NIA Raid: ಕರ್ನಾಟಕ ಸೇರಿ ದೇಶದ 44 ಕಡೆ ದಾಳಿ ಮಾಡಿ ಐಸಿಸ್​ ಉಗ್ರರ ಭೇಟೆಯಾಡಿದ NIA

National news ISIS terror conspiracy case NIA raids 44 locations in Karnataka Maharashtra latest news

ISIS terror conspiracy case: ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುವ ಭಯೋತ್ಪಾದಕ ಸಂಘಟನೆಯ ಯೋಜನೆಗಳನ್ನು ವಿಫಲಗೊಳಿಸಲು ಎನ್ಐಎ ವ್ಯಾಪಕ ತನಿಖೆ ನಡೆಸುತ್ತಿದ್ದು, ಇದೀಗ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಜಾಗತಿಕ ಭಯೋತ್ಪಾದಕ ಗುಂಪು ಐಸಿಸ್( ISIS terror conspiracy case) ಸಂಚು ರೂಪಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಮಾರು 44 ಸ್ಥಳಗಳಲ್ಲಿ ದಾಳಿ (NIA Raid) ಆರಂಭಿಸಿದೆ ಎಂದು ಎಎನ್ಐ ವರದಿ ಮಾಡಿದೆ.

 

ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಒಂದುಕಡೆ, ಪುಣೆಯಲ್ಲಿ 2 ಕಡೆ, ಠಾಣೆ ಗ್ರಾಮೀಣದಲ್ಲಿ 31 ಕಡೆ, ಠಾಣೆ ನಗರದಲ್ಲಿ 9 ಕಡೆ ಮತ್ತು ಭಯಂದರ್​ನಲ್ಲಿ ಒಂದು ಕಡೆ ಎನ್ಐಎ ಅಧಿಕಾರಿಗಳು ಶೋಧನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ರಾಷ್ಟ್ರೀಯ ತನಿಖಾ ದಳವು (National Investigation Agency) ನಕಲಿ ನೋಟು (Fake Currency) ದಂಧೆ ಮೇಲೆ ತೀವ್ರ ಶೋಧ ನಡೆಸಿ, ರಾಷ್ಟ್ರೀಯ ತನಿಖಾ ದಳವು ಏಕಕಾಲದಲ್ಲಿ ನಾಲ್ಕು ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ದಾಳಿ (NIA Raid) ನಡೆಸಿದ್ದು, ಅದರಲ್ಲಿ ಕರ್ನಾಟಕದ ಬಳ್ಳಾರಿಯಲ್ಲೂ ಒಬ್ಬನನ್ನು ಸೆರೆ (One arrested in Ballary) ಹಿಡಿದಿದೆ. ಬಳ್ಳಾರಿಯಲ್ಲಿ ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ನೋಟು, ನೋಟು ತಯಾರಿಸುವ ಪೇಪರ್, ಪ್ರಿಂಟಿಂಗ್ ಮೆಷಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ 500, 200, ಹಾಗೂ 100 ರೂ ಮುಖಬೆಲೆಯ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ.

ಸಾಕಷ್ಟು ಪುರಾವೆ ದೊರೆತ ಬಳಿಕ ಎನ್‌ಐಎ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಹುಲ್‌ ತಾನಾಜಿ ಪಾಟೀಲ್‌ ಅಲಿಯಾಸ್‌ ಜಾವೇದ್‌, ಉತ್ತರ ಪ್ರದೇಶದ ಶಹಜಹಾನ್‌ ಪುರ ಜಿಲ್ಲೆಯ ವಿವೇಕ್‌ ಠಾಕೂರ್‌ ಅಲಿಯಾಸ್‌ ಆದಿತ್ಯ ಸಿಂಗ್‌ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಮಹೇಂದರ್‌ ಎಂಬವರ ಮೇಲೆ ಕಣ್ಣಿಟ್ಟಿತ್ತು ಮತ್ತು ಶನಿವಾರ ದಾಳಿ ಮಾಡಿ ಅವರನ್ನು ಬಂಧಿಸಿತು.

ಇದಲ್ಲದೆ ಬಿಹಾರ ಜಿಲ್ಲೆಯ ರೋಹ್ತಾಸ್‌ ಜಿಲ್ಲೆಯ ಶಶಿಭೂಷಣ್‌, ಮಹಾರಾಷ್ಟ್ರದ ಯಾವತ್ಮಲ್‌ ಜಿಲ್ಲೆಯ ಶಿವ ಪಾಟೀಲ್‌ ಅಲಿಯಾಸ್‌ ಭೀಮರಾವ್‌ ಅವರ ಮನೆಗಳಿಗೂ ದಾಳಿ ಮಾಡಲಾಗಿದೆ. ಇನ್ನು ವಿವೇಕ್‌ ಠಾಕೂರ್‌ ಮನೆಯಿಂದ ಕರೆನ್ಸಿ ಮತ್ತು ಪ್ರಿಂಟಿಂಗ್‌ ಪೇಪರ್‌ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳಿಗೆ ಬಂಪರ್ ನ್ಯೂಸ್ – ನಿಮಗಿನ್ನೂ ಪ್ರತೀ ತಿಂಗಳು ಸಿಗುತ್ತೆ ಇಷ್ಟು ದುಡ್ಡು !!

Leave A Reply

Your email address will not be published.