Home Karnataka State Politics Updates 7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್- ವೇತನದಲ್ಲಿ 20, 484 ರೂ...

7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್- ವೇತನದಲ್ಲಿ 20, 484 ರೂ ಏರಿಕೆ !! ಹೇಗೆ ಗೊತ್ತಾ?

7th Pay Commission

Hindu neighbor gifts plot of land

Hindu neighbour gifts land to Muslim journalist

7th Pay Commission: ದೇಶದ ಕೇಂದ್ರ ನೌಕರರಿಗೆ(7th Pay Commission) ಗುಡ್ ನ್ಯೂಸ್ (Good News)ಹೊರಬಿದ್ದಿದೆ. ಇತ್ತೀಚೆಗಷ್ಟೇ ನೌಕರರ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಫಿಟ್‌ಮೆಂಟ್ ಅಂಶ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ (Central Government)ತೀರ್ಮಾನ ಕೈಗೊಂಡಿದೆ.

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ 2024 ರಲ್ಲಿ ಸಿಹಿ ಸುದ್ದಿಯೊಂದು ಹೊರಬೀಳಲಿದೆ. ಪ್ರಸ್ತುತ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಶೇ.46ರ ದರದಲ್ಲಿ ನೀಡಲಾಗುತ್ತಿದೆ. ಆದರೆ, ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ನೌಕರರ ಇತರ ಭತ್ಯೆಗಳು ಕೂಡಾ ಶೇಕಡಾ 3 ರಷ್ಟು ಏರಿಕೆಯಾಗಲಿದೆ. ಈ ಮೂಲಕ ವೇತನದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಗಳೂ ಇವೆ.ಪ್ರಸ್ತುತ ಸರ್ಕಾರಿ ನೌಕರರು 27 ಪ್ರತಿಶತದಷ್ಟು ಹೆಚ್ಆರ್ ಎ ಪಡೆಯುತ್ತಿದ್ದು, ಇದು ಪರಿಷ್ಕರಣೆಯಾದ ಬಳಿಕ HRA 30% ಆಗಲಿದೆ. ಆದರೆ, ತುಟ್ಟಿಭತ್ಯೆ 50% ತಲುಪಿದ ಸಂದರ್ಭದಲ್ಲಿ ಮಾತ್ರ ಹೆಚ್ಆರ್ ಎ ಕೂಡಾ ಏರಿಕೆಯಾಗುತ್ತದೆ.

ಇದನ್ನು ಓದಿ: Vinod raj: ಅಬ್ಬಬ್ಬಾ.. ವಿನೋದ್ ರಾಜ್ ಅವರ ತಿಂಗಳ ಆದಾಯ ಕೇಳಿದ್ರೆ ನೀವು ತಲೆ ತಿರುಗಿ ಬೀಳ್ತೀರಾ!! ಎಲ್ಲಿಂದ ಬರುತ್ತೆ ಗುರೂ.. ಈ ಪಾಟಿ ದುಡ್ಡು ?!

ಕೇಂದ್ರ ನೌಕರರು ತುಟ್ಟಿಭತ್ಯೆಯ ಜೊತೆಗೆ ಅನೇಕ ರೀತಿಯ ಭತ್ಯೆಗಳನ್ನು ಪಡೆಯಲು ಅರ್ಹತೆ ಪಡೆಯುತ್ತಾರೆ.ಮನೆ ಬಾಡಿಗೆ ಭತ್ಯೆ ಹೆಚ್ಚಳಕ್ಕೆ (HRA)ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದ್ದು, 2021 ರಲ್ಲಿ, ತುಟ್ಟಿಭತ್ಯೆ 25% ದಾಟಿದ ಸಂದರ್ಭ HRA ಪರಿಷ್ಕರಿಸಲಾಗಿತ್ತು. ಜುಲೈ 2021 ರಲ್ಲಿ, DA 25% ದಾಟಿದ ಕೂಡಲೇ, HRAಯನ್ನು ಕೂಡಾ 3% ದಷ್ಟು ಹೆಚ್ಚಿಸಲಾಗಿದೆ. ಪ್ರಸ್ತುತ HRA ದರವನ್ನು 27%, 18% ಮತ್ತು 9% ರಲ್ಲಿ ನೀಡಲಾಗುತ್ತಿದೆ. ಈಗ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಸರ್ಕಾರಿ ನೌಕರರು ಎದುರು ನೋಡುತ್ತಿದ್ದಾರೆ. ವರ್ಷದಲ್ಲಿ ತುಟ್ಟಿಭತ್ಯೆ ಶೇಕಡಾ 50 ತಲುಪುವ ನಿರೀಕ್ಷೆಯಿದ್ದು, ಹೀಗಾದಾಗ ಮತ್ತೊಮ್ಮೆ HRAಯಲ್ಲಿ 3 ಪ್ರತಿಶತದಷ್ಟು ಪರಿಷ್ಕರಣೆಯಾಗಲಿದೆ.