Home latest Gruhalakshmi 4th installment money : 3 ಆಯ್ತು ಇದೀಗ ‘ಗೃಹಲಕ್ಷ್ಮೀ’ಯ 4ನೇ ಕಂತಿನ ಹಣಕ್ಕೆ...

Gruhalakshmi 4th installment money : 3 ಆಯ್ತು ಇದೀಗ ‘ಗೃಹಲಕ್ಷ್ಮೀ’ಯ 4ನೇ ಕಂತಿನ ಹಣಕ್ಕೆ ಬಂತು ಹೊಸ ರೂಲ್ಸ್ – ಇಂತವರಿಗಿನ್ನು ಸಿಗೋದೇ ಇಲ್ಲ ಗೃಹಲಕ್ಷ್ಮೀ ದುಡ್ಡು

Gruhalakshmi 4th installment money

Hindu neighbor gifts plot of land

Hindu neighbour gifts land to Muslim journalist

Gruhalakshmi 4th installment money : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯಡಿ(Gruhalakshmi Scheme) ಈಗಾಗಲೇ ಮೂರು ಕಂತಿನ ಹಣ ಯಜಮಾನಿಯರ ಖಾತೆ ಸೇರಿದೆ. ಇನ್ನು ನಾಲ್ಕನೇ ಕಂತಿನ ಹಣಕ್ಕಾಗಿ (Gruhalakshmi 4th installment money )ಮಹಿಳೆಯರು ಕಾದಿದ್ದು, ಈ ಹಣ ಪಡೆಯಬೇಕೆಂದೆ ಹೊಸ ರೂಲ್ಸ್ ಒಂದನ್ನು ಫಾಲೋ ಮಾಡ್ಲೇಬೇಕು.

ರಾಜ್ಯದ ಗೃಹಲಕ್ಷ್ಮೀಯರೇ ನೀವು 4ನೇ ಕಂತಿನ ಗೃಹಲಕ್ಷ್ಮೀ ಹಣ ಪಡೆಯಬೇಕಂದ್ರೆ ತಪ್ಪದೇ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು. ಅದರಲ್ಲೂ ಕೂಡ ನೀವು ಆಧಾರ್ ಮಾಡಿಸಿ 10 ವರ್ಷಗಳಾಗಿದ್ದರೆ ಈ ಕೂಡಲೇ ಆಧಾರ್ ಅಪ್ಡೇಟ್ ಮಾಡಿ. ಯಾಕೆಂದರೆ ಡಿಸೆಂಬರ್ 14 ಮಾತ್ರ ಇದಕ್ಕೆ ಕಾಲವಕಾಶವಿದ್ದು ನಂತರ ಅಪ್ಡೇಟ್ ಮಾಡಲು ತುಂಬಾ ಕಷ್ಟ ಪಡಬೇಕಾದೀತು. ಒಂದು ವೇಳೆ ನೀವು ಆಧಾರ್ ಅಪ್ಡೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಸೇರಿ ಸರ್ಕಾರದ ಯಾವುದೇ ಯೋಜನೆ ಪಡೆಯಲು ಅರ್ಹರಾಗಿರುವುದಿಲ್ಲ.

ಅಂದಹಾಗೆ ಆಧಾರ್ ಅಪ್ಡೇಟ್(Adhar card Update) ಮಾಡಿಸಲು ಡೆಡ್ ಲೈನ್ ಕೂಡ ಘೋಷಣೆ ಮಾಡಿದ್ದು ಡಿಸೆಂಬರ್ 14 ರವರೆಗೆ ಆನ್‌ಲೈನ್ ಆಧಾರ್ ಅಪ್‌ಡೇಟ್‌ಗಳಿಗೆ ಅವಕಾಶ ನೀಡಿದೆ. ಜೊತೆಗೆ 50 ರೂ ಪಾವತಿಸಬೇಕಾಗಿದೆ. ಅಂದಹಾಗೆ ಸರ್ಕಾರ ನೀಡಿದ ಈ ಗಡುವಿನ ಅವಧಿಯಲ್ಲಿ ಭಾರತೀಯ ನಿವಾಸಿಗಳು ತಮ್ಮ ಮಾಹಿತಿಯನ್ನು-ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್, ಬದಲಾಯಿಸಲು ಅಥವಾ ಸರಿಪಡಿಸಲು ಅವಕಾಶವನ್ನು ನೀಡವಾಗಿದೆ. ಇವುಗಳನ್ನು ಸಾರ್ವಜನಿಕರು ಇಮೇಲ್ ಇಲ್ಲದೇ ಆನ್‌ಲೈನ್ ಪೋರ್ಟಲ್ ಮೂಲಕ ಅಪ್ಡೇಟ್ ಮಾಡಬಹುದು.

ಇನ್ನು ಗೃಹಲಕ್ಷ್ಮೀಯ 3ನೇ ಕಂತಿನ ಹಣ ಬಹುತೇಕ ಎಲ್ಲಾ ಯಜಮಾನಿಯರ ಖಾತೆಗೆ ಜಮಾ ಆಗಿದೆ. ಕೇವಲ 5% ಬಾಕಿ ಇದೆ. ಈ ತಿಂಗಳ ಒಳಗೆ ಇದನ್ನೂ ಜಮಾ ಮಾಡಲಿದ್ದು ಮುಂದಿನ ಅವಧಿಯಿಂದ ಸರಿಯಾದ ಸಮಯಕ್ಕೆ ಹಣ ಸಂದಾಯ ಮಾಡುವುದಾಗಿ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Bar reservation: ಮದ್ಯದಂಗಡಿಗೂ ಕಾಲಿಟ್ಟ ಮೀಸಲಾತಿ – ಯಾರಿಗೆಲ್ಲಾ ಸಿಗುತ್ತೆ ?!