Madhya Pradesh: ಮಧ್ಯಪ್ರದೇಶಕ್ಕೂ ಲಗ್ಗೆ ಇಟ್ಟ ಯೋಗಿ ಬುಲ್ಡೋಜರ್- ಬಿಜೆಪಿ ನಾಯಕನ ಕೈ ಕತ್ತರಿಸಿದವನ ಮನೆ ಧ್ವಂಸ !!

MP CM Mohan Yadav budlozer action latest news

Share the Article

MP CM Mohan Yadav: ಮದ್ಯಪ್ರದೇಶ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್(MP CM Mohan Yadav) ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಮಧ್ಯಪ್ರದೇಶದಲ್ಲಿ ನೂತನ ಸಿಎಂ ಮೋಹನ್ ಯಾದವ್(Mohan yadav) ಅಧಿಕಾರ ಸ್ವೀಕರಿಸಿದ ಎರಡನೇ ದಿನಕ್ಕೆ (Madhya Pradesh) ಬುಲ್ಡೋಜರ್ ಸದ್ದು ಮಾಡಲು ಪ್ರಾರಂಭಿಸಿದೆ.ಬಿಜೆಪಿ ಮಂಡಲ ಮಟ್ಟದ ನಾಯಕ ದೇವೇಂದ್ರ ಠಾಕೂರ್ ಮೇಲೆ ಫಾರೂಖ್ ರೈನೆ ಸೇರಿದಂತೆ ನಾಲ್ವರು ಆರೋಪಿಗಳು ಮಚ್ಚಿನಿಂದ ಅಟ್ಟಾಡಿಸಿಕೊಂಡು ಕಳೆದ ವಾರವಷ್ಟೇ ದಾಳಿ ಮಾಡಿದ್ದರು. ದೇವೇಂದ್ರ ಠಾಕೂರ್ ಅವರು ತಮ್ಮ ಕಡೆಗೆ ಮಚ್ಚು ಬೀಸುತ್ತಿದ್ದ ಹಾಗೆ ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈ ಅಡ್ಡ ಹಿಡಿದ ಪರಿಣಾಮ ದಾಳಿಯಲ್ಲಿ ದೇವೇಂದ್ರ ಠಾಕೂರ್ ಕೈ ತುಂಡಾಗಿದೆ. ದೇವೇಂದ್ರ ಠಾಕೂರ್ ನೆಲಕ್ಕೆ ಕುಸಿದು ಬಿದ್ದಿದ್ದು, ಕೂಡಲೇ ಆರೋಪಿಗಳು ಪರಾರಿಯಾಗಿದ್ದರು.

ಇದನ್ನು ಓದಿ: Tractor subsidy: ಟ್ರ್ಯಾಕ್ಟರ್ ಖರೀದಿಸುವವರಿಗೆ ಖುಷಿ ಸುದ್ದಿ – ಭರ್ಜರಿ ಸಬ್ಸಿಡಿ ಘೋಷಿಸಿದ ಸರ್ಕಾರ !!

ಈ ಪ್ರಕರಣದ ಕುರಿತಂತೆ ಅಧಿಕಾರ ಸ್ವೀಕರಿಸಿದ ಎರಡನೇ ದಿನವೇ ಮೋಹನ್ ಯಾದವ್ ಪೊಲೀಸರು ನೀಡಿದ ವರದಿ ಆಧರಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ. ನ್ಯಾಷನಲ್ ಸೆಕ್ಯೂರಿಟಿ ಆ್ಯಕ್ಟ್(NSA)ಅಡಿಯಲ್ಲಿ ನಾಲ್ವರು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಫಾರೂಖ್ ರೈನೆ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಗಿದೆ. ಭೋಪಾಲ್ ಜಿಲ್ಲಾಧಿಕಾರಿ, ಭಾರಿ ಪೊಲೀಸ್ ಭದ್ರತೆಯ ಜೊತೆಗೆ ಆರೋಪಿಯ ಮನೆ ಧ್ವಂಸ ಮಾಡಲಾಗಿದೆ . ಮುಖ್ಯಮಂತ್ರಿಗಳ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ

Leave A Reply