಗಳು ಜಾರಿಬೀಳದಂತೆ ತಡೆಯಲು ಕೆಲವು ರಾಸಾಯನಿಕಗಳನ್ನೂ ಕೂಡ ಬಳಕೆ ಮಾಡಲಾಗುತ್ತದೆ.