Home latest Kalaburgi: ಲಾರಿ – ಜೀಪ್ ನಡುವೆ ಭೀಕರ ಅಪಘಾತ! 5 ವರ್ಷದ ಮಗು ಸೇರಿ...

Kalaburgi: ಲಾರಿ – ಜೀಪ್ ನಡುವೆ ಭೀಕರ ಅಪಘಾತ! 5 ವರ್ಷದ ಮಗು ಸೇರಿ ನಾಲ್ವರ ದುರ್ಮರಣ

Kalaburgi

Hindu neighbor gifts plot of land

Hindu neighbour gifts land to Muslim journalist

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೊರವಲಯದಲ್ಲಿ ಭೀಕರ ಅಪಘಾತ ವೊಂದು ನಡೆದಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೀಪು ಹಾಗೂ ಲಾರಿ ಡಿಕ್ಕಿಯಾದ ಕಾರಣ ಈ ಘಟನೆ ಸಂಭವಿಸಿದ್ದು, ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ಅಫಜಲಪುರ ತಾಲೂಕಿನ ಹೊರವಲಯದ ನೀರಾವರಿ ಕಚೇರಿ ಬಳಿ ತಡರಾತ್ರಿ ಕಲಬುರಗಿ ಕಡೆಯಿಂದ ಹೊರಟಿದ್ದ ಲಾರಿಗೆ ಜೀಪು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಮೃತಪಟ್ಟ ನಾಲ್ವರನ್ನು ಸಿದ್ದಮ್ಮ(50), ಶಂಕರ್ (55), ಹುಚ್ಚಪ್ಪ (5), ಸಂತೋಷ್ (40) ಎಂದು ಗುರುತಿಸಲಾಗಿದೆ. ಮೃತ ದುರ್ದೈವಿಗಳೆಲ್ಲರೂ ಅಫಜಲಪುರ ಮಾಡ್ಯಾಳ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನೆಯಲ್ಲಿ ಪೂಜಾ ದೊಡ್ಡಮನಿ (30) ಎಂಬವರು ಗಂಭೀರ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಗೆ ಕಲಬುರಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ: Malaika arora: ಸೀದಾ ಬಂದು ಮಲೈಕಾ ಅರೋರಾಳ ಆ ಜಾಗಕ್ಕೆ ಕೈ ಹಾಕಿದ ಅಭಿಮಾನಿ- ಏನೂ ಮಾಡದೆ ಸುಮ್ಮನೆ ನಿಂತ ನಟಿ !!

ರಾತ್ರಿಯ ವೇಳೆ ಮಾಡ್ಯಾಳ ಗ್ರಾಮದ ಮೃತ ಶಂಕರನ ಮಗಳು ಪೂಜಾ ದೊಡ್ಡಮನಿ ಹಾಗೂ ಆಕೆಯ ಗಂಡ ಮಹಾಂತೇಶ ದೊಡ್ಡಮನಿಯ ಜಗಳ ಉಂಟಾಗಿ, ಜಗಳದ ನಂತರ ಪೂಜಾ ಹಾಗೂ ಆಕೆಯ ಮನೆಯವರು 5 ವರ್ಷದ ಮಗುವನ್ನು ಕರೆದುಕೊಂಡು ತಡರಾತ್ರಿ ಇಂಡಿ ತಾಲೂಕಿನ ಸುರಗಿಹಳ್ಳಿ ಗ್ರಾಮದಿಂದ ಅಫಜಲಪುರಕ್ಕೆ ಬರುತ್ತಿದ್ದರು.

ಈ ಸಂದರ್ಭದಲ್ಲಿ ಅಫಜಲಪುರ ಕಡೆಯಿಂದ ಮಲ್ಲಾಬಾದ್ ಕಡೆ ಹೊರಟಿದ್ದ ಕಮಾಂಡೋ‌ ಜೀಪ್ ಕಲಬುರಗಿ ಕಡೆಯಿಂದ ಹೊರಟಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಹೀಗೆ ನಡೆದ ಅಪಘಾತವು ನಾಲ್ವರ ಸಾವಿಗೆ ಕಾರಣವಾಗಿದ್ದು, ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ.