Bigg boss Telugu: ಬಿಗ್ ಬಾಸ್ ಗೆದ್ದು ಹೊರಬರುತ್ತಿದ್ದಂತೆ ಅರೆಸ್ಟ್ ಆದ ಆಟಗಾರ !!

Bigg boss Telugu: ಬಿಗ್ ಬಾಸ್ ತೆಲುಗು ಸೀಸನ್-7 ವಿನ್ನರ್ ಪಲ್ಲವಿ ಪ್ರಶಾಂತ್ ಅವರನ್ನು ಸೋಮವಾರ ರಾತ್ರಿ ಅನ್ನಪೂರ್ಣ ಸ್ಟುಡಿಯೋಸ್ ಬಳಿ ಶಾಂತಿ ಕದಡಿದ ಆರೋಪದ ಮೇಲೆ ತೆಲಂಗಾಣದ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

 

ಹೌದು, ಬಿಗ್ ಬಾಸ್ ತೆಲುಗು-7ರ(Bigg boss telugu) ವಿನ್ನರ್ ಆಗಿ ರೈತನ ಮಗ ಪಲ್ಲವಿ ಪ್ರಶಾಂತ್ ಹೊರಬರುತ್ತಿದ್ದಂತೆ ಬಿಗ್ ಶಾಕ್ ಎದುರಾಗಿತ್ತು. ವಿಧ್ವಂಸಕ ಕೃತ್ಯ ಹಾಗೂ ಅಶಾಂತಿಗೆ ಕಾರಣ ಆಗಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಹೈದರಾಬಾದ್ ನ ಜುಬಿಲಿ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ (Arrest). ಪಲ್ಲವಿ ಪ್ರಶಾಂತ್ ಅವರ ಜೊತೆಗೆ ಸಹೋದರ ಮನೋಹರ್ ಅವರನ್ನು ಕೂಡ ಬಂಧಿಸಲಾಗಿದ್ದು, ನ್ಯಾಯಾಲಯವು ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಅಂದಹಾಗೆ ಈ ಬಾರಿಯ ಬಿಗ್‌ಬಾಸ್‌ ತೆಲುಗು ಸೀಸನ್‌ 7ನಲ್ಲಿ ವಿಜೇತನಾಗಿ ಪಲ್ಲವಿ ಪ್ರಶಾಂತ್‌(Pallavi prashanth) ಹೊರಹೊಮ್ಮಿದ್ದರು. ಈ ಕುರಿತು ಘೋಷಣೆಯಾಗುತ್ತಿದ್ದಂತೆ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋ (ಬಿಗ್‌ಬಾಸ್‌ ನಡೆಯುತ್ತಿರುವ ಸ್ಥಳ) ಹೊರಗಡೆ ಜಗಳ, ಪುಂಡಾಟ ನಡೆದಿತ್ತು. ಈ ಸಂದರ್ಭದಲ್ಲಿ ಪಲ್ಲವಿ ಪ್ರಶಾಂತ್‌ ಹಿಂಬಾಲಕರು ಹಲವು ಆರ್‌ಟಿಸಿ ಬಸ್‌ಗಳು, ಖಾಸಗಿ ವಾಹನಗಳಿಗೆ ಹಾನಿ ಮಾಡಿದ್ದರು. ಅಲ್ಲದೇ, ಮತ್ತೊಬ್ಬ ಸ್ಪರ್ಧಿ ಅಶ್ವಿನಿ ಕಾರಿನ ಗಾಜುಗಳಿಗೂ ಹಾನಿಯಾಗಿತ್ತು. ಪಂಜಗುಟ್ಟಾ ಎಸಿಪಿ ಕಾರು, ಪೊಲೀಸ್ ಬಸ್​ ಹಾಗೂ ಐದಕ್ಕೂ ಹೆಚ್ಚು ಸಾರಿಗೆ ಬಸ್​ಗಳ ಗಾಜುಗಳನ್ನೂ ಒಡೆಯಲಾಗಿತ್ತು. ಮೆರವಣಿಗೆ ನಡೆಸುತ್ತಿದ್ದಂತೆ ಪೊಲೀಸರು ಪಲ್ಲವಿ ಪ್ರಶಾಂತ್ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಲೆಕ್ಕಿಸದೆ ಮೆರವಣಿಗೆ ಮಾಡಲಾಗಿತ್ತು. ಹೀಗಾಗಿ ಪೋಲೀಸರು ಬಂದಿಸಿದ್ದಾರೆ ಎನ್ನಲಾಗಿದೆ.

ಇನ್ನು ಪಲ್ಲವಿ ಪ್ರಶಾಂತ್ ಪರ ವಕೀಲರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಎಫ್‌ಐಆರ್ ಪ್ರತಿ ಪಡೆಯಲು ಠಾಣೆಗೆ ವಕೀಲರು ತೆರಳಿದ್ದರು. ಆದರೆ, ಎಫ್‌ಐಆರ್ ಪ್ರತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ ಎಂದು ವಕೀಲ ರಾಜ್​ಕುಮಾರ್ ಆರೋಪಿಸಿದ್ದಾರೆ.

Leave A Reply

Your email address will not be published.