Davanagere News: ರಂಗು ರಂಗಿನ ರೀಲ್ಸ್‌ ನೋಡಿ ಮದುವೆಯಾದ ಯುವಕ; ಗರ್ಭಿಣಿ ಅಂತ ತವರಿಗೆ ಬಿಟ್ಟರೆ, ಹೆಂಡತಿ ನಾಪತ್ತೆ!

Share the Article

Davanagere: ಹೆಂಡತಿ ಗರ್ಭಿಣಿ ಎಂದು ತವರಿಗೆ ಕಳುಹಿಸಿದ ಗಂಡನಿಗೆ ಹೆಂಡತಿ ಶಾಕ್‌ ನೀಡಿದ್ದಾಳೆ. ಅದೇನೆಂದರೆ ಹೆಂಡತಿ ನಾಪತ್ತೆಯಾಗಿದ್ದಾಳೆ. ಇದೀಗ ಗಂಡ ಮಿಸ್ಸಿಂಗ್‌ ಕಂಪ್ಲೇಂಟ್‌ ನೀಡಿದ್ದಾನೆ. ಗರ್ಭಿಣಿ ಎಂದು ಹೋದವಳು ಇನ್ನೊಬ್ಬನ ಜೊತೆ ಮದುವೆಯಾಗಿ ಸಂಸಾರ ಮಾಡುತ್ತಿದ್ದಾಳೆ. ಗಂಡನಿಗೆ ಇದು ತಿಳಿದು ಶಾಕ್‌ಗೊಳಗಾಗಿದ್ದಾನೆ. ಹಾಗಾದರೆ ಆಕೆ ಗರ್ಭಿಣಿಯಾಗಿದ್ದು ನಿಜವೇ? ಏನಿದು ಎರಡನೇ ಮದುವೆ ಕಥೆ? ಬನ್ನಿ ತಿಳಿಯೋಣ.

ಇಂತಹ ಒಂದು ವಿಲಕ್ಷಣ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ನರಹಳ್ಳಿ ಗ್ರಾಮದ ಯುವತಿ ಸ್ನೇಹ ಅಲಿಯಾಸ್‌ ನಿರ್ಮಲಾಳನ್ನು ದಾವಣಗೆರೆಯ ಪ್ರಶಾಂತ್‌ ಬಿ ಎಂಬಾತ ಪ್ರೀತಿಸಿ ಮದುವೆಯಾಗಿದ್ದ. ಇವರಿಬ್ಬರ ಮದುವೆ 2022 ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನಡೆದಿತ್ತು. ಚೆನ್ನಾಗಿಯೇ ಇದ್ದ ಇವರ ಸಂಸಾರದಲ್ಲಿ ಮೂರು ತಿಂಗಳ ಹಿಂದೆ ಈಕೆ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ತನ್ನ ಹೆಂಡತಿ ತವರು ಮನೆಯಲ್ಲಿದ್ದರೆ ಚೆಂದ ಎಂದು ಅಲ್ಲಿಗೆ ಕಳುಹಿಸಿ ಆಗಾಗ ಹೋಗಿ ಬರುತ್ತಿದ್ದ. ಆದರೆ ಇದೀಗ ಆಕೆ ಒಮ್ಮಿಂದೊಮ್ಮೆಗೆ ನಾಪತ್ತೆಯಾಗಿದ್ದು, ತವರಿನಲ್ಲಿ ಕೇಳಿದರೆ ಉತ್ತರವಿಲ್ಲ.

