Lord Hanuman: ಈ ಭಂಗಿಯಲ್ಲಿರೋ ಆಂಜನೇಯನ ಫೋಟೋವನ್ನು ಮನೆಯಲ್ಲಿ ಈ ದಿಕ್ಕಿಗೆ ಹಾಕಿ – ಆಮೇಲೆ ಅದೃಷ್ಟ ಖುಲಾಯಿಸೋದನ್ನು ನೀವೇ ನೋಡಿ

Lord Hanuman: ಬಹುತೇಕ ಎಲ್ಲಾ ಹಿಂದೂಗಳ ಮನೆಯಲ್ಲಿ ಆಂಜನೇಯನ (Lord Hanuman) ಫೋಟೋ ಇದ್ದೇ ಇರುತ್ತದೆ. ಆಂಜನೇಯನನ್ನು ಶ್ರೀರಾಮನ ಭಕ್ತ, ವಾಯುಪುತ್ರ, ಮಾರುತಿ, ಬಜರಂಗಬಲಿ ಎಂಬ ಹೆಸರಿನಿಂದ ಧೈರ್ಯ ಮತ್ತು ಶಕ್ತಿಯ ಸಂಕೇತ ಎಂದೇ ಪರಿಗಣಿಸಲಾಗಿದೆ.

ಆದರೆ ಆಂಜನೇಯನ ಫೋಟೋಗಳನ್ನು ಕೆಲವರು ವಾಸ್ತುಪ್ರಕಾರ ಇಡುವುದಿಲ್ಲ. ಆದ್ದರಿಂದ ಮನೆಯಲ್ಲಿನ ನೆಗೆಟಿವ್ ಅಂಶಗಳು ಹೊರ ಹೋಗುವುದಿಲ್ಲ. ಆದರೆ ನೀವು ಸೂಕ್ತ ರೀತಿಯಲ್ಲಿ ದೇವರ ಫೋಟೋ ಇಟ್ಟರೆ ಮನೆಯಲ್ಲಿ ಪಾಸಿಟಿವ್‌ ಎನರ್ಜಿ ಹೆಚ್ಚಾಗುತ್ತದೆ. ಅದಕ್ಕಾಗಿ ಮನೆಯಲ್ಲಿ ಹನುಮಂತನ ಫೋಟೋ ಹೇಗೆ ಇಡಬೇಕು? ಯಾವ ದಿಕ್ಕಿನಲ್ಲಿ ಇಡಬೇಕು? ಯಾವ ಭಂಗಿಯ ಆಂಜನೇಯನ ಫೋಟೋ ಒಳ್ಳೆ ಫಲಿತಾಂಶಗಳನ್ನು ನೀಡಲಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ವಾಸ್ತು ಪ್ರಕಾರ, ಕೂತಿರುವ ಭಂಗಿಯಲ್ಲಿರುವ ಕೆಂಪು ಬಣ್ಣದ ಹನುಮಂತನ ಫೋಟೋವನ್ನು ಯಾವಾಗಲೂ ದಕ್ಷಿಣ ದಿಕ್ಕಿಗೆ ಇಡಬೇಕು. ಆಂಜನೇಯನ ಫೋಟೋ ದಕ್ಷಿಣ ದಿಕ್ಕಿನಲ್ಲಿ ಇದ್ದರೆ ಅದರ ಪ್ರಭಾವ ಯಾವಾಗಲೂ ಧನಾತ್ಮಕವಾಗಿರುತ್ತದೆ. ಯಾವುದೇ ದುಷ್ಟಶಕ್ತಿಯ ಪ್ರಭಾವ ಇದ್ದರೂ ನಿವಾರಣೆ ಆಗುತ್ತದೆ.

