Cyclone Michaung: ಮೈಚಾಂಗ್ ಚಂಡಮಾರುತ ಎಫೆಕ್ಟ್- ಈ 2 ದಿನ ರಾಜ್ಯಾದ್ಯಂತ ಸಿಕ್ಕಾಪಟ್ಟೆ ಮಳೆ !!

Michaung Cyclone effect two days heavy rain alert in these states latest news

Cyclone Michaung: ಮೈಚಾಂಗ್ ಚಂಡಮಾರುತ(Cyclone Michaung) ತಮಿಳುನಾಡನ್ನು ನಲುಗಿಸಿಬಿಟ್ಟಿದೆ. ಜೊತೆಗೆ ಆಂಧ್ರಪ್ರದೇಶಕ್ಕೂ ಬಿಸಿಮುಟ್ಟಿಸಿದೆ. ಇದರ ಎಫೆಕ್ಟ್ ಇದೀಗ ರಾಜ್ಯಕ್ಕೂ ಆಗಲಿದ್ದು ಈ ಎರಡು ದಿನ ರಾಜ್ಯಾದ್ಯಂತ ಸಿಕ್ಕಾಪಟ್ಟೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಚಂಡಮಾರುತ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಜನರಿಗೆ ತುಂಬಾ ಎಫೆಕ್ಟ್ ನೀಡಿದೆ. ಚೈನ್ನೈ ಅಲ್ಲಂತೂ ಅನೇಕ ಪ್ರದೇಶಗಳನ್ನು ಮುಳುಗಿಸಿದೆ. ಇದೀಗ ಭಾರತೀಯ ಹವಾಮಾನ ಇಲಾಖೆ ಹೊಸ ಪ್ರಕಟಣೆ ಹೊರಡಿಸಿದ್ದು, ಡಿಸೆಂಬರ್ 08 ಹಾಗೂ 09 ರಂದು ಎರಡು ರಾಜ್ಯಗಳಿಗೆ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿದೆ.

ಹೌದು, ಮೈಚಾಂಗ್ ಚಂಡಮಾರುತದ ಹೊಡೆತಕ್ಕೆ ತಮಿಳುನಾಡು ಈಗಾಗಲೇ ಸಿಲುಕಿದ್ದು, ಸದ್ಯ ಮುಂದಿನ ಎರಡು ದಿನಗಳ ಕಾಲ ಕೇರಳದಲ್ಲಿಯೂ ಸಹ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ. ಜೊತೆಗೆ ಹೈ ಅಲರ್ಟ್ ಕೂಡ ಘೋಷಿಸಿದೆ.

ಇದನ್ನೂ ಓದಿ: Muruga shree: ಜೈಲಿಂದ ಹೊರಬರುತ್ತಿದ್ದಂತೆ ಮುರುಘಾ ಶ್ರೀಗೆ ಒಲಿದು ಬಂತು ಅದೃಷ್ಟ- ಸಿಕ್ಕೇ ಬಿಡ್ತು ಹೊಸ ಅವಕಾಶ !!

Leave A Reply

Your email address will not be published.