Kadaba: ಕಡಬ ಒಕ್ಕಲಿಗ ಸಮುದಾಯ ಭವನಕ್ಕೆ ಶಿಲಾನ್ಯಾಸ ಚಪ್ಪರ ಮುಹೂರ್ತ; ಶ್ರೀ ಡಾ ಧರ್ಮಪಾಲನಾಥ ಸ್ವಾಮೀಜಿಯವರ ದಿವ್ಯಹಸ್ತದಿಂದ ಚಾಲನೆ

ಕಡಬ ಒಕ್ಕಲಿಗ ಸಮುದಾಯ ಭವನಕ್ಕೆ ಶಿಲಾನ್ಯಾಸ ಚಪ್ಪರ ಮುಹೂರ್ತ; ಶ್ರೀ ಡಾ ಧರ್ಮಪಾಲನಾಥ ಸ್ವಾಮೀಜಿಯವರ ದಿವ್ಯಹಸ್ತದಿಂದ ಚಾಲನೆKadaba: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಹೊಸ್ಮಠ ಎಂಬಲ್ಲಿ ನಿರ್ಮಾಣಗೊಳ್ಳಿರುವ ಒಕ್ಕಲಿಗ ಗೌಡ ಸಮೂದಾಯ ಭವನ ಶಿಲನ್ಯಾಸ ಮತ್ತು ತಾಲೂಕಿನ ನೂತನ ತಾಲೂಕು ಸಮಿತಿಯ ಪದಗ್ರಹಣ ಡಿ26 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸೋಮವಾರ ಚಪ್ಪರ ಮುಹೂರ್ತ ನಡೆಯಿತು.

 

 

ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ ಧರ್ಮಪಾಲನಾಥ ಸ್ವಾಮೀಜಿಯವರು ತಮ್ಮ ದಿವ್ಯ ಹಸ್ತದಿಂದ ಚಪ್ಪರ ಮುಹೂರ್ತ ನೆರವೇರಿಸಿದರು. ಒಕ್ಕಲಿಗ ಸೇವಾ ಸಂಘದ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಗೌಡ ಬೈಲು, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆ ಗುತ್ತು, ಸ್ಪಂದನಾ ಸಮೂದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಗೌಡ ಅಮೈ, ಸಂಘಟನಾ ಕಾರ್ಯದರ್ಶಿ ಶಿವರಾಮ ಏನೆಕಲ್, ಖಚಾಂಜಿ ಶಿವಪ್ರಸಾದ ಪುತ್ತಿಲ, ಉಪಾಧ್ಯಕ್ಷರಾದ ವೆಂಕಟ್ರಾಜ್ ಕೊಡಿಬೈಲು, ಧರ್ಮಪಾಲ ಗೌಡ ಕಣ್ಣಲ್‌, ನಿರ್ದೇಶಕರಾದ ಬಾಲಕೃಷ್ಣ ಗೌಡಕೋಲ್ಪೆ, ಚಂದ್ರಶೇಖರ ಕೋಡಿ ಬೈಲು, ಗಣೇಶ ಗೌಡ ಕೈಕುರೆ ವೆಂಕಟ್ರಮಣ ಪಾಂಗ ಉಪಸ್ಥಿತರಿದ್ದರು.

 

ಹಾಗೂ ಸರ್ವೋತ್ತಮ ಪಂಜೋಡಿ ಕಡಬ ತಾಲೂಕು ಯುವ ಸಮಿತಿ ಅಧ್ಯಕ್ಷ ಪೂರ್ಣೇಶ ಬಲ್ಯ, ಕಾರ್ಯದರ್ಶಿ ಜನಾರ್ದನ ಆರಿಗ, ತಾಲೂಕು ಮಹಿಳಾ ಸಂಘದ ವೀಣಾ ರಮೇಶ್, ಕಾರ್ಯದರ್ಶಿ ಲಾವಣ್ಯ ಹೇಮಂತ್, ಗೌರವಾಧ್ಯಕ್ಷೆ ನೀಲಾವತಿ ಶಿವರಾಮ,ಸಂಘಟನಾ ಕಾರ್ಯದರ್ಶಿ ಶಾರದಾ ಕೇಶವ್ ನಿರ್ದೇಶಕರಾದ ಹಿರಿಯಣ್ಣಗೌಡ ಅಮೈ, ಗೀತಾ ಕೇವಳ, ಸಭಾಂಗಣ ಮತ್ತು ವೇದಿಕೆ ಸಮಿತಿಯ ಸಂಚಾಲಕ ರಕ್ಷಿತ್ ಗೌಡ ಪುತ್ತಿಲ ಮೋನಪ್ಪ ಗೌಡ ನಾಡೋಳಿ, ದೇವಯ್ಯ ಪನ್ಯಾಡಿ, ರಂಜಿತ್ ಪದಕಂಡ, ಸಭಾಭವನದ ಆರ್ಕಿಟೆಕ್ಟ್ ಸುರೇಶ್ ಕುಮಾರ್ ಪಣೆಮಜಲು, ಮೆರವಣಿಗೆ ಸಮಿತಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿಯ ನಿರ್ದೇಶಕರಾದಂತಹ ಕಿರಣ್ ಹೊಸಳಿಕೆ,ಮಹೇಶ್ ನಡುತೋಟ,ಸುನಿಲ್ ಕೇರ್ನಡ್ಕ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.