Rapido : ರಾಪಿಡೋ ಚಾಲಕನಾಗೋ ಮೊದಲು ಈತ ಏನು ಕೆಲ್ಸ ಮಾಡ್ತಿದ್ದ ಗೊತ್ತ ?! ಕೇಳಿ ಹೌಹಾರಿಹೋದ ಕಸ್ಟಮರ್

 

 

Rapido: ಇಂದು ಬದುಕಲು ಅನೇಕ ದಾರಿಗಳಿವೆ, ಅದರಲ್ಲಿಯೂ ಆಧುನಿಕ ಜಗತ್ತು ಹಲವು ತರಹದ ಬದುಕುವ ಮಾರ್ಗಳನ್ನು ಜನರಿಗೆ ನೀಡಿದೆ. ಅಂತದರಲ್ಲಿ ಈ ರಾಪಿಡೋ ಬೈಕ್ಗಳು ಕೂಡ ಒಂದು. ಇದರ ಮೂಲಕ ಅನೇಕ ಜನರು ನಗರಗಳಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಅಂತೆಯೇ ಇಲ್ಲೊಬ್ಬ ರಾಪಿಡೋ(Rapido) ಚಾಲಕ ಮೊದಲು ಏನು ಕೆಲ್ಸ ಮಾಡ್ತಿದ್ದ ಎಂದು ತಿಳಿದು, ಅದರ ಕಸ್ಟಮರ್ ಹೌಹಾರಿಹೋಗಿದ್ದಾರೆ.

ಕಾರ್ಪೋರೇಟ್ ಮ್ಯಾನೇಜರ್(Corporate manager)ಆಗಿದ್ದ ವ್ಯಕ್ತಿಯೊಬ್ಬರು ಈಗ ಜನ ಸೇವೆಯ ಉದ್ದೇಶದಿಂದ ರಾಪಿಡೋ ಚಾಲಕರಾಗಿದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು ಬಿಡಿ. ಹೌದು, ರಾಪಿಡೋ ಎಂಬುದು ಒಂದು ನೆಮ್ಮದಿದಾಯಕ ಕೆಲಸ, ಕಡಿಮೆ ದರದಲ್ಲಿ ಜನರಿಗೆ ನಾವು ನೆರವಾಗುತ್ತೇವಲ್ಲಾ ಎಂಬುದು ಒಂದೆಡೆಯಾದರೆ ನಮಗೆ ದುಡಿಮೆಯೂ ಆಗುತ್ತದಲ್ಲಾ ಎಂಬ ತೃಪ್ತಿಯೂ ಇರುತ್ತದೆ. ಇದು ಎಷ್ಟರ ಮಟ್ಟಿಗೆ ಅಂದರೆ ಬದುಕಿನಲ್ಲಿ ಸೋತು ಸುಣ್ಣವಾದ ಕಾರ್ಪೋರೇಟ್ ಮ್ಯಾನೇಜರ್ ಗೂ ಕೂಡ ಸುಂದರ ಬದುಕನ್ನು ಕಟ್ಟಿಕೊಡುವಷ್ಟು.

ಅಂದಹಾಗೆ ರಾಪಿಡೋ ಬೈಕ್ ನಲ್ಲಿ ಹೋಗುವಾಗ ಸವಾರರು ಚಾಲಕನೊಂದಿಗೆ ಏನಾದರೂ ಹರಟುವುದು ಸಾಮಾನ್ಯ. ಅಂತೆಯೇ ಬೆಂಗಳೂರಿನ ಶ್ರುತಿ ಎಂಬುವವರು ರಾಪಿಡೋ ಬೈಕ್ ಬುಕ್ ಮಾಡಿ, ಚಲಿಸುವಾಗ ಬೆಳಕಿಗೆ ಬಂದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ತಾವು ಸವಾರಿ ಮಾಡುತ್ತಿರುವ ರಾಪಿಡೋ ಚಾಲಕ ಒಬ್ಬ ಮಾಜಿ ಕಾರ್ಪೋರೇಟ್ ಮ್ಯಾನೇಜರ್ (Corporate Manager) ಆಗಿದ್ದರು ಎನ್ನುವ ಸಂಗತಿಯನ್ನು

ಹೌದು, ಕೋವಿಡ್ ನಿಂದಲೋ, ಬೇರೆ ಯಾವುದೋ ಕಾರಣಕ್ಕೆ ಉದ್ಯೋಗ (Job) ಕಳೆದುಕೊಂಡು ರಾಪಿಡೋ ಸವಾರರಾಗಿದ್ದರೆ ಅನಿವಾರ್ಯತೆಯ ಹಣೆಪಟ್ಟಿ ಇರುತ್ತಿತ್ತು. ಆದರೆ, ಆತ ನಿಜಕ್ಕೂ ಮಾದರಿ ವ್ಯಕ್ತಿ. ಕೈಗೆಟುಕುವ ದರದಲ್ಲಿ ಬೆಂಗಳೂರಿನ ಜನರನ್ನು ನಿಗದಿತ ಸ್ಥಳಕ್ಕೆ ಕರೆದೊಯ್ಯಲು ಸಹಾಯ (Help) ಮಾಡುವ ಉದ್ದೇಶದಿಂದ ಅವರು ರಾಪಿಡೋ ಬೈಕ್ ಚಾಲಕರಾಗಿ ಪರಿವರ್ತಿತಗೊಂಡಿದ್ದರು! ಆತ ಪ್ರಮುಖ ಕಾರ್ಪೋರೇಟ್ ಕಂಪೆನಿಯಲ್ಲಿ (Company) ಕೆಲಸದಲ್ಲಿದ್ದರು ಎನ್ನುವುದು ಇನ್ನೂ ಅಚ್ಚರಿದಾಯಕ ಸಂಗತಿ.

Leave A Reply

Your email address will not be published.