ನಂತರ ಗಂಡ ದಾವಣಗೆರೆಯ ಕೆಟಿಜೆ ನಗರ ಪೊಲೀಸ್‌ ಠಾಣೆಗೆ ಹೋಗಿ ಅಲ್ಲಿ ನಾಪತ್ತೆ ದೂರು ದಾಖಲು ಮಾಡಿದ್ದಾನೆ. ಆದರೆ ಇತ್ತೀಚೆಗೆ ಪ್ರಶಾಂತ್‌ಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ನೋಡುತ್ತಿರುವಾಗ ಹೆಂಡತಿಯೇ ಎದುರಿಗೆ ಕಂಡಳು. ಪಕ್ಕದಲ್ಲೊಬ್ಬ ಗಂಡನೆಂಬ ಗಂಡಸು. ಇದರಿಂದ ಗೊಂದಲಕ್ಕೊಳಗಾದ ಗಂಡ ನನ್ನಿಂದಾದ ಗರ್ಭ ಎಲ್ಲಿ ಎನ್ನುವುದು ಮತ್ತೊಂದು ಪ್ರಶ್ನೆ ಕಾಡಿದೆ. ಇದೀಗ ಎಲ್ಲಾ ವಿಚಾರವನ್ನು ಆತ ಪೊಲೀಸರಿಗೆ ತಿಳಿಸಿದ್ದು, ನ್ಯಾಯ ಒದಗಿಸಿಕೊಡಿ ಎಂದು ಕೇಳಿದ್ದಾನೆ.

ಪ್ರಶಾಂತ್‌ ಮತ್ತು ಸ್ನೇಹಾ ಪ್ರೀತಿ ಶುರುವಾಗಿದ್ದೇ ಇನ್ಸ್‌ಸ್ಟಾದಲ್ಲಿ. ರೀಲ್ಸ್‌ ಮಾಡೋದರಲ್ಲಿ ಎತ್ತಿದ ಕೈ ಈ ಸ್ನೇಹಾ. ಈಕೆಯ ರೀಲ್ಸ್‌ ನೋಡಿ ಮನಸೋತ ಪ್ರಶಾಂತ್‌ ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ನಂತರ ಗರ್ಭಿಣಿ ಕೂಡಾ ಆಗಿದ್ದಳು.

ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿಗೆ ಆಕೆ ಊರಿಗೆ ಹೋದವಳೇ ಗರ್ಭಿಣಿಯಾದರೆ ಮಕ್ಕಳಾದರೆ ರೀಲ್ಸ್‌ ಮಾಡುವುದು ಕಷ್ಟ ಎಂದು ತಿಳಿದು ಟ್ಯಾಬ್ಲೆಟ್‌ ತಗೊಂಡಿದ್ದಾಳೆ. ರೀಲ್ಸ್‌ ಶುರು ಮಾಡಿದ್ದಾಳೆ. ಅನಂತರ ಸಿಕ್ಕಿದ್ದೇ ಈ ಇನ್ನೊಬ್ಬ ಗಂಡ. ಇವಳ ಈ ಜಾಡನ್ನು ಹಿಡಿದುಕೊಂಡು ಹೋದಾಗ ಪ್ರಶಾಂತನಿಗೆ ಸಿಕ್ಕಿದ್ದೇ ರೋಚಕ ಮಾಹಿತಿ. ಅವಳಿಗೆ ಈತ ಮೊದಲನೇ ಗಂಡ ಅಲ್ಲ. ಈತ ನಾಲ್ಕನೇ ಗಂಡ ಅನ್ನೋದು ಪ್ರಶಾಂತ್‌ನ ಸಂಶೋಧನೆ. ಈಕೆಗೆ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡಿ ಹುಡುಗರನ್ನು ಯಾಮಾರಿಸುವುದೇ ಈಕೆಯ ಕಾಯಕ ಎಂದು ಪ್ರಶಾಂತ್‌ ಹೇಳಿಕೆ.

ರೀಲ್ಸ್‌ನಲ್ಲಿ ರಂಗಿನಾಟ ನೋಡಿ ನಾನು ಮದುವೆಯಾದರೆ. ಇದೀಗ ಆಕೆ ನನಗೆ ಕೈಕೊಟ್ಟು, ಇನ್ನೊಬ್ಬನನ್ನು ಕಟ್ಟಿಕೊಂಡಿದ್ದಾಳೆ. ನನಗೆ ಇದು ಮೊದಲ ಮದುವೆ. ಆದರೆ ಆಕೆಗೆ ಈಗಾಗಲೇ ಎರಡು ಮದುವೆ ಆಗೋಗಿದೆ. ರೀಲ್ಸ್‌ ನೋಡಿ ಹುಡುಗಿಯರ ಬಲೆಗೆ ಬೀಳಬೇಡಿ ಎಂದು ಪ್ರಶಾಂತ್‌ ಅವರ ಸಲಹೆ.

Leave A Reply