Scholarship for ITI, Diploma Students: ವಿದ್ಯಾರ್ಥಿಗಳೇ ನಿಮಗೆ ನಿರಂತರವಾಗಿ ಸಿಗುತ್ತೆ 20,000 ಸ್ಕಾಲರ್ ಶಿಪ್- ಕೂಡಲೇ ಅರ್ಜಿ ಹಾಕಿ !!

Scholarship for ITI, Diploma Students: ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ವೆಚ್ಚ, ಜೀವನಕ್ಕಾಗಿ ಈ ಸ್ಕಾಲರ್‌ಶಿಪ್‌ ಹಣವನ್ನು ಬಳಸಿಕೊಂಡು, ವಿದ್ಯಾಭ್ಯಾಸ ಮುಗಿಸಿಕೊಳ್ಳುವ ಹಿನ್ನೆಲೆ, ಯಾವುದೇ ವರ್ಷದ / ಸೆಮಿಸ್ಟರ್‌ನಲ್ಲಿ ಐಟಿಐ ಅಥವಾ ಡಿಪ್ಲೊಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ವರ್ಧಮಾನ್ ಟೆಕ್ಸ್‌ಟೈಲ್ಸ್‌ ಲಿಮಿಟೆಡ್ ಕೊಡಮಾಡುವ ವರ್ಧಮಾನ್ ಫೌಂಡೇಷನ್ ಶಾಕುನ್ ಓಸ್ವಾಲ್ ಸ್ಕಾಲರ್‌ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಹತ್ತನೇ ತರಗತಿ ಅಥವಾ 12ನೇ ತರಗತಿ ನಂತರ ಡಿಪ್ಲೊಮ / ಐಟಿಐ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ (Scholarship for ITI, Diploma Students) ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿವೇತನ ಹೆಸರು : ವರ್ಧಮಾನ್ ಫೌಂಡೇಷನ್ ಶಾಕುನ್ ಓಸ್ವಾಲ್ ಸ್ಕಾಲರ್‌ಶಿಪ್
ವಿದ್ಯಾರ್ಥಿವೇತನ ಹಣ : ರೂ.20,000.

ಅರ್ಹತೆಗಳು:
ಯಾವುದೇ ವರ್ಷದ, ಯಾವುದೇ ಸೆಮಿಸ್ಟರ್‌ನಲ್ಲಿ ಐಟಿಐ ಅಥವಾ ಡಿಪ್ಲೊಮ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು.
10ನೇ ತರಗತಿ / 12ನೇ ತರಗತಿ ಶಿಕ್ಷಣದಲ್ಲಿ ಕನಿಷ್ಠ ಶೇಕಡ.50 ಅಂಕಗಳನ್ನು ಪಡೆದಿರಬೇಕು.
ವಿದ್ಯಾರ್ಥಿಗಳ ಕೌಟುಂಬಿಕ ವಾರ್ಷಿಕ ವೇತನ ರೂ.6,00,000 ಮೀರಿರಬಾರದು.
ಹಿಮಾಚಲ ಪ್ರದೇಶ, ಪಂಜಾಬ್, ಮಧ್ಯಪ್ರದೇಶ ವಿದ್ಯಾರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.
ವರ್ಧಮಾನ್ ಟೆಕ್ಸ್‌ಟೈಲ್ಸ್‌ ಲಿಮಿಟೆಡ್‌ ಹಾಗೂ Buddy4study ಸಿಬ್ಬಂದಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ಇದನ್ನು ಓದಿ: DL-RC Smart Card: 2024ರಿಂದ DL, RC ನಿಯಮದಲ್ಲಿ ಮಹತ್ವದ ಬದಲಾವಣೆ – ಯಾಕೆ, ಏನು ಎಂದು ಮಿಸ್ ಮಾಡ್ದೆ ನೋಡಿ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, 10ನೇ ತರಗತಿ / 12ನೇ ತರಗತಿ ಅಂಕಪಟ್ಟಿ, ಆಧಾರ್‌ ಕಾರ್ಡ್‌
ಆದಾಯ ಪ್ರಮಾಣ ಪತ್ರ, ಪ್ರಸ್ತುತ ವರ್ಷ ಶಿಕ್ಷಣಕ್ಕೆ ಪ್ರವೇಶ ಪಡೆದ ದಾಖಲೆ, ವಿದ್ಯಾರ್ಥಿಯ ಬ್ಯಾಂಕ್‌ ಖಾತೆ ವಿವರ.

ವಿದ್ಯಾರ್ಥಿವೇತನದ ಕುರಿತು ಮಾಹಿತಿ ತಿಳಿಯಲು ಈ link ಕ್ಲಿಕ್ ಮಾಡಿ.

Link ಒತ್ತಿದ ನಂತರ ಸ್ಕ್ರಾಲ್‌ಡೌನ್‌ ಮಾಡಿ Apply Online‘ ಎಂದಿರುವ ಲಿಂಕ್ ಕ್ಲಿಕ್ ಮಾಡಿ. ಇಮೇಲ್, ಜಿಮೇಲ್, ಮೊಬೈಲ್‌ ನಂಬರ್ ಮೂಲಕ ಲಾಗಿನ್ ಆಗಿ, ರಿಜಿಸ್ಟ್ರೇಷನ್‌ ಪಡೆದು ಅರ್ಜಿ ಸಲ್ಲಿಸಿ.

Leave A Reply

Your email address will not be published.