Dora-Bujji breakup: ಇನ್‌ಸ್ಟಾಗ್ರಾಮ್ ಅಲ್ಲಿ ಫೇಮಸ್ ಆದ ಮತ್ತೊಂದು ಜೋಡಿ ಬ್ರೇಕಪ್ – ಲಿವಿಂಗ್ ಟು ಗೆದರ್ನಲ್ಲಿದ್ದ ಇಬ್ಬರು ಹೆಂಗಳೆಯರು ದೂರಾದದ್ದೇಕೆ?

Dora-Bujji breakup: ಇನ್‌ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮೂಲಕ ಭಾರೀ ಫೇಮಸ್ ಆಗಿ, ಮಿಲಿಯನ್ ಗಟ್ಟಲೆ ಫಾಲೋವರ್ಸ್ ಪಡೆದು, ಲಿವಿಂಗ್ ಟು ಗೆದರ್ನಲ್ಲಿದ್ದ ಡೋರಾ ಮತ್ತು ದೇಸರಾಣಿ ಎಂಬ ಇಬ್ಬರು ಮಹಿಳೆಯರು ಇದೀಗ ದೂರಾಗಿದ್ದಾರೆ.

 

 

ಹೌದು, ಕೆಲವು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಕ್ರಿಯೆಟ್ ಮಾಡಿದ್ದ, ಹಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ, ಕನ್ನಡಿಗರಾದ ವರ್ಷಾ ಕಾವೇರಿ ಮತ್ತು ವರುಣ್ ಆರಾಧ್ಯ ಇಬ್ಬರ ಸಂಬಂಧದಲ್ಲಿ ಇದೀಗ ಬಿರುಕು ಮೂಡಿದ್ದು, ಬ್ರೇಕಪ್ ಮಾಡಿಕೊಂಡು ಸಾಕಷ್ಟು ಸುದ್ಧಿಯಾಗಿದ್ರು. ಅಂತೆಯೇ ಇದೀಗ ಮತ್ತೊಂದು ಫೇಮಸ್ ಜೋಡಿಯಾದ, ಇಬ್ಬರೂ ಹೆಂಗಳೆಯರೇ ಆದ ಡೋರಾ ಪುಜ್ಜಿ(Dora-Bujji breakup) ಎಂದೇ ಖ್ಯಾತಿ ಗಳಿಸಿದ ಡೋರಾ ಮತ್ತು ದೇಸರಾಣಿ ದೂರವಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

 

ಅಂದಹಾಗೆ ಕೆಲ ದಿನಗಳ ಹಿಂದೆ ಡೋರಾ ವಿರುದ್ಧ ಹಲವು ಆರೋಪಗಳನ್ನು ಮಾಡಿ ಕಣ್ಣೀರು ಹಾಕಿದ್ದರು. ಇದೀಗ ಕೆಲ ದಿನಗಳ ಹಿಂದೆ ಪುಜ್ಜಿ ಉರ್ಫ್ ದೇಸಾರಾಣಿ ಕಣ್ಣೀರು ಹಾಕುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮೊದಲ ಬಾರಿಗೆ ಡೋರಾ ಅದಕ್ಕೆ ಉತ್ತರ ಕೊಟ್ಟಿದ್ದು, ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಇದನ್ನು ಓದಿ: Gruhalakshmi scheme : ರಾಜ್ಯದ ಎಲ್ಲಾ ‘ಗೃಹಲಕ್ಷ್ಮೀ’ಯರಿಗೆ ಬಂತು ಹೊಸ ರೂಲ್ಸ್ ‘- ಇನ್ಮಂದೆ ಹಣ ಪಡೆಯಲು ಈ ಪಿಂಕ್ ಕಾರ್ಡ್ ಕಡ್ಡಾಯ, ಎಲ್ಲಿ ಸಿಗುತ್ತೆ ಈ ಕಾರ್ಡ್?!

ದೇಸರಾಣಿ ಮಾಡಿದ ವಿಡಿಯೋದಲ್ಲಿ ಏನಿದೆ?

