Rukmini Vasanth: ಕ್ರಿಸ್​ಮಸ್​ ವಿಶ್​ ಮಾಡುತ್ತಾ ಮೊಸರನ್ನ ತಿಂದ ಪುಟ್ಟಿ! ಕ್ಯೂಟ್​ ಫೋಟೋಸ್​ ಎಂದ ಫ್ಯಾನ್ಸ್​

Actress Rukmini Vasanth: ಎಲ್ಲೆಡೆ ಕ್ರಿಸ್​ಮಸ್​ ಹಬ್ಬದ ಸೆಲೆಬ್ರೇಷನ್​ ಗಮ್ಮತ್ತು. ಕೇವಲ ಕ್ರಿಶ್ಚಿಯನ್​ ಧರ್ಮದವರು ಮಾತ್ರವಲ್ಲದೇ ಎಲ್ಲರೂ ಈ ಹಬ್ಬವನ್ನು ಅತ್ಯಂತ ಮೋಜು, ಮಸ್ತಿನಿಂದ ಸೆಲೆಬ್ರೇಟ್​ ಮಾಡ್ತಾರೆ. ಕ್ರಿಸ್​ಮಸ್​ ತಾತ ರೀತಿ ಡ್ರೆಸ್ ಹಾಕಿಕೊಂಡು ವಿಶ್​ ಮಾಡುತ್ತಾ, ಸೀಕ್ರೇಟ್​ ಸಂತವೆಂಬ ಗೇಮ್​ ಆಡುತ್ತಾ ಗಮ್ಮತ್ ಮಾಡ್ತಾರೆ.

 

ಇದರ ನಡುವೆ ಹಲವಾರು ಸಿನಿ ಸೆಲೆಬ್ರಿಟಿಗಳು ಕೂಡ ಕ್ರಿಸ್​ಮಸ್​ ಟೋಪಿ ಧರಿಸಿ ಫೋಟೋಗೆ ಫೋಸ್​ ಕೊಟ್ಟಿದ್ದಾರೆ. ಇದರಲ್ಲಿ ರುಕ್ಮಿಣಿ ವಸಂತ್​ ಕೂಡ ಒಬ್ಬರು. ಎಸ್​, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಿಂದ ಸಖತ್​ ಪಾಪ್ಯುಲರ್​ ಆದ ರುಕ್ಮಿಣಿ ವಸಂತ ತನ್ನ ಕ್ಯೂಟ್​ ನಗುವಿನಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ ಅಂತಲೇ ಹೇಳಬಹುದು.

ಇದೀಗ ಕ್ರಿಸ್​ಮಸ್​ ಟೋಪಿ ಹಾಕಿಕೊಂಡು, ಕ್ರಿಸ್​ಮಸ್​ ಟ್ರೀ ಪಕ್ಕಾ ಹಸಿರು ಬಣ್ಣದ ಸೀರೆ ಉಟ್ಟು ಮೊಸರನ್ನ ತಿನ್ನುತ್ತಾ ಫೋಟೋಕೆ ಫೋಸ್​ ಕೊಟ್ಟಿದ್ದಾರೆ. ತನ್ನ Instagram ಖಾತೆಯಲ್ಲಿಯೂ ‘Merry Christmas from me and my plate of mosranna’ ಎಂದು caption ಕೂಡ ಹಾಕಿಕೊಂಡಿರುತ್ತಾರೆ.

Leave A Reply

Your email address will not be published.