Heart Attack Chest Pain: ಮನುಷ್ಯನಿಗೆ ಹೃದಯಾಘಾತ ಕಾಣಿಸಿಕೊಂಡಾಗ, ಬರುವ ಎದೆನೋವು ಈ ರೀತಿ ಇರುತ್ತದೆ!!!

ಮನುಷ್ಯನ ಆರೋಗ್ಯ ಯಾವಾಗ ಏನು ಆಗುತ್ತದೆ ಎಂದು ತಿಳಿದುಕೊಳ್ಳುವುದು ಅಸಾಧ್ಯ. ಕಣ್ಣೆದುರಿಗೆ ಆರೋಗ್ಯವಾಗಿ ತಿರುಗಾಡುತ್ತಿದ್ದವರು ಒಮ್ಮಿಂದೊಮ್ಮೆಲೇ ಹಾಸಿಗೆ ಹಿಡಿಯುವುದು, ಸಾವು ಕಾಣುವುದು ನಮ್ಮ ಮುಂದೆ ಕಂಡು ಬಂದಿದೆ. ಇನ್ನು ತಜ್ಞರು ಹೇಳುವ ಪ್ರಕಾರ, ಮನುಷ್ಯನಿಗೆ ಕಂಡು ಬರುವ ಆರೋಗ್ಯ ಸಮಸ್ಯೆಗಳು, ಕೆಲವು ತಾತ್ಕಾಲಿಕವಾಗಿದ್ದರೆ ಇನ್ನು ಕೆಲವು ದೀರ್ಘಕಾಲದವರೆಗೆ ಕಾಡುವ ಮಾರಕ ಸಮಸ್ಯೆಗಳು ಕಾರಣ ಎಂದು ಹೇಳುತ್ತಾರೆ.

 

ಇದಕ್ಕೆ ಈಗಿನ ಕಾಲದಲ್ಲಿ ಬೆಸ್ಟ್‌ ಎಕ್ಸಾಂಪಲ್‌ ಹೃದಯಾಘಾತ. ಇದಕ್ಕೆ ಈಗ ಬಡವ, ಶ್ರೀಮಂತ ಎಂಬ ಭೇದಭಾವ ಇಲ್ಲ. ಕೆಲವರ ದೈನಂದಿನ ಜೀವನಶೈಲಿನ ಆಧಾರದ ಮೇಲೆ ಹೃದಯಾಘಾತ ಉಂಟಾಗುತ್ತದೆ ಎಂದು ತಜ್ಞರ ಅಭಿಪ್ರಾಯ.

ತಜ್ಞ ವೈದ್ಯರು ಹೇಳುವ ಪ್ರಕಾರ ಹೃದಯಾಘಾತದ ಪ್ರಮುಖ ಲಕ್ಷಣವೇ ಎದೆ ನೋವು ಕಾಣಿಸುವುದು. ಕೆಲವರಿಗೆ ಎದೆಯಲ್ಲಿ ಭಾರ ಆದಂತೆ ಅನಿಸುವಿಕೆ, ಎಡಗಡೆ ಎದೆಯ ಭಾಗದಲ್ಲಿ ನೋವು ಬರುವುದು, ಎದೆಯ ಮಧ್ಯ ಭಾಗದಲ್ಲಿ ಒತ್ತಿ ಹಿಡಿದ ಅನುಭ, ಎದೆಯಲ್ಲಿ ಬಿಗಿ ಬಂದ ಹಾಗೆ ತೊಂದರೆ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ಎದೆ ಮೇಲೆ ಯಾರೋ ಬಂದು ಕುಳಿತುಕೊಂಡ ಹಾಗೆ, ಬಿಗಿಯಾಗಿ ಹಿಡಿದುಕೊಂಡ ಹಾಗೆ ಅನಿಸುತ್ತದೆ. ಇವೆಲ್ಲ ಹೃದಯ ರೋಗ ಅಥವಾ ಹೃದಯಾಘಾತದ ಚಿಹ್ನೆ ಎಂದು ತಜ್ಞ ವೈದ್ಯರ ಅಭಿಪ್ರಾಯ.

ಹಾಗೆನೇ ಹೃದಯಾಘಾತದ ಎದೆನೋವು 15 ರಿಂದ 20 ನಿಮಿಷ, ಇಲ್ಲಾಂದ್ರೆ ಅರ್ಧ ಗಂಟೆ. ಆದರೆ ದಿನ ಪೂರ್ತಿ ಇರುವುದಿಲ್ಲ.

ಇದನ್ನು ಓದಿ: Heart Attack: ಅಡುಗೆ ಮಾಡುತಿದ್ದ ವೇಳೆ ಕುಸಿದ 22 ವರ್ಷದ ಯುವಕ; ಹೃದಯಾಘಾತದಿಂದ ಸಾವು!!

ಎದೆಯ ಮಧ್ಯಭಾಗದಲ್ಲಿ ಅಂದರೆ ಎದೆಗೂಡಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಪಿನ್‌ ತೆಗೆದು ಚುಚ್ಚಿದ ಹಾಗೆ ನೋವು ಕಾಣಿಸಿಕೊಳ್ಳುವುದಿಲ್ಲ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಜಂಪ್‌ ಕೂಡಾ ಆಗಲ್ಲ ಈ ನೋವು. ಒಂದೇ ಕಡೆ ನೋವು ಕಾಣಿಸುತ್ತಿದೆ. ಹಾಗಾಗಿ ಈ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ.

ಇವುಗಳ ಜೊತೆಗೆ ಎದೆ ನೋವು ಕಾಣಿಸಿಕೊಂಡಾಗ ಆ ನೋವು ಕುತ್ತಿಗೆ ಕೈಗಳ ತೋಳು, ಭುಜಗಳು ಹಾಗೂ ಕಣ್ಣುಗಳವರೆಗೂ ಹರಡುತ್ತದೆ. ಇನ್ನು ಮುಂದುವರಿದು ಕೆಲವರಿಗೆ ಇದು ದವಡೆ ಹಲ್ಲುಗಳ ನೋವು ಕಾಣಿಸುವವರೆಗೆ ಹೋಗುತ್ತದೆ.

ಮೇಲೆ ತಿಳಿಸಿದ ಎಲ್ಲಾ ಲಕ್ಷಣಗಳು ಕಾಣಿಸುವುದರ ಜೊತೆಗೆ ಕೆಲವರಿಗೆ ಬೆವರು ಜಾಸ್ತಿ, ವಾಂತಿ ಬಂದ ಹಾಗೆ ಆಗುತ್ತದೆ. ಉಸಿರಾಟ ಸಮಸ್ಯೆ, ಕೈ ಕಾಲು ತಣ್ಣಗಾಗುವುದು. ಇದಕ್ಕಿದ್ದಂತೆ ಚರ್ಮದ ಬಣ್ಣ ನೀಲಿ ಬಣ್ಣಕ್ಕೆ ತಿರುಗುವುದು.

Leave A Reply

Your email address will not be published.