Home Karnataka State Politics Updates Udyogini Loan Scheme: ರಾಜ್ಯದ ಮಹಿಳೆಯರಿಗೆ ಸಿಗಲಿದೆ 3ಲಕ್ಷ ಸಾಲ, 1ರೂ ಕೂಡ ಬಡ್ಡಿ...

Udyogini Loan Scheme: ರಾಜ್ಯದ ಮಹಿಳೆಯರಿಗೆ ಸಿಗಲಿದೆ 3ಲಕ್ಷ ಸಾಲ, 1ರೂ ಕೂಡ ಬಡ್ಡಿ ಇಲ್ಲ !! ಸರ್ಕಾರದ ಹೊಸ ಘೋಷಣೆ

Udyogini Loan Scheme

Hindu neighbor gifts plot of land

Hindu neighbour gifts land to Muslim journalist

Udyogini Loan Scheme: 2023-24ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುವ ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಮಹಿಳಾ ಉದ್ಯಮಿಗಳಿಗೆ Subsidy Loan ನೀಡುವ ಯೋಜನೆಯಾಗಿದೆ. ಈ ಯೋಜನೆಯು ಮಹಿಳೆಯರಿಗೆ ವ್ಯಾಪಾರ ಮಾಡಲು ಹಣಕಾಸಿನ ನೆರವು ನೀಡುವ ಮೂಲಕ ಬಡವರಲ್ಲಿ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರೇರೇಪಿಸುತ್ತದೆ.

ಇದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳಿಂದ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳ ಮೂಲಕ ವ್ಯಾಪಾರ ಚಟುವಟಿಕೆಗಳ/ ಸಣ್ಣ ಉದ್ದಿಮೆಗಳನ್ನ ಕೈಗೊಳ್ಳಲು ಸಾಲದ ಮೇಲೆ ಸಹಾಯಧನವನ್ನು ಒದಗಿಸುತ್ತದೆ. Private ಬ್ಯಾಂಕ್ ಗಳು, ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಮತ್ತು ಪ್ರದೇಶಿಕ ಗ್ರಾಮೀಣ ಬ್ಯಾಂಕ್ ಗಳು (RRBs) ನಂತಹ ಹಣಕಾಸು ಸಂಸ್ಥೆಯ ಮೂಲಕ ಸಾಲವನ್ನು ತೆಗೆದುಕೊಳ್ಳಬಹುದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ:
ಆದಾಯ ಮಿತಿ : 2.00 ಲಕ್ಷ ರೂಪಾಯಿಗಳು
ಘಟಕ ವೆಚ್ಚ : ಕನಿಷ್ಟ ರೂ 1.00 ಲಕ್ಷದಿಂದ ಗರಿಷ್ಟ ರೂ. 3.00 ರೂಪಾಯಿಗಳು
ಸಹಾಯಧನ ಶೇ. 50 ರಷ್ಟು

ಸಾಮಾನ್ಯ ವರ್ಗದ ( OBC ) ಫಲಾನುಭವಿಗಳಿಗೆ :
ಆದಾಯ ಮಿತಿ : 1.50 ಲಕ್ಷ ರೂಪಾಯಿಗಳು
ಘಟಕ ವೆಚ್ಚ : ಗರಿಷ್ಟ ರೂ. 3.00 ಲಕ್ಷ ರೂಪಾಯಿಗಳು

ಸಹಾಯಧನ: ಶೇ.30 ರಷ್ಟು

ಉದ್ಯೋಗಿನಿ ಯೋಜನೆಯಡಿ (Udyogini Loan Scheme) ಸಾಲಗಳಿಗೆ ಅರ್ಹತೆಯ ಮಾನದಂಡ:
ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕುಟುಂಬದ ಆದಾಯ ರೂ.1,50,000/- ಗಿಂತ ಕಡಿಮೆಯಿರಬೇಕು.
ವಯಸ್ಸಿನ ಮಿತಿ 18 ರಿಂದ 55 ವರ್ಷಗಳ ಮೀರಿರಬಾರದು. ಅರ್ಜಿದಾರರು ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೊಂದಿರುವರಾಗಿರ್ಬೇಕು.

ಅರ್ಜಿ ಸಲ್ಲಿಸಲು 2 passport size ಫೋಟೋ
ಆಧಾರ್ ಕಾರ್ಡ್(Aadhar Card)
ಜನ್ಮ ಪ್ರಮಾಣ ಪತ್ರ (Birth certificate)
BPL ರೇಷನ್ ಕಾರ್ಡ್ ಪ್ರತಿ
ಆದಾಯ ಪ್ರಮಾಣ ಪತ್ರ
ಜಾತಿ ದೃಢೀಕರಣ ಪ್ರಮಾಣಪತ್ರ
ಬ್ಯಾಂಕ್ ಪಾಸ್ ಬುಕ್ ದಾಖಲೆ ಬೇಕಾಗುತ್ತದೆ.

ಇದನ್ನು ಓದಿ: Rahul Gandhi: ರಾಹುಲ್ ಗಾಂಧಿ ಬಗ್ಗೆ ಭಾರೀ ದೊಡ್ಡ ಆರೋಪ ಮಾಡಿದ ಮಮತಾ ಬ್ಯಾನರ್ಜಿ- ದೋಸ್ತಿಗಳ ನಡುವೆಯೇ ಶುರುವಾಯ್ತ ಕಲಹ ?!

ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ : ನವಂಬರ್ 22, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 22, 2023.

ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ ಭೇಟಿ ಮಾಡಿ ಮಾಹಿತಿ ಪಡೆಯಬಹುದು.

ಮಹಿಳಾ ಅಭಿವೃದ್ಧಿ ನಿಗಮದ ಕಚೇರಿ ವಿಳಾಸ: 6ನೇ ಮಹಡಿ. ಜಯನಗರ ವಾಣಿಜ್ಯ ಸಂಕೀರ್ಣ. 4ನೇ ಬ್ಲಾಕ್, ಜಯನಗರ, ಬೆಂಗಳೂರು-560011
ದೂರವಾಣಿ ಸಂಖ್ಯೆ: 080-26632973/26542307