Home International Shotgun: ಗೆಳೆಯನಿಗೆ ಶೂಟ್ ಮಾಡಿ ತಾನೂ ಪ್ರಾಣಬಿಟ್ಟ 14ರ ಸ್ಕೂಲ್ ಹುಡುಗಿ – ಕಾರಣ ಮಾತ್ರ...

Shotgun: ಗೆಳೆಯನಿಗೆ ಶೂಟ್ ಮಾಡಿ ತಾನೂ ಪ್ರಾಣಬಿಟ್ಟ 14ರ ಸ್ಕೂಲ್ ಹುಡುಗಿ – ಕಾರಣ ಮಾತ್ರ ಭಯಾನಕ!!

Shotgun

Hindu neighbor gifts plot of land

Hindu neighbour gifts land to Muslim journalist

Shotgun: ರಷ್ಯಾ ಶಾಲೆಯೊಂದರಲ್ಲಿ (Russian School) ವಿದ್ಯಾರ್ಥಿಯೊಬ್ಬಳು (14 Year Girl) ಶಾಟ್‌ಗನ್‌ನಿಂದ (Shotgun) ಗುಂಡು ಹಾರಿಸಿದ ಪರಿಣಾಮ ಒಬ್ಬ ಸಹಪಾಠಿ ಮೃತಪಟ್ಟು, ಐವರು ಗಾಯಗೊಂಡ ಘಟನೆ ವರದಿಯಾಗಿದೆ.

ರಷ್ಯಾದ ಬ್ರಿಯಾನ್ಸ್ಕ್ (Russia Bryansk) ಪ್ರದೇಶದ ಶಾಲೆಯೊಂದರಲ್ಲಿ 14 ವರ್ಷದ ಬಾಲಕಿಯೊಬ್ಬಳು ಶಾಲೆಗೆ ಪಂಪ್ ಆ್ಯಕ್ಷನ್ ಶಾಟ್‌ಗನ್ ತಂದಿದ್ದಳು ಎನ್ನಲಾಗಿದೆ. ಶೂಟ್ ಗನ್ ನಿಂದ ಯದ್ವ- ತದ್ವ ಶೂಟ್ ಮಾಡಿದ್ದಾಳೆ ಎನ್ನಲಾಗಿದ್ದು, ತನ್ನ ಸಹಪಾಠಿಗಳಿಗೆ ಶೂಟ್ ಮಾಡಿರುವ ವಿದ್ಯಾರ್ಥಿನಿ ತಾನು ಸಾಯುವ ಜೊತೆಗೆ ಮತ್ತೊಬ್ಬ ಸಹಾಪಾಠಿಯನ್ನು ಕೊಂದಿದ್ದಾಳೆ ಎನ್ನಲಾಗಿದೆ.

ಇನ್ನುಳಿದ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಗುಂಡಿನ ದಾಳಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಗಾಯಗೊಂಡ ಐವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಹುಡುಗಿಯ ತಂದೆಯನ್ನು ಅವರು ವಾಸವಿರುವ ಅಪಾರ್ಟ್‌ಮೆಂಟ್‌ನಿಂದ ಕರೆ ತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾ ಸಮಿತಿ ಮಾಹಿತಿ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ : Remove Stains From Clothes: ಬಟ್ಟೆ ಮೇಲೆ ಟೀ, ಕಾಫಿ ಚೆಲ್ಲಿ ಆದ ಕಲೆ ಹೋಗುತ್ತಿಲ್ಲವೇ? ಹೀಗೆ ಮಾಡಿದ್ರಾಯ್ತು, ಕಲೆ ಸಂಪೂರ್ಣ ಮಾಯ