Hijab: ಹಿಜಾಬ್‌ ವಿರುದ್ಧ ಕೇಸರಿ ಶಾಲು ಕಣಕ್ಕೆ-ವಿಶ್ವ ಹಿಂದೂ ಪರಿಷತ್‌ ಎಚ್ಚರಿಕೆ!!!

Vishwa Hindu Parishad: ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮತ್ತೆ ಹಿಜಾಬ್‌ ಧರಿಸಲು ಕಾಂಗ್ರೆಸ್‌ ಸರಕಾರ ಅವಕಾಶ ನೀಡಿದರೆ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತಾರೆ ಎಂದು ವಿಶ್ವ ಹಿಂದೂ ಪರಿಷತ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಮೆಂಡನ್‌ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

 

ಹಿಜಾಬ್‌ ನಿಷೇಧ ವಾಪಸ್‌ ಪಡೆಯುವುದಾಗಿ ಹೇಳಿದ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಸಮಾನತೆ ಇರಬೇಕೆಂಬ ದೃಷ್ಟಿಯಲ್ಲಿ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ಬರುವುದು ಶಿಕ್ಷಣಕ್ಕೆ. ಇಲ್ಲಿ ಧರ್ಮ ತರಬೇಡಿ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹ ಮಾಡಿದ್ದಾರೆ. ಹಿಜಾಬ್‌ಗೆ ಅವಕಾಶ ಕೊಟ್ಟರೆ ಕೇಸರಿ ಶಾಲು, ಕೇಸರಿ ಪಂಚೆ ತೊಟ್ಟು ಹಿಂದೂ ವಿದ್ಯಾರ್ಥಿಗಳು ಬರುತ್ತಾರೆ. ಕೇಸರಿ ಬಟ್ಟೆಗೂ ತರಗತಿಯೊಳಗೆ ಅವಕಾಶ ನೀಡಬೇಕು ಎಂದು ಅವರು ಹೇಳಿದರು.

ಇದನ್ನು ಓದಿ: Demonetisation: ದೇಶಾದ್ಯಂತ 100 ರೂಪಾಯಿ ನೋಟು ನಿಷೇದ ?! RBI ನಿಂದ ಮಹತ್ವದ ಮಾಹಿತಿ

Leave A Reply

Your email address will not be published.