Bed Room Tips: ತಿಂಗಳಿಗೆ ಎಷ್ಟು ಬಾರಿ ದೈಹಿಕ ಸಂಪರ್ಕ ಮಾಡುವುದು ಉತ್ತಮ?

Bed Room Tips: ಭಾರತೀಯರು ಲೈಂಗಿಕತೆಯ ಕುರಿತು ಮಾತನಾಡುವುದಿಲ್ಲ. ಈ ಬಗ್ಗೆ ಮಾತನಾಡಿದರೆ ಲೈಂಗಿಕ ಜ್ಞಾನವನ್ನು ಬೆಳೆಯುತ್ತದೆ ಜೊತೆಗೆ ಹಲವು ರೀತಿಯ ಪ್ರಯೋಜನ ಕೂಡಾ ದೊರಕುತ್ತದೆ. ಇತ್ತೀಚೆಗೆ ಶಾಲಾ ಜೀವನದಲ್ಲಿಯೇ ಲೈಂಗಿಕ ಶಿಕ್ಷಣದ ಬಗ್ಗೆ ಶಾಲಾ ದಿನಗಳಲ್ಲಿಯೇ ಸ್ವಲ್ಪಮಟ್ಟಿನ ಕಲಿಸುವ ಶಿಫಾರಸು ಮಾಡಲಾಗುತ್ತಿದೆ.

ಲೈಂಗಿಕತೆಯು ಗಂಡ, ಹೆಂಡತಿ, ಪ್ರೇಮಿಗಳು ನಡುವಿನ ಸಂಬಂಧವನ್ನು ಹೆಚ್ಚಿಸುತ್ತದೆ. ಲೈಂಗಿಕ ಕ್ರಿಯೆ ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವುದಲ್ಲದೇ, ಇದು ಪ್ರಯೋಜನ ಸಹ ನೀಡುತ್ತದೆ. ರಕ್ತದೊತ್ತಡ ಕಡಿಮೆ, ಒತ್ತಡ ನಿವಾರಣೆ ಮುಂತಾದ ರೀತಿಯಲ್ಲಿ ಸಹಾಯವಾಗಿದೆ. ಉತ್ತಮ ನಿದ್ರೆ, ಆತ್ಮವಿಶ್ವಾಸ ದೊರಕುತ್ತದೆ.

ಜೀ ನ್ಯೂಸ್‌ ವರದಿ ಹೇಳಿರುವ ಪ್ರಕಾರ, ಲವ್‌ ರಿಲೇಷನ್‌ ಶಿಪ್‌ ಗೆ ಹೋಲಿಸಿದರೆ ವಿವಾಹಿತರು ಹೆಚ್ಚು ದಿನ ಲೈಂಗಿಕತೆಯಲ್ಲಿ ತೊಡಗುತ್ತಾರೆ. ಒಂದು ತಿಂಗಳಲ್ಲಿ ಎಷ್ಟು ಬಾರಿ ಲೈಂಗಿಕತೆ ಮಾಡಬಹುದು ಎಂಬುವುದಕ್ಕೆ ಯಾವುದೇ ಮಿತಿಯನ್ನು ನಿರ್ದಿಷ್ಟ ಪಡಿಸಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನಾವು ಯಾವಾಗ ಬೇಕಾದರೂ ಲೈಂಗಿಕತೆಯಲ್ಲಿ ತೊಡಗಬಹುದು.

ವೈದ್ಯರು ದೈಹಿಕ ಸಂಪರ್ಕ ವಾರಕ್ಕೊಮ್ಮೆ ಮಾಡಲು ಶಿಫಾರಸ್ಸು ಮಾಡುತ್ತಾರೆ ಎಂದು ವರದಿಯಾಗಿದೆ. ಇದು ಅನ್ಯೋನ್ಯತೆಯನ್ನು ಹೆಚ್ಚಿಸುವಲ್ಲಿ ಸುಲಭ ಮಾರ್ಗ ಎಂದು ಹೇಳಲಾಗಿದೆ. ಹಾಗೆನೇ ಅತಿಯಾದ ಲೈಂಗಿಕತೆ ಅಡ್ಡಪರಿಣಾಮವನ್ನು ಕೂಡಾ ಕೊಡುತ್ತದೆ. ಕೆಲವೊಮ್ಮೆ ಬೆನ್ನುನೋವು ಕೂಡಾ ಕಾಡಬಹುದು. ಸ್ಖಲನ ಸಮಸ್ಯೆ ಕಾಡಬಹುದು ಪುರುಷರಿಗೆ. ಮಹಿಳೆಯರು ಪರಾಕಾಷ್ಠೆ ತಲುಪುವುದಿಲ್ಲ, ಇವೆಲ್ಲ ಸಮಸ್ಯೆ ಕಾಡಬಹುದು.

( ಈ ವರದಿ ಅಂತರ್ಜಾಲದಿಂದ ದೊರೆತ ಮಾಹಿತಿಯಿಂದ ಆಧಾರಿತವಾಗಿದೆ. ಇದಕ್ಕೂ ಹೊಸಕನ್ನಡಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಹೊಸಕನ್ನಡ ಇದಕ್ಕೆ ಜವಾಬ್ದಾರಿಯಲ್ಲ)

ಇದನ್ನು ಓದಿ: New Year Guidelines: ಮಂಗಳೂರಿಗರೇ ಇತ್ತ ಗಮನಿಸಿ, ಹೊಸ ವರ್ಷಾಚರಣೆ ಸಂಭ್ರಮ; ಮಾರ್ಗಸೂಚಿ ಬಿಡುಗಡೆ!!

Leave A Reply

Your email address will not be published.