UGC: ವಿದ್ಯಾರ್ಥಿಗಳೇ ಹುಷಾರ್, ಈ ವಿವಿ ಪ್ರಮಾಣ ಪತ್ರಕ್ಕಿಲ್ಲ ಯಾವುದೇ ಮಾನ್ಯತೆ !! UGC ಖಡಕ್ ಎಚ್ಚರಿಕೆ

UGC: “ಮೇಡ್‌ ಇನ್‌ ಇಂಡಿಯಾ” (Made In India)ವಿದೇಶಿ ಪದವಿ ಹೆಸರಿನಲ್ಲಿ ಹಲವಾರು ವಿದ್ಯಾರ್ಥಿಗಳು ನಕಲಿ ಪದವಿಗಳನ್ನು ಪಡೆಯುತ್ತಿರುವ ಕುರಿತು ಯುಜಿಸಿ(UGC)ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಇದ್ದುಕೊಂಡು ವ್ಯಾಸಂಗ ಮಾಡಿ, ವಿದೇಶಿ ವಿವಿಗಳ ಪದವಿ ಪಡೆಯಿರಿ ಎಂದು ಹೇಳಿಕೊಂಡು ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದು, ಹೀಗಾಗಿ, ಎಚ್ಚರಿಕೆ ವಹಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(UGC) ಸೂಚನೆ ನೀಡಿದೆ. ಅಷ್ಟೇ ಅಲ್ಲದೆ, ಈ ರೀತಿಯ ಕಾಲೇಜುಗಳು ನೀಡುವ ವಿದೇಶಿ ಪದವಿ ಪ್ರಮಾಣಪತ್ರಗಳಿಗೆ ಯಾವುದೇ ರೀತಿಯ ಮಾನ್ಯತೆ ಇರುವುದಿಲ್ಲ ಎಂಬುದನ್ನು ಖಾತ್ರಿಪಡಿಸಿದೆ.

 

ಅಷ್ಟೇ ಅಲ್ಲದೆ, ಒಂದು ಬಾರಿಯೂ ವಿಮಾನವೇರದೆ ಮನೆಯಿಂದ ಆಚೆಗೂ ಹೋಗದೆ , ವಿದೇಶಿ ಉಪನ್ಯಾಸಕರ ಪಾಠಗಳನ್ನೂ ಕೇಳದೇ ಇದ್ದರೂ ಕೂಡ ಅಷ್ಟೇ ಏಕೆ ಪ್ರಾಜೆಕ್ಟ್ಗಳನ್ನು ಸಲ್ಲಿಸದಿದ್ದರು ಕೂಡ ವಿದ್ಯಾರ್ಥಿಗಳಿಗೆ “ವಿದೇಶಿ ವಿವಿಗಳ ಪದವಿ ಪ್ರಮಾಣಪತ್ರ’ ಲಭ್ಯವಾಗುತ್ತಿವೆ. ಈ ಕುರಿತು ಯುಜಿಸಿ ಕಳವಳ ವ್ಯಕ್ತಪಡಿಸಿದೆ. ಬೆಂಗಳೂರಿನ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಪದವಿ ಪ್ರಮಾಣಪತ್ರ ಕಲ್ಪಿಸಿಕೊಡುವ ಆಶ್ವಾಸನೆ ನೀಡಿರುವ ವಿಚಾರ ಯುಜಿಸಿಯ ಗಮನಕ್ಕೆ ಬಂದಿದ್ದು, ಈ ಕುರಿತು ವಿದ್ಯಾರ್ಥಿಗಳು ಜಾಗ್ರತೆ ವಹಿಸಬೇಕು. ವಿಚಾರದ ಕುರಿತಾಗಿ ಸ್ಪಷ್ಟನೆ ನೀಡಿರುವ ಯುಜಿಸಿ ಅಡಿಯಲ್ಲಿ ಗುರುತಿಸಿಕೊಂಡಿರದೆ ಇರುವ ಸಂಸ್ಥೆಗಳು ವಿತರಿಸುವ ಪ್ರಮಾಣಪತ್ರಗಳು ಹಾಗೂ ಪದವಿಗಳಿಗೆ ಯಾವುದೇ ರೀತಿಯ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಪಪಡಿಸಿದೆ.

Leave A Reply

Your email address will not be published.