Home latest Arjuna elephant death case : ಅರ್ಜುನ ಆನೆ ಸಾವಿನ ವಿಚಾರ- ಬಯಲಾಯ್ತು ಮತ್ತೊಂದು ರೋಚಕ...

Arjuna elephant death case : ಅರ್ಜುನ ಆನೆ ಸಾವಿನ ವಿಚಾರ- ಬಯಲಾಯ್ತು ಮತ್ತೊಂದು ರೋಚಕ ಸತ್ಯ!! ವೈರಲ್ ಆಯ್ತು ಮಾವುತ ಮಾತಾಡಿದ ಆಡಿಯೋ!!

Arjuna elephant death case

Hindu neighbor gifts plot of land

Hindu neighbour gifts land to Muslim journalist

Arjuna elephant death case: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ (Mysuru Dasara) 8 ಬಾರಿ ಅಂಬಾರಿ ಹೊತ್ತು ನಾಡದೇವತೆ ಚಾಮುಂಡೇಶ್ವರಿಯನ್ನು ಮೆರೆಸಿದ್ದ ಅರ್ಜುನ (Arjuna), ವಿವಿಧೆಡೆ ಹುಲಿ ಹಾಗೂ ಪುಂಡಾನೆಗಳ ಕಾರ್ಯಾಚರಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದ ಸಾಕಾನೆ ‘ಅರ್ಜುನ’, ಇದೇ ಕಾರ್ಯದಲ್ಲಿ ತೊಡಗಿರುವಾಗಲೇ ಹೋರಾಡುತ್ತಾ ವಿರೋಚಿತ ಸಾವು ಕಂಡಿದೆ ಎಂದು ಇದುವರೆಗೂ ಹೇಳಲಾಗಿದ್ದು, ಇದು ಸುಳ್ಳು ಅರಣ್ಯಾಧಿಕಾರಿಗಳ ನಿರ್ಲಕ್ಷದಿಂದ ಅರ್ಜುನ ಸಾವನ್ನಪ್ಪಿದ್ದಾನೆ(Arjuna elephant death case) ಎನ್ನುಲಾಗಿತ್ತು. ಈ ಕುರಿತಂತೆ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದ್ದು, ಅರ್ಜುನನ ಮಾವುತ ಮಾತನಾಡಿದ ಆಡಿಯೋ ಒಂದು ವೈರಲ್ ಆಗಿದ್ದು ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ.

ಅಂದಹಾಗೆ ಅರ್ಜುನನ ಮಾವುತಾದ ರಾಜು ಅವರು ವಿನೋದ್ ಎಂಬುವವರ ಜೊತೆ ಆನೆ ಸಾವಿಗೆ ನಿಜವಾದ ಕಾರಣವೇನು ಎಂಬುದನ್ನು ಬಿಕ್ಕಿ ಬಿಕ್ಕಿ ಅತ್ತು ಮಾತನಾಡಿದ ಆಡಿಯೋ ವೈರಲ್ ಆಗಿದ್ದು ಇದನ್ನು ಕೇಳುವ ಎಂತವರ ಮನಸ್ಸು ಅಯ್ಯೋ ಎನ್ನುತ್ತದೆ. ಅಷ್ಟಕ್ಕೂ ಏನಿದೆ ಗೊತ್ತಾ ಆ ಆಡಿಯೋದಲ್ಲಿ?!

