Murder News: ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಜೊತೆ ಅಕ್ರಮ ಸಂಬಂಧ ಬೆಳೆಸಿದ ಯುವಕ; ಮದುವೆ ಗಂಡಿಗೆ ತಿಳಿದಾಗ ಏನಾಯ್ತು ಗೊತ್ತೇ?

Share the Article

Murder News: ತಾನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೊಂದಿಗೆ ಇನ್ನೋರ್ವ ಯುವಕ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದನ್ನು ಕಂಡ ಯುವಕನೋರ್ವ ಮದುವೆ ಮಂಟಪದಲ್ಲಿ ಅಟ್ಟಾಡಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.

ಪುಣೆ ಮೂಲದ ಅಯಾನ್‌ ಶೇಖ್‌ ಎಂಬಾತ ಹತ್ಯೆಯಾದ ಯುವಕ. ವಿಜಯಪುರದ ಚಪ್ಪರ ಬಂದ್‌ ಕಾಲೋನಿಯ ಹುಸೇನ್‌ ಸಾಬ್‌ ನಂದಿಹಾಳ ಆರೋಪಿ.

ಪುಣೆ ಮೂಲದ ಯುವತಿಯ ಜೊತೆ ಹುಸೇನ್‌ ಸಾಬ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆ ಯುವತಿಯೊಂದಿಗೆ ಅಯಾನ್‌ ಶೇಖ್‌ ಅಕ್ರಮ ಸಂಬಂಧ ಬೆಳೆಸಿದ್ದ. ಇದು ನಂತರ ಮದುವೆಯಾಗೋ ಹುಡುಗನಿಗೆ ಗೊತ್ತಾಗಿದೆ. ಅನಂತರ ಇದು ಹಿರಿಯರಿಗೆ ತಲುಪಿ ಹಿರಿಯರು ಬುದ್ಧಿವಾದ ಹೇಳಿ ವಿವಾದ ತಣ್ಣಗಾಗಿಸಿದ್ದಾರೆ.

ಆದರೆ ಹುಸೇನ್‌ ಸಾಬ್‌ ಸೋಮವಾರ ಮದುವೆಗೆ ವಿಜಯಪುರಕ್ಕೆ ಅಯಾನ್‌ ನನ್ನು ಕರೆಸಿದ್ದಾನೆ. ನಂತರ ಚಾಕುವಿನಿಂದ ಕೊಲೆ ಮಾಡಿದ್ದಾನೆ. ಇದೀಗ ಆರೋಪಿ ಹುಸೇನ್‌ ಸಾಬ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Leave A Reply