Indian parliament: ಭಾರತೀಯ ಸಂಸತ್ತಿನಿಂದ ಮಹಿಳಾ ಸಂಸದೆಯ ಉಚ್ಚಾಟನೆ !!

Idian parliament: ಪ್ರಶ್ನೆಗಾಗಿ ಲಂಚ ಪಡೆದ ಗಂಭೀರ ಆರೋಪ ಎದುರಿಸಿದ್ದರು. ಹಣ, ಇತರ ಸೌಕರ್ಯಗಳನ್ನು ಪಡೆದು ಮೊಹುವಾ ಮೊಯಿತ್ರಾ ಲೋಕಸಭೆಯಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಸಮಿತಿಯ ಶಿಫಾರಸಿನ ಮೇರೆಗೆ ತೃಣಮೂಲ ಸಂಸದೆ ಮಹುವಾ ಮೊಯಿತ್ರಾ(Mahua Moitra)ಅವರನ್ನು ಭಾರತೀಯ ಸಂಸತ್ತಿನಿಂದ(Indian parliament)ಉಚ್ಚಾಟಿಸಲಾಗಿದೆ.

 

ಹೌದು, ಕೇಂದ್ರ ಬಿಜೆಪಿ(BJP) ಹಾಗೂ ಪ್ರಧಾನಿ ಮೋದಿ(PM Modi) ವಿರುದ್ಧ ಆಕ್ರಮಣಕಾರಿ ಭಾಷಣ ಮಾಡುತ್ತಿದ್ದರೆಂಬ ಕ್ಯಾಶ್ ಫಾರ್ ಕ್ವೆರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಸಮಿತಿಯ ಶಿಫಾರಸಿನ ಮೇರೆಗೆ ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಅವರನ್ನ ಸಂಸತ್ತಿನಿಂದ ಉಚ್ಚಾಟಿಸಲಾಗಿದೆ. ಲೋಕಸಭೆಯಲ್ಲಿ ಬಹುಮತದ ಮೂಲಕ ಲೋಕಸಭೆ ಶಿಸ್ತು ಸಮಿತಿ ಮಾಡಿದ ಶಿಫಾರಸನ್ನು ಲೋಕಸಭೆ ಅಂಗೀಕರಿಸಿತು.

ಅಂದಹಾಗೆ ಅನ್ನೋ ಗಂಭೀರ ಆರೋಪವನ್ನು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಲು ಲೋಕಸಭಾ ಸಭಾಪತಿ 6 ಸದಸ್ಯರ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು. ಈ ವರದಿಯನ್ನು ಇಂದು ಸಂಸದ ವಿನೋದ್‌ ಕುಮಾರ್‌ ಸೋನ್‌ಕರ್‌ ಲೋಕಸಭೆಯಲ್ಲಿ ಮಂಡಿಸಿದ್ದರು. ಪ್ರತಿಪಕ್ಷಗಳು ಸಮಿತಿಯ ನಿರ್ಧಾರವನ್ನು ವಿರೋಧಿಸಿದರೆ ಬಿಜೆಪಿ ಸಂಸದರು ಇದನ್ನು ಬೆಂಬಲಿಸಿದರು.

ಈ ಮೂಲಕ ಮೊಯಿತ್ರಾ ಅವರ “ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಘೋರ ಮತ್ತು ಕ್ರಿಮಿನಲ್ ನಡವಳಿಕೆ” ಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು 17 ನೇ ಲೋಕಸಭೆಯಿಂದ ಹೊರಹಾಕುವಂತೆ ಶಿಫಾರಸು ಮಾಡಿದೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಮೊಯಿತ್ರಾ ಅವರು ಇದು ಬಿಜೆಪಿಯ ಅಂತ್ಯದ ಆರಂಭ ಎಂದು ಕಿಡಿಕಾರಿದ್ದಾರೆ.

ಇದನ್ನು ಓದಿ: Actress Leelavati ಹಿರಿಯ ನಟಿ ಲೀಲಾವತಿ ನಿಧನ!

ಏನಿದು ಪ್ರಕರಣ?
ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಹೀರಾನಂದಾನಿ ಸಮೂಹದ ಸಿಇಒ ದರ್ಶನ್ ಹೀರಾನಂದಾನಿ ಅವರಿಂದ ಮಹುವಾ ಅವರು ಲಂಚ ಪಡೆದಿದ್ದಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ಮೊಯಿತ್ರಾ ಅವರು ಕೇಳಿರುವ 61 ಪ್ರಶ್ನೆಗಳಲ್ಲಿ 50 ಪ್ರಶ್ನೆಗಳು ಅದಾನಿ ಗ್ರೂಪ್‌ನ ಮೇಲೆ ಕೇಂದ್ರೀಕೃತವಾಗಿವೆ. ಪ್ರತಿಸ್ಪರ್ಧಿ ಉದ್ಯಮಿಯೊಬ್ಬರ ಇಚ್ಛೆಯ ಮೇರೆಗೆ ಟಿಎಂಸಿ ಸಂಸದೆ ಅದಾನಿ ಗ್ರೂಪ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ದುಬೆ ಅಕ್ಟೋಬರ್ 15ರಂದು ಸ್ಪೀಕರ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ದೂರಿದ್ದರು.

Leave A Reply

Your email address will not be published.