ರಾಜು ಎಂಬುವವರು ವಿನೋದ್ ಅವರಿಗೆ ಕಾಲ್ ಮಾಡಿ ‘ಅಣ್ಣಾ ನಮ್ಮ ಅರ್ಜನನ್ನು ಬೇಕಂತಲೇ ಕೊಂದಿದ್ದಾರೆ ಅಣ್ಣಾ, ಡಾಕ್ಟರ್, ಸ್ಟಾಫು ಎಲ್ಲಾ ಸೇರಿ ಮಾಡಿದ್ದಾರೆ ಅಣ್ಣಾ. ಯಾಕೆಂದರೆ ಕಾಡಾನೆ ಹಿಡಿಯಲು ಹೋದಾಗ ಅದನ್ನು ಅರ್ಜುನ ಕಾದಾಡಿ ಓಡಿಸಿದ. ಆ ವೇಳೆಗೆ ಆನೆ ಡಾಕ್ಟರ್ ಪ್ರಶಾಂತ್ ಆನೆಗೆ ಅರೆವಳಿಕೆ ಚುಚ್ಚುಮದ್ದು ಕೊಟ್ಟಿದ್ದಾನೆ. ಪ್ರಶಾಂತ ಆನೆ ಬಿದ್ದಿದೆ. ಆಗ ಅರ್ಜುನ ಅದನ್ನು ಕಾಯುತ್ತಾ ಅಲ್ಲೆ ನಿಂತಿರುವಾಗ ಕಾಡಾನೆ ಮತ್ತೆ ಬಂದಿದೆ. ಅರ್ಛುನ ಮತ್ತೆ ಕಾಡಾನೆ ಜೊತೆ ಕಾದಾಡಿದೆ. ಆಗ ಇವರು ಅರ್ಜುನನ ಕಾಲಿಗೆ ಗುಂಡು ಹೊಡೆದಿದ್ದಾರೆ. ಪಾಪಾ ಮ, ಅರ್ಜುನ ಕುಂಟುತ್ತಾ ಕುಂಟುತ್ತಾ ಹೋರಾಟ ಮಾಡಿ ಅವರೆಲ್ಲರ ಪ್ರಾಣ ಉಳಿಸಿ ತಾನು ಸತ್ತೋಯ್ತು ಅಣ್ಣಾ’ಎಂದು ಬಿಕ್ಕಿ ಬಿಕ್ಕಿ ಅಳುತ್ತಾನೆ.

ಅಲ್ಲದೆ ನಮ್ಮ ಅರ್ಜುನನಿಗೇನೋ ತಪ್ಪಿ ಗುಂಡು ಹೊಡೆದರು ಬಿಡಿ, ಆದರೆ ಪ್ರಶಾಂತ್ ಅನೇಗೆ ಯಾಕೆ ಅರೆವಳಿಕೆ ಮದ್ದು ಹೊಡುದ್ರು? ಸಾಕಾನೆ ಯಾವುದು, ಕಾಡಾನೆ ಯಾವುದು ಗೊತ್ತಾಗಲ್ವಾ? ಇದರ ಹಿಂದೆ ಏನೋ ಶಡ್ಯಂತ್ರ ಇದೆ ಅಣ್ಣಾ.. ದಯವಿಟ್ಟು ಆ ಡಾಕ್ಟರ್ ಇನ್ನು ಮುಂದೆ ಆನೆ ಡಾಕ್ಟರ್ ಆಗಿರಬಾರದು. ಇದನ್ನು ಎಲ್ಲಾ ನ್ಯೂಸ್ ಅವರಿಗೆ ಹೇಳಿ ಅಣ್ಣಾ ಎಂದು ಬಿಕ್ಕಿ ಬಿಕ್ಕಿ ಅಳುತ್ತಾನೆ. ಸದ್ಯ ಈ ಆಡಿಯೋಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

https://www.facebook.com/share/v/hmTcy4i4pctHMJhS/?mibextid=jmPrMh

ಇದನ್ನೂ ಓದಿ: Vinod raj: ಕೊನೆಗೂ ತನ್ನ ನಿಜವಾದ ಅಪ್ಪ ಯಾರೆಂದು ಸತ್ಯ ಬಿಚ್ಚಿಟ್ಟ ವಿನೋದ್ ರಾಜ್ – ರಟ್ಟಾಯ್ತು ಹಲವು ವರ್ಷಗಳ ಗುಟ್ಟು!!