Home Karnataka State Politics Updates Loka sabha: ಸಂಸತ್ತಿಗೆ ಆಗಂತುಕರು ನುಗ್ಗಿದ್ದಾಗ ಒಳಗಿದ್ದ ರಾಹುಲ್ ಗಾಂಧಿ ಏನು ಮಾಡಿದ್ರು ಗೊತ್ತಾ?!

Loka sabha: ಸಂಸತ್ತಿಗೆ ಆಗಂತುಕರು ನುಗ್ಗಿದ್ದಾಗ ಒಳಗಿದ್ದ ರಾಹುಲ್ ಗಾಂಧಿ ಏನು ಮಾಡಿದ್ರು ಗೊತ್ತಾ?!

Loka sabha

Hindu neighbor gifts plot of land

Hindu neighbour gifts land to Muslim journalist

Loka sabha: ಇಡೀ ದೇಶವೇ ಬೆಚ್ಚಿ ಬೆಳಿಸುವಂತಹ ಘಟನೆ ನಿನ್ನೆ ನಡೆದಿದೆ. ರಾಷ್ಟ್ರದ ಎಲ್ಲಾ ವಿಚಾರಗಳು ಚರ್ಚೆ ನಡೆಯುವ, ಸಂವಿಧಾನದ ಸದನ ಎಂದೇ ಖ್ಯಾತಿಯಾಗಿರುವ, ಅತೀ ದೊಡ್ಡ ಪ್ರಜಾಪ್ರಭುತ್ವದ ದೇಗುಲ ಎಂದೇ ಬಿಂಬಿತವಾದ ಸಂಸತ್ ಭವನದ ಒಳಗೆ ದಾಳಿ(Parliament Attack) ನಡೆದಿದ್ದು ಇಡೀ ದೇಶದ ಜನರಿಗೆ ಆಘಾತ ಉಂಟುಮಾಡಿದೆ. ಆದರೆ ಈ ಸಮಯದಲ್ಲಿ ಸಂಸತ್ತಿನೊಳಗಿದ್ದು ರಾಹುಲ್ ಗಾಂಧಿ ಏನು ಮಾಡಿದ್ರು ಗೊತ್ತಾ?! ನಾವ್ ಹೇಳ್ತೇವೆ ಕೇಳಿ.

 

ನಿನ್ನೆ ಲೋಕಸಭಾ(Loka Sabha) ಕಲಾಪ ನಡೆಯುವ ವೇಳೆ ಇಬ್ಬರು ಯುವಕ ಯುವತಿಯರು ವೀಕ್ಷಕರ ಗ್ಯಾಲರಿಯಿಂದ ಕಲಾಪದೊಳಗೆ ಹಾರಿ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕೆಮಿಕಲ್ ಮಿಶ್ರಿತ, ಬಣ್ಣದ ಗ್ಯಾಸ್ ಅನ್ನು ಸಿಡಿಸಿದ್ದಾರೆ. ಇದ್ದಕ್ಕಿದ್ದಂತೆ ಈ ರೀತಿ ಭದ್ರತಾ ಲೋಪ ಆದದ್ದನ್ನು ಕಂಡ ಕೆಲವು ಸಂಸದರು ಸದನದಿಂದ ಹೊರ ಓಡಿದ್ದಾರೆ. ಕೆಲವರು ಆ ಆಗಂತುಕರನ್ನು ಹಿಡಿಯಲು ಮುಂದಾಗಿ, ಹಿಡಿದಿದ್ದಾರೆ ಕೂಡ. ಆದರೆ ಈ ವೇಳೆ ಸದನದೊಳಗಿದ್ದ ರಾಹುಲ್ ಗಾಂಧಿ(Rahul Gandhi) ಅವರು ಇದೆಲ್ಲವನ್ನು ನೋಡುತ್ತಾ ಹಾಗೇ ನಿಂತಿದ್ದಾರೆ.

 

ಹೌದು, ಅಪರಿಚಿತರು ಕಲಾಪದೊಳಗೆ ಸಂಸತ್ ಒಳಗೆ ನುಗ್ಜಿ ಸಂಚಲನ ಸೃಷ್ಟಿಸಿದಾಗ ಕಾಂಗ್ರೆಸ್ ವರಿಷ್ಠರೊಂದಿಗೆ ಸಂಸದ ರಾಹುಲ್ ಗಾಂಧಿ ಅಲ್ಲಿನ ಪರಿಸ್ಥಿತಿ ನೋಡುತ್ತಾ ನಿಂತಿದ್ದರು. ಅಲ್ಲದೆ ಅವರು ಈ ವೇಳೆ ಆತಂಕ ಭಯದಲ್ಲಿ ನಿಂತಿದ್ದಂತೆ ಕಾಣುತ್ತಿತ್ತು. ಎಂತವರಿಗೂ ಇದು ಭಯ ತರುವುದಿಲ್ಲವೇ ಮತ್ತೆ. ಇಡೀ ಇದೇಶದ ಗಣ್ಯಾತಿ ಗಣ್ಯರು ಇರುವ ಜಾಗಕ್ಕೆ, ಅದೂ ಕೂಡ ಅಷ್ಟೊಂದು ಭದ್ರತೆ ಇರುವ ಸದನಕ್ಕೆ ಏಕಾಏಕಿ ಹೀಗೆ ನುಗ್ಗಿ ಬಂದಾಗ ಎಂತವರಿಗೂ ಗುಂಡಿಗೆ ನಡುಗುತ್ತೆ. ಅಂತೆಯೇ ರಾಹುಲ್ ಅವರು ಕೂಡ ಭಯಗೊಂಡಿದ್ದಾರೆ. 

 

ಇನ್ನು ಒಳನುಗ್ಗಿ ದಾಳಿ ನಡೆಸಿದವರನ್ನು ಸಾಗರ್ ಶರ್ಮಾ ಮತ್ತು ನೀಲಂ ಕೌರ್ ಎಂದು ಗುರುತಿಸಲಾಗಿದೆ. ಇವರು ಮಹರಾಷ್ಟ್ರ ಮತ್ತು ಹರಿಯಾಣ ಮೂಲದವರು ಎಂದು ತಿಳಿದುಬಂದಿದೆ. ಇವರೊಂದಿಗೆ ಒಟ್ಪು ಆರು ಮಂದಿಯನ್ನು ಬಂಧಿಸಲಾಗಿದೆ. ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ಇವರು ಪಾಸ್ ಪಡೆದುಕೊಂಡಿದ್ದಾರೆ. ಸದ್ಯ ಇವರನ್ನು ಪೋಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸಲಾಗುತ್ತಿದೆ.