Muruga shree: ಜೈಲಿಂದ ಹೊರಬರುತ್ತಿದ್ದಂತೆ ಮುರುಘಾ ಶ್ರೀಗೆ ಒಲಿದು ಬಂತು ಅದೃಷ್ಟ- ಸಿಕ್ಕೇ ಬಿಡ್ತು ಹೊಸ ಅವಕಾಶ !!
Karnataka news muruga seer regained administrative authority of Chitradurga muruga mutt
Muruga seer: ಲೈಂಗಿಕ ದೌರ್ಜನ್ಯ ವಿಚಾರವಾಗಿ ಜೈಲು ಪಾಲಾಗಿದ್ದ ನಾಡಿನ ಪ್ರಸಿದ್ಧ ಮಠದ ಪೀಠಾದಿಪತಿಗಳಾಗಿದ್ದ ಚಿತ್ರದುರ್ಗದ ಮುರುಘಾ ಶ್ರೀಗಳು ಸುಮಾರು 14 ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಮಠಕ್ಕೆ ಆಗಮಿಸಿದ್ದಾರೆ. ಹೀಗೆ ಜೈಲಿಂದ ಹೊರಬರುತ್ತಿದ್ದಂತೆ ಶ್ರೀಗಳಿಗೆ ಅದೃಷ್ಟ ಖುಲಾಯಿಸಿದೆ.
ಹೌದು, ಪೋಕ್ಸೋ (POCSO) ಕೇಸಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾಶ್ರೀ (Muruga seer) ಸಕಲ ಗೌರವಾಧಾರಗಳೊಂದಿಗೆ, ಭರ್ಜರಿ ಸ್ವಾಗತದೊಂದಿಗೆ ಮತ್ತೆ ತಮ್ಮ ಮಠಕ್ಕೆ (Muth) ಆಗಮಿಸಿದ್ದಾರೆ. ಆಗಮಿಸಿದ ಕೆಲವೇ ದಿನಗಳಲ್ಲಿ ತಮ್ಮ ಮಠದ ಅಧಿಕಾರವನ್ನು ಮರಳಿ ಪಡೆದಿದ್ದಾರೆ. ಈ ಮೂಲಕ ಸ್ವಾಮಿಗಳಿಗೆ ಹೊಸ ಅವಕಾಶ ಸಿಕ್ಕಿದೆ. ಈ ಕುರಿತು ಮಠದ ಆಡಳಿತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಅಂದಹಾಗೆ ಶರಣರು ಜೈಲುಪಾಲಾಗಿದ್ದ ವೇಳೆ ರಾಜ್ಯ ಸರ್ಕಾರ ಮುರುಘಾಮಠದ ಆಡಳಿತ ನಿರ್ವಹಿಸಲು ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು. ಆದರೆ ಇದನ್ನು ಮಠದ ಪರ ವಕೀಲರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಬಳಿಕ ಕೋರ್ಟ್ ಇದನ್ನು ರದ್ದುಪಡಿಸಿ ಜಿಲ್ಲಾ ಪ್ರಧಾನ ನ್ಯಾಯದೀಶರಿಗೆ ಈ ಅಧಿಕಾರ ನೀಡಿತ್ತು. ಹೀಗಾಗಿ ಈವರೆಗೆ ಚಿತ್ರದುರ್ಗ (Chitradurga) ಪಿಡಿಜೆ ಅವರು ಮಠದ ಆಡಳಿತಾಧಿಕಾರಿ ಆಗಿದ್ದರು. ಇದೀಗ ಶ್ರೀಗಳು ಮರಳಿ ಬಂದ ಬಳಿಕ ಅವರಿಗೆ ಅಧಿಕಾರ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: B S Yadiyurappa: ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರ – ಯಡಿಯೂರಪ್ಪ ಕೊಟ್ರು ಶಾಕಿಂಗ್ ಹೇಳಿಕೆ!!