Udupi: ಪಿಯುಸಿ ವಿದ್ಯಾರ್ಥಿಗೆ ಹೃದಯಾಘಾತ, ಆಸ್ಪತ್ರೆ ಸಾಗಿಸುವ ಸಂದರ್ಭ ಸಾವು!

Udupi: ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. 17 ವರ್ಷದ ಅಫ್ಕಾರ್‌ ಹೃದಯಾಘಾತದಿಂದ ಮೃತ ಹೊಂದಿದ್ದು, ಉಡುಪಿಯಲ್ಲಿ ಈ ಘಟನೆ ನಡೆದಿದೆ.

 

ಕಲ್ಯಾಣಪುರ ಮಿಲಾಗ್ರಿಸ್‌ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ ಅಫ್ಕಾರ್‌, ಕಳೆದ ಡಿಸೆಂಬರ್‌ 6 ರಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದ. ಡಿ.18 ರಂದು ಆಸ್ಪತ್ರೆಯಿಂದ ಡಿಸ್ಟಾರ್ಜ್‌ ಆಗಿ ಮನೆಗೆ ಮರಳಿದ್ದ ಎನ್ನಲಾಗಿದೆ. ಆದರೆ ಮನೆಗೆ ಮರಳಿದ್ದ ಸಂದರ್ಭದಲ್ಲೇ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಫ್ಕಾರ್‌ ಮೃತಪಟ್ಟಿದ್ದಾನೆ.

ಅಫ್ಕಾರ್‌ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ ಎಂದು ವರದಿಯಾಗಿದೆ.

Leave A Reply

Your email address will not be published.