Vehicle Rules: ವಾಹನ ಸವಾರರೇ ಎಚ್ಚರ, ಎಚ್ಚರ !! ಬಂದೇಬಿಡ್ತು ನೋಡಿ ಹೊಸ ಟಫ್ ರೂಲ್ಸ್- ಮಿಸ್ ಮಾಡಿದ್ರೆ ಕೆಲಸವೇ ಹೋದೀತು ಹುಷಾರ್ !!

Vehicle Rules: ಜನಗಳಿಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಿದೆ ಎನ್ನಬಹುದು. ಎಲ್ಲಿ ನೋಡಿದರಲ್ಲಿ ಕಾರು, ಬೈಕು, ಬಸ್ಸು, ಲಾರಿಗಳು. ಅದರಲ್ಲೂ ಕೂಡ ನಗರ ಪ್ರದೇಶಗಳಲ್ಲಿ ವಾಹನಗಳ ಇವುಗಳ ತಾಪತ್ರಯ ತಪ್ಪಿದ್ದಲ್ಲ. ಇದೇನೆ ಇರಲಿ ಇದೀಗ ವಾಹನ ಸವಾರರು, ಮಾಲೀಕರು ಎಲ್ಲರಿಗೂ ಶಾಕಿಂಗ್ ನ್ಯೂಸ್ ಎದುರಾಗಿದ್ಧು, ಸಾರಿಗೆ ಇಲಾಖೆಯಿಂದ ಹೊಸ ಟಫ್ ರೂಲ್ಸ್ ಜಾರಿಯಾಗಿದೆ. ಏನಾದ್ರೂ ಉಲ್ಲಂಘನೆ ಮಾಡಿದ್ರೆ ತಮ್ಮ ಕೆಲಸವೇ ಹೋಗುತ್ತೆ!!

 

ಹೌದು ನಗರ ಪ್ರದೇಶಗಳಲ್ಲಂತೂ ವಾಹನಗಳ ಸಮಸ್ಯೆಗಳಿಂದ ಟ್ರಾಫಿಕ್ ಪೊಲೀಸರು ಹಾಗೂ ಸಾರಿಗೆ ಇಲಾಖೆಯವರು ರೋಸಿ ಹೋಗಿದ್ದಾರೆ. ಎಷ್ಟೇ ನಿಯಮಗಳನ್ನು ಜಾರಿಗೆ ತರಲಿ ಅವುಗಳನ್ನು ಉಲ್ಲಂಘಿಸುವುದು, ಫಾಲೋ ಮಾಡದೇ ಇರುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪೊಲೀಸರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಕೇಳಲೇ ಬೇಡಿ. ಹೀಗಾಗಿ ಬೆಂಗಳೂರಿನ ವಾಹನ ಸವಾರರಿಗೆ ಪೊಲೀಸರು ಇದೀಗ ಹೊಸ ಒಂದು ಟಫ್ ಟ್ರಾಫಿಕ್ ರೂಲ್ಸ್(Vehicle Rules) ಅನ್ನು ಜಾರಿಗೆ ತಂದಿದ್ದು ಟ್ರಾಫಿಕ್ ನಲ್ಲಿ ಸಿಗ್ನಲ್ ಜಂಪ್ ಮಾಡುವವರಿಗೆ ದೊಡ್ಡ ಮಟ್ಟದಲ್ಲಿ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಅಂದಹಾಗೆ ಬೆಂಗಳೂರಿನ(Bengaluru) ಟ್ರಾಫಿಕ್ ನಲ್ಲಿ ನೀವೇನಾದರೂ ಇನ್ನು ಮುಂದೆ ಸಿಗ್ನಲ್ ಜಂಪ್ ಮಾಡಿದರೆ ಇನ್ಮುಂದೆ ಭಾರೀ ದೊಡ್ಡ ಮಟ್ಟದಲ್ಲಿ ದಂಡ ತೆರೆಯಬೇಕಾದೀತು. ಅಂದರೆ ತಮ್ಮ ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಹೇಗಪ್ಪಾ ಇದೆಲ್ಲಾ ಎಂದು ನಕ್ಕು ಸುಭ್ಮನಾಗಬೇಡಿ. ಯಾಕೆಂದರೆ ಯಾವುದೇ ಐಟಿ ಕಂಪನಿ ಉದ್ಯೋಗಿ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ, ಟ್ರಾಫಿಕ್ ನಿಯಮಗಳ ಉಲ್ಲಂಘನೆಯ ಕುರಿತಾಗಿ ಮಾಹಿತಿಯನ್ನು ಅವರ ಕಂಪನಿಗೆ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತೆ. ಈ ಕುರಿಯು ಬೆಂಗಳೂರು ಟ್ರಾಫಿಕ್ ಪೋಲೀಸರೇ ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾತನಾಡಿದ್ದು ‘ಯಾವುದೇ ಐಟಿ ಕಂಪನಿ ಉದ್ಯೋಗಿ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ, ಟ್ರಾಫಿಕ್ ನಿಯಮಗಳ ಉಲ್ಲಂಘನೆಯ ಕುರಿತಾಗಿ ಮಾಹಿತಿಯನ್ನು ಅವರ ಕಂಪನಿಗೆ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತೆ.’ ಎಂದು ತಿಳಿಸಿದ್ದಾರೆ. ಸದ್ಯ ಐಟಿ ಕಾರಿಡಾರ್‌ನಲ್ಲಿ ಪ್ರಾಯೋಗಿಕವಾಗಿ ಈ ನಿಯಮ ಜಾರಿಗೆ ತರಲಾಗಿದ್ದು, ಈ ಮಾರ್ಗಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಇಳಿಕೆಯಾದರೆ ಬೆಂಗಳೂರಿನ ಇತರ ಭಾಗಕ್ಕೂ ಈ ರೂಲ್ಸ್ ವಿಸ್ತರಣೆ ಆಗುವ ನಿರೀಕ್ಷೆ ಇದೆ. ಇದರಿಂದ ಬೆಂಗಳೂರು ವಾಹನ ಸವಾರರಿಗೆ ಹೊಸ ತಲೆನೋವು ಎದುರಾಗಲಿದೆ.

1 Comment
Leave A Reply

Your email address will not be published.