Girish Mattannanavar: ನೀವು ಸಾವಿರವಲ್ಲ, ಲಕ್ಷ ಜನ ಬೇಕಾದ್ರೆ ಬನ್ನಿ, ನಾ ಒಬ್ನೇ ಬರ್ತೇನೆ – ಗಿರೀಶ್ ಮಟ್ಟಣ್ಣನವರ್ ಖದರ್ ಗೆ ಥಂಡ ಹೊಡೆದು ಹೋದ ಕಾಮಂದನ ಟೀಮು !
ಸೌಜನ್ಯ ಹೋರಾಟದಲ್ಲಿ ದಿನದಿಂದ ದಿನಕ್ಕೆ ಮುಂಚೂಣಿಗೆ ನಡೆಯುತ್ತಿರುವ ಹೋರಾಟಗಾರ ಮತ್ತು ಮಹೇಶ್ ಶೆಟ್ಟಿ ಅವರ ಜೊತೆ ಭದ್ರವಾಗಿ ನಿಂತಿರುವ ಶ್ರೀ ಗಿರೀಶ್ ಮಟ್ಟಣ್ಣನವರ್ ರ ರಿಯಲ್ ಖದರ್ ಮತ್ತೊಮ್ಮೆ ಅನಾವರಣ ಆಗಿದೆ. ಕಾಮಂಧನ ಟೀಮ್ ನೂರಾರು ಸಂಖ್ಯೆಯಲ್ಲಿ ಬಂದು ಅಡ್ಡ ಹಾಕಿ ನಿಂದಿಸಿದರೂ, ಕೇವಲ ಎಡಗೈಯಿಂದ ಸನ್ನೆ ಮಾಡಿ ತಮ್ಮ ರಿಯಲ್ ಟೆರರ್ ತೋರಿಸಿದ್ದಾರೆ. ಕಾಮಂದನ ಗ್ಯಾಂಗ್ ಸಪ್ಪೆ ಹೊಡೆದು ಹೋಗಿದೆ.
ಈ ಹಿಂದೆ ತನ್ನ ಭಾಷಣದಲ್ಲಿ ಹೇಳಿದ ಎಲ್ಲಾ ಮಾತುಗಳಿಗೆ ಬದ್ಧನೆಂದೂ ಪೋಲೀಸ್ ಇಲಾಖೆ ತನಗೆ ನೋಟೀಸು ಕೊಟ್ಟಲ್ಲಿ ಸಾಕ್ಷ್ಯಾಧಾರಗಳನ್ನು ಹಾಜರು ಪಡಿಸುತ್ತೇನೆಂದೂ ಮಟ್ಟನ್ನನವರ್ ಹೇಳಿದ್ದಾರೆ. ಈ ಮಾತುಗಳನ್ನು ವೇದಿಕೆಯ ಹತ್ತಿರವೇ ಬಂದು ದಾಖಲಿಸಿ ಮೇಲಧಿಕಾರಿಗಳಿಗೆ ತಿಳಿಸಿ ಎಂದೂ ಸಭೆಯಲ್ಲಿದ್ದ ಪೋಲೀಸರಿಗೇ ಹೇಳಿದ್ದರು. ಅಂದ ಮೇಲೆ ಪೊಲೀಸರಿಗೆ ದೂರು ಕೊಡುವದನ್ನು ಬಿಟ್ಟು ಇಂದು ನಿನ್ನೆ ಗಿರೀಶ್ ಮಟ್ಟನ್ನನವರನ್ನು ಧರ್ಮಸ್ಥಳದಲ್ಲಿ ಸುತ್ತುವರಿದು ಬೆದರಿಕೆ ಹಾಕುವ, ಸೌಜನ್ಯಾ ತಾಯಿಗೆ ಅವಾಚ್ಯ , ಕೆಟ್ಟ ಶಬ್ದಗಳಿಂದ ನಿಂದಿಸುವ ಕಾರ್ಯ ನಡೆದಿತ್ತು. ಆಗ ಮಟ್ಟನ್ನನವರ್ ಅವರ ಎಡಗೈ ಸನ್ನೆಗೆ ಕಾಮಂದನ ಟೀಮ್ ಬಿಳಿಚಿಕೊಂಡಿದೆ. ನಾನ್ ಎಲ್ಲಿಗೆ ಬೇಕಾದ್ರೂ ಬರ್ತೇನೆ, ಒಬ್ಬೇ ಬರ್ತೇನೆ. ನೀವು ನೂರಲ್ಲ, ಸಾವಿರವಲ್ಲ, ಲಕ್ಷ ಜನ ಬನ್ನಿ, ಲಕ್ಷ ಜನರಿಗೆ ನಾನೊಬ್ಬನೇ ಸಾಕು. ಒಬ್ಬನೇ ಬರ್ತೇನೆ” ಎಂದು ಗಿರೀಶ್ ಮಟ್ಟನ್ನನವರ್ ಗುಟುರು ಹಾಕಿದ್ದಾರೆ.
ಮಾಜಿ ಪೊಲೀಸ್ ಅಧಿಕಾರಿ ಮತ್ತು ಇದೀಗ ಸೌಜನ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಗಿರೀಶ್ ಮಟ್ಟನ್ನನವರ್ ರ ಮೇಲೆ ಬೆದರಿಕೆ ಹಾಕಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು. “ಇದು ಅತ್ಯಂತ ಖಂಡನೀಯ. ಪೊಲೀಸರು ಈ ತಂಡದ ಮೇಲೆ ಕ್ರಮ ಕೈಗೊಳ್ಳಬೇಕು; ಮಟ್ಟಣ್ಣನವರಿಗೆ ರಕ್ಷಣೆ ಕೊಡಬೇಕು. ಮಹಿಳೆಯ ಮೇಲೆ ಮಾನಹಾನಿ ಭಾಷೆ ಬಳಸಿದವನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು” ಎನ್ನುವ ಬೇಡಿಕೆ ಬಂದಿದೆ.
“ಸೌಜನ್ಯಾಳ ಅತ್ಯಾಚಾರ, ಕೊಲೆ ಮಾಡಿದವರು ಯಾರೆಂಬ ಸಾಕ್ಷಿಗಳು ಶ್ರೀ ಮಟ್ಟಣ್ಣನವರ್, ಹೋರಾಟದ ಮುಂಚೂಣಿಯಲ್ಲಿರುವ ಶ್ರೀ ಮಹೇಶ್ ತಿಮರೋಡಿ, ಒಡನಾಡಿ ಸಂಸ್ಥೆ ಯವರಲ್ಲಿದೆ. ಅದರ ತುಣುಕಷ್ಟೇ ಬಿಡುಗಡೆಯಾಗಿದೆ. ಪಿಕ್ಟರ್ ಅಭಿ ಬಾಕಿ ಹೈ” ಎಂದಿದ್ದಾರೆ ಮಹೇಶ್ ಶೆಟ್ಟಿ ತಿಮರೋಡಿ.
“ಜನರು ಮತ್ತು ನಾವು ಮರುತನಿಖೆಗೆ ಕಾಯುತ್ತಿದ್ದಾರೆ. ಇದರ ಅರಿವಿರುವ ಕೊಲೆಗಡುಕರ , ಅವರ ಬೆಂಬಲಿಗರ – ರಕ್ಷಕರ ಹತಾಶೆ ದಿನೇ ದಿನೇ ಹೆಚ್ಚುತ್ತಿದೆ. ಅದೀಗ ಗೂಂಡಾಗಿರಿ ದಿಕ್ಕಿಗೆ ತಿರುಗಿದೆ! ಶ್ರೀಕ್ಷೇತ್ರದ ವಿರುದ್ಧ ಯಾರೇ ಆದರೂ ಯಾಕೆ ಅಪಪ್ರಚಾರ ಮಾಡ್ತಾರೆ? ಅದು ಎಲ್ಲಾ ಹಿಂದುಗಳ ಶ್ರದ್ಧಾಕೇಂದ್ರ. ಹೆಗ್ಗಡೆ ಸಾಮ್ರಾಜ್ಯ ಮತ್ತು ಶ್ರೀಕ್ಷೇತ್ರ ಈ ಎರಡೂ ಒಂದೇ ಅಲ್ಲ, ಇವು ಬೇರೆ ಬೇರೆಯೆ. ಶ್ರೀಕ್ಷೇತ್ರದ ಹೆಸರನ್ನು, ಅದರ ಅಪಾರ ಆಸ್ತಿ- ಆದಾಯವನ್ನು ಹೆಗ್ಗಡೆ ಕುಟುಂಬದವರು ದುರುಪಯೋಗ, ಸ್ವಂತಕ್ಕೆ ಉಪಯೋಗ ಮಾಡಿದ್ದಾರೆ- ಮಾಡುತ್ತಿದ್ದಾರೆ; ದಲಿತರಿಗೆ ಶೋಷಣೆ, ಮಹಿಳೆಯರ ಮೇಲೆ ಅನಾಚಾರ ನಡೆಯುತ್ತಿದೆ ಎಂಬಿತ್ಯಾದಿ ಗುರುತರ ಆರೋಪಗಳನ್ನು ಮಾಡಲಾಗಿದೆ. ಸಾಕ್ಷ್ಯಾಧಾರಗಳ ಸಹಿತ ಹೆಗ್ಗಡೆಯವರ ಅಕ್ರಮಗಳ ಕುರಿತು100 ಪ್ರಶ್ನೆಗಳನ್ನು ಕೇಳಲಾಗಿದೆ. ಸೌಜನ್ಯಾ, ಆನೆ ಮಾವುತ & ತಂಗಿ, ಪದ್ಮಲತಾ, ವೇದವಲ್ಲಿ -452 ಅಸಹಜ ಸಾವು, 16 ಕೊಲೆ ಇತ್ಯಾದಿಗಳ ಕುರಿತ ಪ್ರಶ್ನೆಯೂ ಇದರಲ್ಲಿ ಒಳಗೊಂಡಿದೆ. ಹೆಗ್ಗಡೆಯವರಾಗಲೀ, ಅವರ ಬೆಂಬಲಿಗರಾಗಲೀ ಇದಕ್ಕೆ ಯಾಕೆ ಉತ್ತರಿಸುತ್ತಿಲ್ಲ? ಯಾಕೆ ಬಹಿರಂಗ ಸಂವಾದಕ್ಕೆ ಬರುತ್ತಿಲ್ಲ? ರಾಜ್ಯಸಭಾ ಸದಸ್ಯರಾಗಿರುವ ಇವರು ಉತ್ತರಬಾಧ್ಯರು. ಕೋರ್ಟ್ ನಿಂದ ತಡೆಯಾಜ್ಞೆ ತಂದರೆ, ಬೆದರಿಕೆ ಹಾಕಿದ್ರೆ, ರೌಡಿಯಿಸಂ ಮಾಡಿದ್ರೆ, ಕಿರು ಮಾಧ್ಯಮಗಳನ್ನು ಸೈಲೆಂಟ್ ಮಾಡಿದ್ರೆ ಕಟು ಸತ್ಯಗಳು, ವಾಸ್ತವಗಳು ಸುಳ್ಳಾಗುತ್ತದೆಯೇ? ಹೆಗ್ಗಡೆ ಕುಟುಂಬ ತಾವು ತೋಡಿದ ಗುಂಡಿಗೆ ತಾವೇ ಬೀಳಬೇಕಾಗುತ್ತದೆ. ಸುಳ್ಳುಗಳ ಅಡಿಪಾಯದ ಮೇಲೆ, ದೊಡ್ಡ ಮಾಧ್ಯಮಗಳ ಪ್ರಚಾರದಿಂದ ಕಟ್ಟಿದ ಸಾಮ್ರಾಜ್ಯದ ಪತನದ ಕಾಲ ಸಮೀಪಿಸುತ್ತಿದೆ. ‘ಹೊರಗೆ ಶೃಂಗಾರ, ಒಳಗೆ ಗೋಳಿಸೊಪ್ಪು’ – ಈ ಗಾದೆ ಹೆಗ್ಗಡೆ ಸಾಮ್ರಾಜ್ಯಕ್ಕೆ ಅನ್ವಯಿಸುತ್ತದೆ. ಇದು ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ ಮತ್ತು ನಾಗರಿಕ ಸೇವಾ ಟ್ರಸ್ಟ್ ಮಾಡಿರುವ ಬೇಡಿಕೆ.