Ganga kalyana Scheme: ಕೃಷಿ ಭೂಮಿ ಇರುವವರೇ, ಒಂದು ರೂ ಖರ್ಚಿಲ್ಲದೆ ಸರ್ಕಾರವೇ ಬೋರ್ವೆಲ್ ಕೊರೆಸಿ, ಎಲ್ಲಾ ಸೌಲಭ್ಯ ಕಲ್ಪಿಸಿ ಕೊಡುತ್ತೆ – ಬೇಗ ಅರ್ಜಿ ಹಾಕಿ !!
Ganga kalyana Scheme: ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ರೈತರು ಕೂಡ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಅಂತೆಯೇ ಇದೀಗ ಸರ್ಕಾರ ಉಚಿತವಾಗಿ ಬೊರ್ವೆಲ್ ಕೊರೆಸಿ, ಎಲ್ಲಾ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಿದೆ. ಇದಕ್ಕಾಗಿ ಅರ್ಜಿ ಆಹ್ವಾನಿಸಿದ್ದು ಇನ್ನೆರಡು ದಿನ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಹೌದು, ಕೃಷಿ ಭೂಮಿಯಲ್ಲಿ ರೈತರಿಗೆ ತುಂಬಾ ಅಗತ್ಯವಾಗಿ ಬೇಕಾಗಿರುವುದು ನೀರು. ಕೆರೆ, ಬಾವಿ, ನದಿ, ಹೊಳೆಗಳಿದ್ದವರಿಗೆ ಇದು ಸುಲಭದಲ್ಲಿ ಸಿಗುತ್ತದೆ. ಆದರೆ ಉಳಿದವರಿಗೆ ಬೊರ್ವೆಲ್ ಅನ್ನು ಅರಸಬೇಕು. ಆದರೆ ಒಂದು ಬೊರ್ವೆಲ್ ತೆಗೆಸಿ, ಪಂಪ್ ಇಳಿಸಿ, ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುವಾಗ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ ರೈತರಿಗೆ ಇಷ್ಟು ವ್ಯಯಿಸುವ ಶಕ್ತಿ ಇರುವುದಿಲ್ಲ. ಹೀಗಾಗಿ ಇಂಥ ರೈತರಿಗೆ ನೆರವಾಗಲು ಸರ್ಕಾರ ಮುಂದಾಗಿದ್ದು, ಉಚಿತವಾಗಿ ಬೊರ್ವೆಲ್ ಕೊರೆಸಲು ‘ಗಂಗಾ ಕಲ್ಯಾಣ'(Ganga kalyana scheme)ಯೋಜನೆಯಡಿ ಅರ್ಜಿ ಆಹ್ವಾನಿಸಿದೆ.
ಏನಿದು ಯೋಜನೆ?
ಬೋರ್‌ವೆಲ್ ಕೊರೆಯುವ ಮೂಲಕ ಹಾಗೂ ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ. ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್-ಮೋಟಾರ್ ಮೂಲಕ ನೀರೆತ್ತುವುದು ಈ ಯೋಜನೆಯ ಉದ್ದೇಶವಾಗಿದೆ.
ಯಾವ ಜಿಲ್ಲೆಯ ಜನರಿಗೆ ಇದು ಅನುಕೂಲ?
ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಈ ಯೋಜನೆ ಅನ್ವಯವಾಗುತ್ತದೆ.
ಸಹಾಯಧನ ಹೇಗೆ ನೀಡಲಾಗುತ್ತೆ?
ಈ ಯೋಜನೆಯಡಿ ಘಟಕದ ವೆಚ್ಚವನ್ನು 4 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. 3.5 ಲಕ್ಷ ಸಹಾಯಧನವಾಗಿದೆ. ಬಾಕಿ 50 ಸಾವಿರ ರೂ.ಗಳನ್ನು ಶೇ.4ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ. ಇತರೆ ಜಿಲ್ಲೆಗಳ ರೈತರಿಗೆ 2ಲಕ್ಷ ಸಹಾಯಧನವಿದ್ದು 50 ಸಾವಿರವನ್ನು ವಾರ್ಷಿಕ ಶೇ.4ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ. ಕೊಳವೆ ಬಾವಿ ಕೊರೆದು ಬೋರ್ವೆಲ್ ಮೂಲಕ ವಿದ್ಯುತ್ ಸಹಾಯದಿಂದ ಪಂಪ್ ಸೆಟ್ (pump set) ಓಡಿಸಲು ಸರ್ಕಾರದಿಂದ ಸಂಪೂರ್ಣ ಸಹಾಯಧನ
ಅರ್ಹತೆ ಏನು?
