KSRTC: ಶಕ್ತಿಯೋಜನೆ ಬೆನ್ನಲ್ಲೇ ಮತ್ತೊಂದು ಹೊಸ ಸೇವೆ ಆರಂಭಿಸಿದ KSRTC – ರಾಜ್ಯದ ಜನತೆಗೆ ಖುಷಿಯೋ ಖುಷಿ!!

KSRTC : ರಾಜ್ಯದ ಸಾರಿಗೆ ಇಲಾಖೆಯು ಜನರಿಗೆ ಅನುಕೂಲವಾಗಲಿ ಎಂದು ಹಾಗೂ ಕೆ ಎಸ್ ಆರ್ ಟಿ ಸಿ(KSRTC) ಗೆ ಶಕ್ತಿಯೋಜನೆಯಿಂದ ಆಗಿರುವ ನಷ್ಟವನ್ನು ತುಂಬಲು ಇದೀಗ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಕಾರ್ಗೋ ಸೇವೆಯನ್ನು ಆರಂಭಿಸಿದೆ. ಈ ಮೂಲಕ ನಾಡಿನ ಜನತೆಗೆ ಶಕ್ತಿ ಯೋಜನೆಯ ಬೆನ್ನಲ್ಲೇ ಮತ್ತೊಂದು ಹೊಸ ಲಾಭ ದೊರೆತಂತಾಗಿದೆ.

 

ಹೌದು, ಒಂದು ದೊಡ್ಡ ಲಗೇಜನ್ನು ಅಥವಾ ಏನಾದರೂ ಪಾರ್ಸಲ್ ಅನ್ನು ಕೊಂಡೊಯ್ಯಬೇಕಾದರೆ ಇದುವರೆಗೂ ಖಾಸಗಿ ಕಾರ್ಗೋಗಳನ್ನು ಅರಸಬೇಕಿತ್ತು. ಆದರಿನ್ನು ಈ ವರೆಗೆ ಖಾಸಗಿಯವರು ಮಾತ್ರ ನೀಡುತ್ತಿದ್ದ ಕಾರ್ಗೋ ಸೇವೆಯನ್ನು ಇದೀಗ ಸರ್ಕಾರಿ ಬಸ್‌ಗಳು ನೀಡಲು ಮುಂದಾಗಿದೆ. ಮೊದಲ ಹಂತದಲ್ಲಿ ಕೊರಿಯರ್ ಸರ್ವಿಸ್ ಡಿ.23ರಿಂದ ಆರಂಭವಾಗಲಿದೆ. ಈ ಮೂಲಕ ಸರ್ಕಾರಿ ಉದ್ಯಮವನ್ನು ವಿಸ್ತರಣೆ ಮಾಡುವ ಕಾರ್ಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy) ಮುಂದಾಗಿದ್ದಾರೆ. ಈ ಮೂಲಕ ಡಿಸೆಂಬರ್ 23ರಿಂದ ನಮ್ಮ‌ ಕಾರ್ಗೋದ 20 ಟ್ರಕ್‌ಗಳು ರಸತೆಗಿಳಿಯಲಿವೆ.

ಅಂದಹಾಗೆ ಡಿ. 17 ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ 6 ಟನ್‌‌‌ ಸಾಮರ್ಥ್ಯದ 20 ಟ್ರಕ್‌ಗಳ ಮೂಲಕ ಪಾರ್ಸಲ್ ಅಂಡ್ ಕೊರಿಯರ್ ಸರ್ವಿಸ್‌ಗಳನ್ನು ಒದಗಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈಗಾಗಲೇ ಕೆಎಸ್‌ಆರ್‌ಟಿಸಿ ಕೇಂದ್ರ‌‌ ಕಛೇರಿಗೆ ಇಪ್ಪತ್ತು ಟ್ರಕ್‌ಗಳು ಆಗಮಿಸಿದ್ದು, ಅವುಗಳನ್ನು ಸಾರಿಗೆ ಸಚಿವೆ ರಾಮಲಿಂಗಾರೆಡ್ಡಿ ಪರಿಶಿಲನೆ ಮಾಡಿದ್ದಾರೆ. . 20 ಟ್ರಕ್ ಗಳ ಸೇವೆ ಆರಂಭವಾದ್ರೆ ವರ್ಷಕ್ಕೆ 20 ಕೋಟಿ ಆದಾಯದ ನಿರೀಕ್ಷೆ ಮಾಡಲಾಗಿದೆ. ಶಕ್ತಿ ಯೋಜನೆಯಿಂದ ತಿಂಗಳಿಗೆ 20 ರಿಂದ 25ಕೋಟಿಯಷ್ಟು ನಷ್ಟ ಅನುಭವಿಸುವ ಸಾರಿಗೆ ಸಂಸ್ಥೆಯು ಕಾರ್ಗೋ ಸೇವೆ ಮೂಲಕ ಅದನ್ನು ಸರಿದೂಗಿಸಿಕೊಳ್ಳಲಿದೆ.

Leave A Reply

Your email address will not be published.