ಇನ್ನು ಆಂಜನೇಯನ ಫೋಟೋವನ್ನು ಸದಾ ಉತ್ತರ ದಿಕ್ಕಿಗೆ ಮುಖ ಮಾಡುವಂತೆ ಇಡಬೇಕು. ಉತ್ತರಮುಖಿ ಹನುಮಂತನನ್ನು ದಿನನಿತ್ಯ ಪೂಜಿಸಿದಲ್ಲಿ ಎಲ್ಲಾ ದೇವತೆಗಳ ಅನುಗ್ರಹ ದೊರೆಯುತ್ತದೆ. ಲಕ್ಷ್ಮಿ ಕಟಾಕ್ಷ ಕೂಡಾ ನಿಮಗೆ ಸಿದ್ಧಿಸಲಿದೆ. ಎಲ್ಲಾ ಋಣಾತ್ಮಕ ಅಂಶಗಳು ನಾಶವಾಗಲಿದೆ.

ಇದನ್ನು ಓದಿ: Rishab Shetty: ಏಕಾಏಕಿ ರಿಷಬ್ ಶೆಟ್ಟಿ ವಿರುದ್ಧ ತಿರುಗಿಬಿದ್ದ ತುಳುನಾಡ ಜನ, ಕಾರಣ ಇದೇನಾ ?! ಕಾಂತಾರ- 2 ಬರೋದು ಡೌಟಾ?!

ವಾಸ್ತುಪ್ರಕಾರ ಪಂಚಮುಖಿ ಆಂಜನೇಯನ ಫೋಟೋ ಮನೆಯಲ್ಲಿದ್ದರೆ ಮನೆಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕುಟುಂಬದಲ್ಲಿ ಯಾರಿಗೇ ರೋಗ ರುಜಿನಗಳು ಇದ್ದರೆ, ಹಣಕಾಸಿನ ಸಮಸ್ಯೆ ಇದ್ದರೆ ಎಲ್ಲವೂ ಪರಿಹಾರವಾಗುತ್ತದೆ. ಶತ್ರುಬಾಧೆ ಕೂಡಾ ಇರುವುದಿಲ್ಲ. ಪಂಚಮುಖಿ ಆಂಜನೇಯನ ಫೋಟೋವನ್ನು ಮನೆಯ ಮುಖ್ಯಬಾಗಿಲಿನ ಮೇಲೆ ಅಥವಾ ಎಲ್ಲರಿಗೂ ಕಾಣುವ ರೀತಿ ಇಟ್ಟರೆ ಮನೆಗೆ ದುಷ್ಟಶಕ್ತಿಯ ಪ್ರವೇಶ ಸಾಧ್ಯವೇ ಇಲ್ಲ.

ಬೆಟ್ಟ ಎತ್ತುವ ಭಂಗಿ
ನಿಮ್ಮ ಮನೆಯಲ್ಲಿ ಹನುಮಂತ, ಪರ್ವತವನ್ನು ಎತ್ತಿರುವ ಭಂಗಿಯಲ್ಲಿರುವ ಫೋಟೋ ಇದ್ದರೆ ಒಳ್ಳೆಯದು. ಈ ರೀತಿಯ ಫೋಟೋ ಮನೆಯಲ್ಲಿದ್ದರೆ ಧೈರ್ಯ, ಶಕ್ತಿ, ಆತ್ಮವಿಶ್ವಾಸ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಇನ್ನು ಆಂಜನೇಯನು ಶ್ರೀರಾಮನನ್ನು ತಬ್ಬಿಕೊಂಡಿರುವಂಥ ಭಂಗಿಯ ಮನೆಯಲ್ಲಿದ್ದರೆ ಕುಟುಂಬದ ಒಗ್ಗಟ್ಟು ಕಾಪಾಡುತ್ತದೆ.

ಇನ್ನು ಪೂಜಾ ವಿಧಾನ ಬಗ್ಗೆ ಹೇಳುವುದಾದರೆ, ಮಂಗಳವಾರ ಹಾಗೂ ಶನಿವಾರ ಆಂಜನೇಯನ ಆರಾಧನೆಗೆ ಉತ್ತಮ ಸಮಯ. ಅದಲ್ಲದೆ ಆಂಜನೇಯ ಅಷ್ಟೋತ್ತರ ಶತನಾಮಾವಳಿ, ಹನುಮಾನ್‌ ಚಾಲಿಸಾ ಪಠಿಸಿದರೆ ಶನಿಯ ಸಮಸ್ಯೆಗಳಿಂದ ಪಾರಾಗಬಹುದು.

Leave A Reply

Your email address will not be published.