Kota shrinvasa poojary: ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಮರು ನೇಮಕ!!
Kota shrinivasa poojary: ಕರಾವಳಿ ಭಾಗದ ಬಿಜೆಪಿ ಪ್ರಬಲ ನಾಯಕ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Shrinvasa poojary) ಅವರನ್ನು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಮಾಡಲಾಗಿದೆ. ಈ ಮೂಲಕ ಕೋಟ ಅವರು ಎರಡನೇ ಬಾರಿಗೆ ವಿಪಕ್ಷ ನಾಯಕನಾಗಿ ಮರು ಆಯ್ಕೆಯಾಗಿದ್ದಾರೆ.
ಹೌದು, ಕೆಲ ಸಮಯದ ಹಿಂದಷ್ಟೇ ಶಾಸಕ ಆರ್ ಅಶೋಕ್(R Ashok) ಅವರನ್ನು ವಿಧಾನಸಭೆಯ ವಿಪಕ್ಷ ನಾಯಕನಾಗಿ ಆಯ್ಕೆ ಬಿಜೆಪಿ ಆಯ್ಕೆ ಮಾಡಿತ್ತು. ಇದೀಗ ಈ ಬೆನ್ನಲ್ಲೇ ಖಾಲಿ ಇದ್ದ ವಿಧಾನ ಪರಿಷತ್ತಿನ(Vidhhana parishath) ವಿಪಕ್ಷ ನಾಯಕ ಸ್ಥಾನಕ್ಕೆ ಉಡುಪಿ ಮೂಲದ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ನೇಮಕಮಾಡಲಾಗಿದೆ.
ಅಂದಹಾಗೆ ರವಿ ಕುಮಾರ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಡುವೆ ವಿಧಾನಪರಿಷತ್ ವಿಪಕ್ಷ ಸ್ಥಾನಕ್ಕೆ ಪೈಪೋಟಿ ಇತ್ತು. ಆದರೆ ಕಳೆದ ಬಾರಿ ವಿಧಾನ ಪರಿಷತ್ ವಿಪಕ್ಷ ಸ್ಥಾನವನ್ನು ಚೆನ್ನಾಗಿ ನಿಭಾಯಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರಿಗೇ ಪಕ್ಷ ಮಣೆ ಹಾಕಿದೆ. ಹೀಗಾಗಿ ಮರು ನೇಮಕವಾದ ಕೋಟಾ ಬಿಜೆಪಿಯ ಹಿರಿಯ ನಾಯಕರಾಗಿದ್ದು, ಸರಕಾರದ ವಿವಿಧ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. 2009 ರಲ್ಲಿ, ಅವರು ಮೊದಲ ಬಾರಿಗೆ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಹಲವು ಕಾರ್ಯಗಳನ್ನು ಮಾಡಿದ್ದಾರೆ.
ಇದರೊಂದಿಗೆ ವಿರೋಧ ಪಕ್ಷದ ಉಪನಾಯಕರಾಗಿ ಸುನೀಲ್ ವಲ್ಯಾಪುರೆ ಹಾಗೂ ಮುಖ್ಯ ಸಚೇತಕರಾಗಿ ಎನ್.ರವಿಕುಮಾರ್ ನೇಮಕ ಮಾಡಲಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾಗಿ ಅರವಿಂದ್ ಬೆಲ್ಲದ್, ಮುಖ್ಯ ಸಚೇತಕರಾಗಿ ದೊಡ್ಡನಗೌಡ ಜಿ ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.