Mahindra Thar: ಥಾರ್ ಗೆ ಕೇವಲ 700 ರೂಪಾಯಿ ಎಂದ ಮುಗ್ದ ಬಾಲಕನ ಮಾತಿಗೆ ಮನಸೋತ ಆನಂದ್ ಮಹೀಂದ್: ವೀಡಿಯೋ ವೈರಲ್!!

Share the Article

 

Mahindra Thar : ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ(Anand Mahindra) ಅವರು ತೆರೆಮರೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡ ಜನರನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವ ಹವ್ಯಾಸ ರೂಡಿಸಿಕೊಂಡಿದ್ದಾರೆ. ಇದೀಗ ಆನಂದ್ ಮಹೀಂದ್ರ (Anand Mahindra)ಅವರು ವಿಡಿಯೊವೊಂದನ್ನು ಹಂಚಿಕೊಂಡಿದ್ದು ಈ ವೀಡಿಯೋದ ಪ್ರತಿಕ್ರಿಯೆಯೊಂದು ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮಹೀಂದ್ರಾ ಕಂಪನಿಯ ಥಾರ್ (Mahindra Thar) ಕಾರನ್ನು ಕೇವಲ 700 ರೂ.ಗೆ ಖರೀದಿ ಮಾಡಬಹುದು ಎಂದು ಹೇಳುವ ಪುಟ್ಟ ಹುಡುಗನ ಮುದ್ದಾದ ವೀಡಿಯೊವನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ನೋಯ್ಡಾ ಮೂಲದ ಚೀಕು ಯಾದವ್ ಎಂಬ ಮಗು ತನ್ನ ತಂದೆಯೊಂದಿಗೆ ಸಂಭಾಷಣೆ ನಡೆಸಿದ್ದು, ಸದ್ಯ ವೈರಲ್ ಆಗಿದೆ. 1 ನಿಮಿಷ 29 ಸೆಕೆಂಡುಗಳ ವೀಡಿಯೊದಲ್ಲಿ ಬಾಲಕ ಮಹೀಂದ್ರಾ ಥಾರ್ ಖರೀದಿ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾನೆ. ಮಹೀಂದ್ರಾ ಕಾರುಗಳಾದ ಥಾರ್ ಮತ್ತು ಎಕ್ಸ್ ಯುವಿ 700 ಒಂದೇ ಆಗಿದ್ದು, 700 ರೂಪಾಯಿಗೆ ಎರಡನ್ನೂ ಖರೀದಿ ಮಾಡಬಹುದು ಎಂದು ಮುಗ್ಧ ಬಾಲಕ ಹೇಳಿದ್ದಾನೆ.

ಮಗುವಿನ ತಪ್ಪು ಗ್ರಹಿಕೆ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ. ಆನಂದ್ ಮಹೀಂದ್ರ ಅವರು, ನನ್ನ ಸ್ನೇಹಿತ ಸೂನಿ ತಾರಾಪೊರೆವಾಲಾ ಇ ವಿಡಿಯೊವನ್ನು ನನಗೆ ಕಳುಹಿಸಿದರು. “ನನಗೆ ಚೀಕು ಅಂದ್ರೆ ಇಷ್ಟ. ಹೀಗಾಗಿ, ನಾನು ಅವರ ಕೆಲವು ಪೋಸ್ಟ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ (@cheekuthenoidakid) ನೋಡುತ್ತಿದ್ದೇನೆ. ಈಗಲೂ ಆತ ನನಗೆ ಇಷ್ಟ. ನನ್ನ ಒಂದೇ ಸಮಸ್ಯೆಯೆಂದ ನಾವು ಆತನ ಮಾತನ್ನು ಒಪ್ಪಿ ಥಾರ್ ಅನ್ನು 700 ರೂಪಾಯಿಗಳಿಗೆ ಮಾರಾಟ ಮಾಡಿದರೆ ನಾವು ಶೀಘ್ರದಲ್ಲೇ ದಿವಾಳಿಯಾಗುತ್ತೇವೆ” ಎಂದು ಆನಂದ್ ಬರೆದುಕೊಂಡಿದ್ದಾರೆ.

https://x.com/anandmahindra/status/1738825536573768170?s=20

ಇದನ್ನು ಓದಿ: Ram Mandir Inauguration: ರಾಮಮಂದಿರ ಉದ್ಘಾಟನೆಗೆ ಸೀತಾಮಾತೆಯ ತವರಾದ ನೇಪಾಳದಿಂದ ಉಡುಗೊರೆಗಳ ಸುರಿಮಳೆ! ಏನಿಲ್ಲ ಬಂದಿದೆ ನೋಡಿ

 

Leave A Reply