ನಾನು ಹರಿಯನ್ನು ನಂಬಿದ್ದೆ. ಅವಳು ನನ್ನನ್ನು ಕೈಬಿಡುವುದಿಲ್ಲ ಎಂದುಕೊಂಡಿದ್ದೆ. ಆದರೆ ಡೋರಾ ನನಗೆ ಮೋಸ ಮಾಡಿದ್ದಾಳೆ. ನನಗೆ ಗೊತ್ತಿಲ್ಲದೆ ಅನೇಕ ತರದಲ್ಲಿ ಮೋಸದ ಕೆಲಸಗಳನ್ನು ಮಾಡಿದ್ದಾಳೆ. ತಾನು ನಡೆಸುತ್ತಿದ್ದ ವಾಹಿನಿಯ ಪ್ರಚಾರಕ್ಕಾಗಿ ಸಾಕಷ್ಟು ಹಣ ಕೊಡುತ್ತಿದ್ದೆ. ಬಂದ ಹಣವನ್ನೆಲ್ಲ ನೋಡಿಕೊಳ್ಳುವಂತೆ ಹೇಳಿದ್ದಳು. ಆದರೆ ಡೋರಾ ತನಗೆ ಬರುವ ಹಣಕ್ಕೆ ಸರಿಯಾಗಿ ಲೆಕ್ಕ ಕೊಡದೆ ಮೋಸ ಮಾಡಿರುವುದು ನನ್ನ ಬ್ಯಾಂಕ್ ಖಾತೆಯನ್ನು ನೋಡಿದಾಗ ತಿಳಿಯಿತು. ಅಲ್ಲದೆ ಇತ್ತೀಚೆಗಷ್ಟೇ ತನ್ನ ತಾಯಿಗೆ ಕಾರು ಕೊಡಿಸುವುದಾಗಿ ಹೇಳಿ 5 ಲಕ್ಷ ಪಡೆದಿದ್ದು, ಅದರಲ್ಲಿ 3 ಲಕ್ಷ ಮಾತ್ರ ಕಾರಿಗೆ ನೀಡಿದ್ದಾಳೆ. ವಿಡಿಯೋದಲ್ಲಿ ನನ್ನ ಮೊಬೈಲ್ ನಂಬರ್ ನೀಡಿ ಅಪಪ್ರಚಾರ ಮಾಡಲಾಗಿದೆ ಎಂದು ಹೇಳಿದ್ದಾಳೆ.

 

ಡೋರೃ ಮಾಡಿದ ವಿಡಿಯೋದಲ್ಲಿ ಏನಿದೆ?

ಕೆಲವು ದಿನಗಳ ನಂತರ, ಡೋರಾ ವಿವರಣೆಯನ್ನು ನೀಡಿದ್ದಾಳೆ. ಪೂಜಿ ತುಂಬಾ ಒಳ್ಳೆಯ ಹುಡುಗಿ. ಅವಳಿಗೆ ಈಗ ನನ್ನ ಮೇಲೆ ಕೋಪ ಬಂದಿದ್ದು, ಅದಕ್ಕೇ ಹೀಗೆ ಮಾತಾಡ್ತಾ ಇದ್ದಾಳೆ? ಗೊತ್ತಿಲ್ಲ. ನಾನು ಡ್ರಗ್ಸ್ ಬಳಸುತ್ತೇನೆ ಎಂದು ಹೇಳಿದ್ದಾಳೆ. ಆದರೆ ನಾನು ಯಾವತ್ತೂ ತೆಗೆದುಕೊಂಡಿಲ್ಲ. ನಾನು ಐದು ವರ್ಷಗಳ ಕಾಲ ಅವಳೊಂದಿಗೆ ಇದ್ದೆ. ಅವಳು ಯಾವಾಗಲೂ ನನ್ನನ್ನು ಬೆಂಬಲಿಸುತ್ತಾಳೆ. ಸಣ್ಣದೊಂದು ತಪ್ಪು ತಿಳುವಳಿಕೆ ಜಗಳ ನಡೆದಿದೆ, ಈಗ ನಾವು ಮಾಡುತ್ತಿರುವ ಜಗಳವೇ ನಮ್ಮ ಬ್ರೇಕ್ ಅಪ್ ಗೆ ಕಾರಣ ಎಂದು ಹೇಳಲಾಗದು ಎಂದಿದ್ದಾಳೆ.

Leave A Reply

Your email address will not be published.