KSRTC ಯಿಂದ ಮತ್ತೊಂದು ಗುಡ್ ನ್ಯೂಸ್- ನಿಮ್ಮ ಮನೆಗೇ ಬರುತ್ತೆ ಈ ಹೊಸ ಸೇವೆ !!

KSRTC: ಕರ್ನಾಟಕ ರಾಜ್ಯ ಸಾರಿಗೆ ನಿಗಮ( KSRTC) ಈಗಾಗಲೇ ಸಾರಿಗೆ ಬಸ್‌ಗಳಲ್ಲಿ ಕಾರ್ಗೋ ಸೇವೆ ನೀಡುತ್ತಿದ್ದು, ಇದೀಗ ಕರ್ನಾಟಕ ರಾಜ್ಯ ಸಾರಿಗೆ ನಿಗಮ ( ಕೆಎಸ್‌ಆರ್‌ಟಿಸಿ) ಟ್ರಕ್‌ಗೂ ಈ ಸೇವೆ ವಿಸ್ತರಿಸಿದೆ. ಹೌದು, ಕೆಲ ವರ್ಷದಿಂದ ಕರ್ನಾಟಕದ ಸಾರಿಗೆ ಬಸ್‌ಗಳು ಜನರ ಸೇವೆ ಜತೆಗೆ ಪಾರ್ಸೆಲ್‌ ಕೂಡ ಸಾಗಿಸುತ್ತಿದ್ದವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ನಂತರ ಕಾರ್ಗೊ ಸೇವೆಯನ್ನು ವಿಸ್ತರಿಸಲಾಗುತ್ತಿದೆ ಎನ್ನಲಾಗಿದೆ.

ಹೌದು, ಕೆಎಸ್‌ಆರ್‌ಟಿಸಿ ಕಾರ್ಗೋ ಸೇವೆ ಈಗ ಮತ್ತೊಂದು ರೂಪ ಪಡೆದುಕೊಳ್ಳುತ್ತಿದೆ. ಬಸ್‌ಗಳ ಜತೆಗೆ ನಮ್ಮ ಕಾರ್ಗೋ ಟ್ರಕ್‌ಗಳೂ ಸೇವೆ ನೀಡಲಿವೆ. ನಿಲ್ದಾಣದಿಂದ ನಿಗದಿತ ಸ್ಥಳಕ್ಕೆ ಪಾರ್ಸೆಲ್‌ ಸಾಗಿಸುವುದು ಉದ್ದೇಶ. ಇದರ ಪ್ರತಿಕ್ರಿಯೆ ನೋಡಿಕೊಂಡು ಕಾರ್ಗೊ ಟ್ರಕ್‌ ಸೇವೆಯನ್ನು ವಿಸ್ತರಿಸಲಾಗುತ್ತದೆ ಎನ್ನುವುದು ಕೆಎಸ್‌ಆರ್‌ಟಿಸಿ ಎಂಡಿ ವಿ.ಅನ್ಬುಕುಮಾರ್‌ ತಿಳಿಸಿದ್ದಾರೆ.

ಸಾರಿಗೆ ಬಸ್‌ಗಳಲ್ಲಿ ಯಾವುದೇ ಪಾರ್ಸೆಲ್‌ ನೀಡಿದ್ದರೆ ಅದನ್ನು ನಿಗದಿತ ಬಸ್‌ ನಿಲ್ದಾಣಕ್ಕೆ ಆಗಮಿಸಿಯೇ ಪಡೆಯಬೇಕಿತ್ತು. ಮನೆಗೆ ಇಲ್ಲವೇ ನಿಗದಿತ ವಿಳಾಸಕ್ಕೆ ತಲುಪಿಸುವ ವ್ಯವಸ್ಥೆ ಕೆಎಸ್‌ಆರ್‌ಟಿಸಿಯಲ್ಲಿ ಇರಲಿಲ್ಲ. ಸಿಬ್ಬಂದಿಗೂ ಇದು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಇದಕ್ಕೆ ಇನ್ನಷ್ಟು ವಿಸ್ತೃತ ರೂಪದೊಂದಿಗೆ ಸೇವೆ ನೀಡುವುದು ಕೆಎಸ್‌ಆರ್‌ಟಿಸಿ ಉದ್ದೇಶ ಆಗಿದೆ .
ಅದಲ್ಲದೆ ಬಸ್‌ನಲ್ಲಿರುವ ಸೇವೆಯೂ ಎಂದಿನಂತೆ ಮುಂದುವರಿಯಲಿದೆ. ಪ್ರತಿ ವರ್ಷ ನಮ್ಮ ಕಾರ್ಗೋ ಸೇವೆಯಿಂದಲೇ 100 ಕೋಟಿ ರೂ. ಆದಾಯ ಮಾಡುವ ಗುರಿಯನ್ನು ಕೆಎಸ್‌ಆರ್‌ಟಿಸಿ ಹೊಂದಿದೆ.

ಇದನ್ನು ಓದಿ: Government Job: ಸರ್ಕಾರಿ ನೌಕರಿ ಬೇಕಂದ್ರೆ ಇನ್ಮುಂದೆ ಈ ದಾಖಲೆ ಕಡ್ಡಾಯ !! ರಾಜ್ಯ ಸರಕಾರದ ಮಹತ್ವದ ಆದೇಶ

ಈಗಾಗಲೇ ಕೆಎಸ್‌ಆರ್‌ಟಿಸಿ, ಪುಣೆಯಲ್ಲಿ ಟಾಟಾ ಕಂಪೆನಿ ಮೂಲಕ ವಿಶೇಷ ವಿನ್ಯಾಸದ 20 ಕಾರ್ಗೊ ಟ್ರಕ್‌ ಗಳನ್ನು ಖರೀದಿ ಮಾಡಲಾಗಿದೆ. ಡಿ. 23ರಂದು ನಮ್ಮ ಕಾರ್ಗೊ ಟ್ರಕ್‌ ಸೇವೆ ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ಆರಂಭವಾಗಲಿದೆ. ಗುಣಮಟ್ಟದ ಈ ಟ್ರಕ್‌ಗಳು ಪಾರ್ಸೆಲ್‌ ಅನ್ನು ಸಾಗಿಸಲು ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಇವು ಆರು ಟನ್‌ ಪಾರ್ಸೆಲ್‌ ಸಾಗಣೆ ಮಾಡಲಿವೆ. ಈಗಾಗಲೇ ಈ ಟ್ರಕ್‌ಗಳ ವಿನ್ಯಾಸವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆಎಸ್‌ಆರ್‌ಟಿಸಿ ಎಂಡಿ ವಿ.ಅನ್ಬುಕುಮಾರ್‌ ಅವರು ಪರಿಶೀಲಿಸಿ ಖರೀದಿಗೂ ಅನುಮತಿ ನೀಡಿದ್ದಾರೆ.

Leave A Reply

Your email address will not be published.