7th Pay Commission: ಸರ್ಕಾರಿ ನೌಕರರ ವೇತನ 63,000 ಕ್ಕೆ ಏರಿಕೆ !! ಹೊಸ ವರ್ಷಕ್ಕೆ ಸರ್ಕಾರದಿಂದ ಭರ್ಜರಿ ಗಿಫ್ಟ್

7th Pay Commission: ಕೇಂದ್ರ ನೌಕರರಿಗೆ ಅಕ್ಟೋಬರ್‌ನಲ್ಲಿ ಡಿಎ(DA )ಹೆಚ್ಚಳದ ಬಳಿಕ ಈಗ ಹೊಸ ವರ್ಷದಲ್ಲಿ ನೌಕರರ ತುಟ್ಟಿ ಭತ್ಯೆಯನ್ನು ಮತ್ತೆ ಪರಿಷ್ಕರಿಸಲಾಗುತ್ತದೆ. ಆದರೆ, ಅದರೊಂದಿಗೆ ಪ್ರಯಾಣ ಭತ್ಯೆ (TA ) ಎಚ್‌ಆರ್‌ಎ(HRA )ಹೆಚ್ಚಳವಾಗುವ ನಿರೀಕ್ಷೆಯಿದೆ. ಇದರ ಜೊತೆಗೆ ಫಿಟ್‌ಮೆಂಟ್ ಅಂಶ ಕೂಡಾ ಬದಲಾವಣೆಯಾಗುವ ಸಾಧ್ಯತೆ ಇದೆ.

7 ನೇ CPC ಯ ಶಿಫಾರಸುಗಳ ಆಧಾರದ ಮೇರೆಗೆ, ಕೇಂದ್ರ ನೌಕರರ ಕನಿಷ್ಠ ವೇತನವನ್ನು(7th Pay Commission)ಹೆಚ್ಚಿಸಲು ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಜಾರಿಗೆ ತರಲಾಗಿದೆ. ಫಿಟ್‌ಮೆಂಟ್ ಅಂಶ ಹೇರಿಕೆಯಿಂದ ಕೇಂದ್ರ ನೌಕರರ ಕನಿಷ್ಠ ವೇತನ ನೇರವಾಗಿ 6000 ರೂ.ಯಿಂದ 18000 ರೂ.ಗೆ ಹೆಚ್ಚಳವಾಗಲಿದೆ. ಫಿಟ್‌ಮೆಂಟ್ ಅಂಶವನ್ನು 2.57 ಪಟ್ಟು ಎಂದು ತೀರ್ಮಾನ ಮಾಡಲಾಗಿದೆ.

ಇದನ್ನು ಓದಿ: Madhu Bangarappa: 2,500 ದೈಹಿಕ ಶಿಕ್ಷಕರ ನೇಮಕ್ಕೆ ಗ್ರೀನ್ ಸಿಗ್ನಲ್- ಸಚಿವರಿಂದ ಹೊಸ ಘೋಷಣೆ

ಕೇಂದ್ರ ನೌಕರರ ವೇತನವನ್ನು ನಿಗದಿ ಮಾಡುವಾಗ ತುಟ್ಟಿಭತ್ಯೆ (ಡಿಎ), ಪ್ರಯಾಣ ಭತ್ಯೆ (ಟಿಎ), ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಇತ್ಯಾದಿ ಭತ್ಯೆಗಳ ಹೊರತಾಗಿ, ಉದ್ಯೋಗಿಯ ಮೂಲ ವೇತನವನ್ನು 7 ನೇ ವೇತನದ ಫಿಟ್‌ಮೆಂಟ್ ಅನುಸಾರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕೇಂದ್ರ ನೌಕರನ ಮೂಲ ವೇತನವು 18,000 ರೂ ಆಗಿದ್ದಲ್ಲಿ ಭತ್ಯೆಗಳನ್ನು ಹೊರತುಪಡಿಸಿ ಅವನ ಸಂಬಳ 18,000 X 2.57 = 46,260 ಆಗಿರುತ್ತದೆ. ಇದನ್ನು 3 ಎಂದು ಪರಿಗಣಿಸಿದರೆ ಸಂಬಳ 21,000X3= 63,000 ರೂ. ಆಗುತ್ತದೆ.

ಇದನ್ನು ಓದಿ: BBK season 10: ಬಿಗ್ ಬಾಸ್ ಒಳಗಿರೋ ಡ್ರೋನ್ ಪ್ರತಾಪ್ ಗೆ ಬಂದೇ ಬಿಡ್ತು ಲೀಗಲ್ ನೋಟಿಸ್- ಇದೇ ಕಾರಣಕ್ಕಾ? ಕೊಟ್ಟಿದ್ಯಾರು ?!

ಆದರೆ, ಇದನ್ನು ಶೇ. 3ಕ್ಕೆ ಹೆಚ್ಚಳ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ. ಹೀಗಾದಾಗ ಕನಿಷ್ಠ ವೇತನ 21,000 ರೂ. ಗೆ ಹೆಚ್ಚಳವಾಗುತ್ತದೆ. ಹೊಸ ವರ್ಷದಲ್ಲಿ ಕೇಂದ್ರ ನೌಕರರ ಫಿಟ್‌ಮೆಂಟ್ ಅಂಶವನ್ನು ಪರಿಷ್ಕರಿಸುವ ಸಂಭವವಿದೆ. ಫಿಟ್ಮೆಂಟ್ ಅನ್ನು 3 ಶೇ. ರಷ್ಟು ಏರಿಕೆ ಮಾಡುವ ಸಾಧ್ಯತೆಯಿದೆ. ಆದರೆ, ಫಿಟ್‌ಮೆಂಟ್‌ ಫ್ಯಾಕ್ಟರ್ ಅನ್ನು 3.68ಗೆ ಹೆಚ್ಚಳ ಮಾಡುವಂತೆ ಕೇಂದ್ರ ನೌಕರರು ಬೇಡಿಕೆ ಇಡುತ್ತಿದ್ದು, ಹಲವು ವರ್ಷಗಳ ನಂತರ ಕೂಡ ಫಿಟ್‌ಮೆಂಟ್ ಅಂಶದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಆದರೆ, ಇದೀಗ, ಸಿಹಿ ಸುದ್ದಿ ಹೊರಬಿದ್ದಿದೆ. ಕೇಂದ್ರ ಉದ್ಯೋಗಿಯ ವೇತನವನ್ನು ನಿಗದಿಪಡಿಸಿದಾಗ, ಡಿಎ, ಟಿಎ, ಎಚ್‌ಆರ್‌ಎ, ವೈದ್ಯಕೀಯ ಮರುಪಾವತಿ ಮುಂತಾದ ಎಲ್ಲಾ ರೀತಿಯ ಭತ್ಯೆಗಳನ್ನು ಸೇರಿಸಲಾಗುತ್ತದೆ.

Leave A Reply

Your email address will not be published.