Punjalkatte: ಹಣ ದುಪ್ಪಟ್ಟು ಆಪ್‌ನಿಂದ ಮೋಸ ಹೋದ ಮಹಿಳೆ; ನದಿಗೆ ಹಾರಿ ಆತ್ಮಹತ್ಯೆ!!

Share the Article

Punjalkatte: ಬಂಟ್ವಾಳ ತಾಲೂಕಿನ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಬಳಿ ಫಲ್ಗುಣಿ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಕ್ಕಿಪಾಡಿ ಗ್ರಾಮದ ಏರೋಡಿ ನಿವಾಸಿ ಜಾನ್‌ ಸಂತೋಷ್‌ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜಾ (32) ಎಂಬುವವರೇ ಆತ್ಮಹತ್ಯೆಗೈದ ಮಹಿಳೆ.

ಇವರು ಇತ್ತೀಚೆಗಷ್ಟೇ ಹಣ ದುಪ್ಪಟ್ಟುಗೊಳಿಸುವ ಆಪ್‌ವೊಂದರಲ್ಲಿ 21 ಲಕ್ಷ ರೂ. ಮೊತ್ತದ ಹಣ ಕಳೆದುಕೊಂಡಿರುವ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರೊಂದನ್ನು ನೀಡಿದ್ದರು. ಇವರು ಶಿಕ್ಷಕಿ ವೃತ್ತಿ ಮಾಡಿಕೊಂಡಿದ್ದು, ನಂತರ ವಿಮಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು. ಇವರಿಗೆ ಮಕ್ಕಳಿರಲಿಲ್ಲ. ಜೊತೆಗೆ ಆರ್ಥಿಕ ಸಂಕಷ್ಟದಿಂದ ಇವರು ಕೈಗೊಂಡ ದುಡುಕಿನ ನಿರ್ಧಾರದಿಂದ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply