Karnataka government: ಸರ್ಕಾರದ ಬೊಕ್ಕಸ ಖಾಲಿ- ಹಣವಿಲ್ಲದೆ ಮಹಿಳೆಯರಿಗಾಗಿ ಜಾರಿಗೊಳಿಸಿದ ಈ ಯೋಜನೆ ನಿಲ್ಲಿಸಲು ಮುಂದಾದ ಸರ್ಕಾರ !!
Karnataka government: ರಾಜ್ಯದ ಮಹಿಳೆಯರಿಗೆ ದೊಡ್ಡ ಆಘಾತವೊಂದು ಎದುರಾಗಿದ್ದು, ತನ್ನ ಬಳಿ ಹಣ, ಅನುದಾನದ ಕೊರತೆಯಿಂದ ರಾಜ್ಯ ಸರ್ಕಾರವು(Karnataka government)ಮಹಿಳೆಯರಿಗಾಗಿಯೇ ಜಾರಿಗೊಳಿಸಿದ ಈ ಪ್ರಮುಖ ಯೋಜನೆಯನ್ನು ನಿಲ್ಲಿಸಲು ತೀರ್ಮಾನಿಸಿದೆ.
ಹೌದು, ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿ, ಎಲ್ಲವನ್ನೂ ಉಚಿತ ನೀಡಿ ಇದೀಗ ತನ್ನ ಬೊಕ್ಕಸವನ್ನು ಖಾಲಿ ಮಾಡಿಕೊಂಡಿದೆ. ಹೀಗಾಗಿ ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡಲಾಗುತ್ತಿಲ್ಲ. ಈ ಬೆನ್ನಲ್ಲೇ ಅನುದಾನ ಖಾಲಿಯಾಗಿದ್ದಕ್ಕೆ ಮೂರು ವರ್ಷಗಳಿಂದ ಜಾರಿಯಲ್ಲಿದ್ದ ಮಹಿಳಾ ಪರ ಯೋಜನೆಯಾದ ಸೇಫ್ ಸಿಟಿ ಪ್ರಾಜೆಕ್ಟ್ (Safe City Project) ಆಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವುಮೆನ್ ಹೆಲ್ಪ್ ಡೆಸ್ಕ್ (Women Help Desk) ಸಿಬ್ಬಂದಿಯ ತೆರವಿಗೆ ಸಿದ್ದರಾಮಯ್ಯ ಸರ್ಕಾರ (Siddaramaiah Government) ಸೂಚಿಸಿದೆ.
ಏನಿದು ಮಹಿಳಾ ಹೆಲ್ಪ್ ಡೆಸ್ಕ್ ಯೋಜನೆ?
ಪ್ರತಿಯೊಂದು ಠಾಣೆಗಳಲ್ಲಿ ಸ್ವಾಗತ ವಿಭಾಗದಲ್ಲಿ ತರಬೇತಿ ಪಡೆದ ಮಹಿಳಾ ಸಮಾಲೋಚಕಿಯರನ್ನು ಮಹಿಳಾ ಹೆಲ್ಪ್ ಡೆಸ್ಕ್‌ನಲ್ಲಿ ಅಂದರೆ 2021ರಿಂದ 2023ರವರೆಗೆ ಮೂರು ವರ್ಷದವರೆಗೆ ನಿಯೋಜಿಸಲಾಗಿತ್ತು. ಡಿಸೆಂಬರ್ 31ರಂದು ಮೂರು ವರ್ಷದ ಅವಧಿ ಮುಗಿಯಲಿದೆ. ಮೂರು ವರ್ಷಗಳಿಗೆ ಮಾತ್ರ ಅನುದಾನ ಮೀಸಲಿಡಲಾಗಿತ್ತು
ಇದನ್ನು ಓದಿ: RSS – Caste Census: ಜಾತಿ ಗಣತಿ ಕುರಿತು RSS ನಿಂದ ಮಹತ್ವದ ಸ್ಟೇಟ್ಮೆಂಟ್ !!
ಮಹಿಳಾ ದೂರುದಾರರು ಹಾಗೂ ಪೊಲೀಸರು ನಡುವೆ ಕೊಂಡಿಯಾಗಿದ್ದ 250 ಮಹಿಳಾ ಸಮಾಲೋಚಕಿಯರನ್ನು ಮುಂದಿನ ಜನವರಿ 1ರಿಂದ ಕರ್ತವ್ಯಕ್ಕೆ ಹಾಜರಾಗದಂತೆ ನಗರ ಪೊಲೀಸ್ ಇಲಾಖೆಯಿಂದ ಸುತ್ತೋಲೆ ಕಳುಹಿಸಲಾಗಿದ್ದು, ಪೊಲೀಸ್ ಠಾಣೆಗಳಿಗೆ ಹೆಲ್ಪ್ ಡೆಸ್ಕ್ ಸಿಬ್ಬಂದಿಯನ್ನು ಡಿ.31ಕ್ಕೆ ಬಿಡುಗಡೆ ಮಾಡುವಂತೆ ಅದೇಶಿಸಿದೆ.
ಕರ್ನಾಟಕ ರಾಜ್ಯ ಖಾಲಿ ಇದೆ ಅದನ್ನ ಮಾರಿ ನಿಮ್ಮ ಬೊಕ್ಕಸ ತುಂಬಿಸಿಕೊಳ್ಳಿ