Dakshina Kannada: ಸುಳ್ಯ ತಾಲೂಕಿನ ಬಳ್ಪ ಕಾಡಿನಲ್ಲಿ ಮಂಗಗಳ ಮಾರಣಹೋಮ!? ಸಾವಿಗೆ ಕಾರಣವೇನು?
ದಕ್ಷಿಣ ಕನ್ನಡ:ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಪ-ಗುತ್ತಿಗಾರು ಕಾಡಂಚಿನ ರಸ್ತೆ ಬದಿಯಲ್ಲಿ ಮಂಗಗಳ ಮಾರಣಹೋಮ ನಡೆದಿದ್ದು, ಸುಮಾರು 30ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾದ ಬಗ್ಗೆ ವರದಿಯಾಗಿದೆ.
ಇಂದು ಮಧ್ಯಾಹ್ನ ವೇಳೆಗೆ ರಸ್ತೆ ಬದಿಯಲ್ಲಿ ವಾನರ ಮೃತದೇಹ ಪತ್ತೆಯಾದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಿದ್ದು, ಸಾವಿಗೆ ಕಾರಣವೇನು ಎನ್ನುವ ಬಗ್ಗೆ ಅನುಮಾನ ಮೂಡಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.