• ಫಲಾನುಭವಿಯು ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.
• ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಅವರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
• ವಾರ್ಷಿಕ ಕೌಟುಂಬಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ₹81,000 ಹಾಗೂ ನಗರ ಪ್ರದೇಶಗಳಲ್ಲಿ ₹1.03 ಲಕ್ಷ ಮೀರಿಬಾರದು.
• ಅರ್ಜಿದಾರರು ‘ಆಧಾರ್’ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು
ಅರ್ಜಿದಾರರ ವಯಸ್ಸು 18 ರಿಂದ 55 ವರ್ಗಗಳ ಮಿತಿಯಲ್ಲಿರಬೇಕು.
ಅರ್ಜಿ ಸಲ್ಲಿಸಲು 2 ದಿನ ಮಾತ್ರ ಭಾಕಿ:
ಈ ಹಿಂದೆಯೇ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೇ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಕೃಷಿಕರ ಒತ್ತಾಯದ ಮೇರೆಗೆ ಈ ದಿನಾಂಕದ ವಿಸ್ತರಣೆ ಮಾಡಲಾಗಿದ್ದು ಡಿಸೆಂಬರ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (December 15th is last date) ವಾಗಿದೆ. ಇನ್ನು ಕೇವಲ ಎರಡು ದಿನಗಳು ಮಾತ್ರ ಕಾಲಾವಕಾಶವಿದ್ದು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾದರಿಂದ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents for apply)
ಕೃಷಿಕರು ತಮ್ಮ ಆಧಾರ್ ಸಂಖ್ಯೆ, ಪಹಣಿ ಪತ್ರ, ಭೂ ದಾಖಲೆ, ಬ್ಯಾಂಕು ಖಾತೆಯ ವಿವರ, ಪಾಸ್ ಪೋರ್ಟ್ ಅಳತೆಯ ಫೋಟೋ, ಸ್ವಯಂ ಘೋಷಣಾ ಪ್ರಮಾಣ ಪತ್ರ ಒದಗಿಸಬೇಕು.
ಗಂಗಾ ಕಲ್ಯಾಣ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕದಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಕ್ರಮವನ್ನು ಹಂತ ಹಂತವಾಗಿ ವಿವರಿಸಲಾಗಿದೆ.
ಹಂತ 1: ಮೊದಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್ https://kmdc.karnataka.gov.in/ ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ, “ಆನ್‌ಲೈನ್ ಸರ್ವಿಸಸ್” ಟ್ಯಾಬ್ ಮೇಲೆ ಸ್ಕ್ರಾಲ್ ಮಾಡಿ ಮತ್ತು ಕೆಳಗೆ ತೋರಿಸುವ “ಆನ್‌ಲೈನ್ ಅಪ್ಲಿಕೇಶನ್” ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ನಂತರ https://kmdc.karnataka.gov.in/info-3/ONLINE+APPLICATION/kn ನೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆನ್‌ಲೈನ್ ಅಪ್ಲಿಕೇಶನ್ ಪುಟವು ತೆರೆಯುತ್ತದೆ. “ಗಂಗಾ ಕಲ್ಯಾಣ ಯೋಜನೆ – ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ” ಎಂಬ ಬಟನ್ ಒತ್ತಿರಿ.
ಹಂತ 4: ನೇರ ಲಿಂಕ್ – https://kmdc.kar.nic.in/loan/Login.aspx
ಹಂತ 5: ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, KMDC ಕರ್ನಾಟಕ ಲೋನ್ ಲಾಗಿನ್ ಪುಟವು ಕಾಣಿಸಿಕೊಳ್ಳುತ್ತದೆ
ಹಂತ 6: ಈ ಪುಟದಲ್ಲಿ, ಕರ್ನಾಟಕ ಗಂಗಾ ಕಲ್ಯಾಣ ಯೋಜನೆ ಆನ್‌ಲೈನ್ ಅರ್ಜಿ ನಮೂನೆಯನ್ನು ತೆರೆಯಲು “ಗಂಗಾ ಕಲ್ಯಾಣ ಯೋಜನೆ” ಲಿಂಕ್ ಅನ್ನು ಕ್ಲಿಕ್ ಮಾಡಿ
ventolin for sale: ventolin 4mg uk – ventolin buy
ventolin.com
furosemide 100 mg: cheap lasix – furosemide 100 mg
neurontin 300mg caps: neurontin for sale online – gabapentin medication
neurontin rx: neurontin cost uk – neurontin cost
mexican rx online: mexican pharmacy – mexican online pharmacies prescription drugs
top 10 online pharmacy in india: Online medication home delivery – india online pharmacy