Crime News: ಬೆಂಗಳೂರಿನಲ್ಲಿ ಮತ್ತೊಂದು ದುರ್ಘಟನೆ, ಗ್ಯಾಸ್ ಗೀಸರ್​ಗೆ ಬಲಿಯಾದ ಯುವತಿ!

Share the Article

ಬೆಂಗಳೂರಿನಲ್ಲಿ ಮತ್ತೊಂದು ದುರ್ಘಟನೆಯಾಗಿದೆ. ಗ್ಯಾಸ್ ಗೀಸರ್ ಗೆ ಬಲಿಯಾದ ಯುವತಿ! ಎಸ್​, ಈ ಹಿಂದೆ ಇದೇ ರೀತಿಯ ಘಟನೆಯೊಂದು ನಡೆದಿತ್ತು. ತಾಯಿ ಸಾವಾಗಿದ್ದು, ಮಗ ಅಸ್ವಸ್ಥಗೊಂಡಿದ್ದ ಘಟನೆ ಸದಾಶಿವನಗರದ ಮನೆಯಲ್ಲಿ ಅವಘಡವಾಗಿತ್ತು. ಇದೀಗ ಇಂತದ್ದೇ ಒಂದು ಘಟನೆ ಸಂಭವಿಸಿದೆ.

ಈಕೆಯ ಹೆಸರು ರಾಜೇಶ್ವರಿ ವಯಸ್ಸು 23. ಕಾಮಾಕ್ಷಿಪಾಳ್ಯ ಮೀನಾಕ್ಷಿ ನಗರದಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಯುವತಿ ಅಣ್ಣನ ವಿವಾಹ ಹಿನ್ನೆಲೆ ರಜೆ ಹಾಕಿದ್ದರು.

ಇದನ್ನು ಓದಿ: Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೇಗೆ ಹೂಡಿಕೆ ಮಾಡಬಹುದು? ಎಷ್ಟು ಬಡ್ಡಿ ಸಿಗಲಿದೆ ಗೊತ್ತಾ?

ನಂತರ ಸ್ನಾನ ಮಾಡಲು ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗ್ಯಾಸ್ ಗೀಸರ್ ನಿಂದ ಸೋರಿಕೆಯಾದ ವಿಷ ಅನಿಲದಿಂದ ಪ್ರಜ್ಞೆತಪ್ಪಿ ಬಿದ್ದಿದ್ದಾರೆ ಈ ಯುವತಿ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಕುಟುಂಬಸ್ಥರು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply