Home Karnataka State Politics Updates Chikkamagaluru: ಕಾಂಗ್ರೆಸ್ ನ ತತ್ವ, ಸಿದ್ದಾಂತಗಳನ್ನೆಲ್ಲ ಬದಿಗೊತ್ತಿ ಭಜರಂಗಿ ದತ್ತ ಮಾಲೆ ಹಾಕಿದ ‘ಕೈ’ ಶಾಸಕ...

Chikkamagaluru: ಕಾಂಗ್ರೆಸ್ ನ ತತ್ವ, ಸಿದ್ದಾಂತಗಳನ್ನೆಲ್ಲ ಬದಿಗೊತ್ತಿ ಭಜರಂಗಿ ದತ್ತ ಮಾಲೆ ಹಾಕಿದ ‘ಕೈ’ ಶಾಸಕ !!

Chikkamagaluru

Hindu neighbor gifts plot of land

Hindu neighbour gifts land to Muslim journalist

Chikkamagaluru: ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ (Chikkamagaluru MLA) ಎಚ್‌.ಡಿ ತಮ್ಮಯ್ಯ (HD Thammaiah) ಅವರು ದತ್ತ ಜಯಂತಿಗೆ (Datta Jayanti) ಸಂಬಂಧಿಸಿದ ಭಜರಂಗಿ ದತ್ತಮಾಲೆ (Datta Mala) ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು, ಕಾಂಗ್ರೆಸ್ ಎಂದರೆ ಅದು ಸೆಕ್ಯೂಲಾರಿಸಮ್ ಪಾರ್ಟಿ, ಅಲ್ಲಿ ಆಚರಣೆ, ನಂಬಿಕೆಗಳಿಗೆ ಅವಕಾಶವಿಲ್ಲ. ಆದರೆ ಅಚ್ಚರಿ ಎಂಬಂತೆ ಚಿಕ್ಕಮಗಳೂರಿನ ಕಾಂಗ್ರೆಸ್ ಶಾಸಕ ಎಚ್ ಡಿ ತಮ್ಮಯ್ಯ ಅವರು ಕಾಂಗ್ರೆಸ್ ನ ಎಲ್ಲಾ ತತ್ವ, ಸಿದ್ದಾಂತಗಳನ್ನೆಲ್ಲ ಗಾಳಗೆ ತೂರಿ ದತ್ತಮಾಲೆ ಧರಿಸಿ, ಬಾಬಾಬುಡನ್ ಗಿರಿಗೆ ಬರಿಗಾಲಿನಲ್ಲಿ ಸಂಚಾರ ಮಾಡುತ್ತಿದ್ದಾರೆ.

ಅಂದಹಾಗೆ ಡಿಸೆಂಬರ್‌ 17ರಿಂದ ಡಿಸೆಂಬರ್‌ 26ರವರೆಗೆ ವಿವಾದಿತ ಬಾಬಾ ಬುಡನ್‌ ಗಿರಿಯ (Bababudan giri hills) ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ (Dattatreya bababudan swami dargah) ದತ್ತ ಜಯಂತಿ (Datta Jayanti) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೂಲತಃ ಬಿಜೆಪಿಯಲ್ಲಿದ್ದು, ಸಿ ಟಿ ರವಿ ಜೊತೆಗಿನ ಮುನಿಸಿನೊಂದಿಗೆ ಕಾಂಗ್ರೆಸ್ ಸೇರಿ, ಶಾಸಕರೂ ಆದ ತಮ್ಮಯ್ಯ ಅವರು ದತ್ತಮಾಲೆ ಧಾರಣೆ ಸಂದರ್ಭದಲ್ಲಿ ಅವರು ಏನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಅವರು ಗೌಪ್ಯವಾಗಿಯೇ ದತ್ತಮಾಲೆ ಧರಿಸಿರುವುದು ಕಂಡುಬಂದಿದೆ. ಇಷ್ಟೇ ಅಲ್ಲದೆ ಕೊರಳಲ್ಲಿ ಮಣಿಗಳನ್ನು ಹೊಂದಿದ ದತ್ತ ಮಾಲೆ, ಬರಿಗಾಲಲ್ಲಿ ಸಂಚಾರ ಮಾಡುತ್ತಾ ಶಾಸಕ ತಮ್ಮಯ್ಯ ದತ್ತಮಾಲಾ ಜಯಂತಿಯೊಂದಿಗೆ ಕೈ ಜೋಡಿಸಿದ್ದಾರೆ.

 

ಕೆಲ ಸಮಯದ ಹಿಂದೆ ಮಾಲೆ ಹಾಕುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ʻʻನಾನು ಈ ಬಾರಿ ದತ್ತಮಾಲೆ ಹಾಕುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ದೇವರು ಯಾವ ರೀತಿ ಮನಸ್ಸು ಕೊಡುತ್ತಾನೋ ನೋಡೋಣʼʼ ಎಂದಿದ್ದರು. ಇದೀಗ ಮಾಲೆ ಹಾಕಿ ಯಾತ್ರೆ ಕೈಗೊಂಡಿರುವ ತಮ್ಮಯ್ಯ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೆ ಮುಂದೆ ಹೋಗಿದ್ದಾರೆ.