Vastu Tips: ಕಾರಲ್ಲಿ ಈ ವಸ್ತುಗಳನ್ನು ಇಟ್ಟರೆ ವಾಸ್ತು ಪ್ರಕಾರ ಶುಭವಂತೆ !!

Vastu Tips: ಬಹುತೇಕರು ವಾಹನ ಖರೀದಿಸಿ ನಂತರ ತಮಗೆ ಇಷ್ಟವಿರುವ ದೇವರ ವಿಗ್ರಹ, ಶೋ ಪೀಸ್ ಗಳನ್ನು ವಾಹನದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ವಾಸ್ತು ಸಲಹೆಗಳನ್ನು (Vastu Tips) ಗಮನದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ. ಹೀಗೆ ಮಾಡುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ ಎಂಬ ನಂಬಿಕೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಿಶೇಷ ವಸ್ತುಗಳನ್ನು ನಿಮ್ಮ ಕಾರಿನಲ್ಲಿ ಇಡುವುದು ತುಂಬಾ ಒಳ್ಳೆಯದು ಎನ್ನಲಾಗಿದೆ.

ಅದರಲ್ಲೂ ವಾಸ್ತು ಶಾಸ್ತ್ರದ ಪ್ರಕಾರ ಗಣೇಶನ ಸಣ್ಣ ವಿಗ್ರಹವನ್ನು ಕಾರಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಗಣೇಶನಿಗೆ ಕೇತುವಿನ ಸಂಬಂಧವಿದೆ. ಹಾಗಾಗಿ ಕಾರಿನಲ್ಲಿ ಗಣೇಶನ ಮೂರ್ತಿ ಇದ್ದರೆ ಅಪಘಾತಗಳ ಸಮಸ್ಯೆ ದೂರವಾಗುತ್ತದೆ. ಅದೂ ಅಲ್ಲದೆ ಗಾಳಿಯಲ್ಲಿ ತೂಗಾಡುತ್ತಿರುವ ಹನುಮಂತನ ಮೂರ್ತಿಯನ್ನು ಕಾರಿನಲ್ಲಿ ಪ್ರತಿಷ್ಠಾಪಿಸುವುದು ಶುಭ. ಕಾರಿನಲ್ಲಿ ಪ್ರಯಾಣಿಸುವಾಗ ಎದುರಾಗುವ ಎಲ್ಲಾ ತೊಂದರೆಗಳನ್ನು ಹನುಮಂತ ನಿವಾರಿಸುತ್ತಾರೆ ಎಂದು ನಂಬಲಾಗಿದೆ.

ಸಾರಯುಕ್ತ ತೈಲ:
ಕಾರಿನಲ್ಲಿ ಸಣ್ಣ ಬಾಟಲಿಯ ಸಾರಯುಕ್ತ ತೈಲವನ್ನು ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಧನಾತ್ಮಕತೆಯ ಸಂಕೇತವಾಗಿದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಆಮೆ ಆಟಿಕೆ:
ಕಾರಿನಲ್ಲಿ ಸಣ್ಣ ಆಮೆ ಆಟಿಕೆ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಆಮೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಾರಿನಲ್ಲಿ ಇಡಬಾರದ ವಸ್ತುಗಳು:
ಮುಖ್ಯವಾಗಿ ಯಾವುದೇ ಮುರಿದ ವಸ್ತುಗಳನ್ನು ಕಾರಿನಲ್ಲಿ ಇಡಬೇಡಿ. ಕಾರಿನ ಕಿಟಕಿಗಳು, ಕಾರ್ಪೆಟ್, ಸೀಟುಗಳನ್ನು ಯಾವಾಗಲೂ ಸ್ವಚ್ಛವಾಗಿಡಿ. ಇದು ನಿಮಗೆ ಶಾಂತಿಯನ್ನು ನೀಡುತ್ತದೆ.

1 Comment
  1. […] ಇದನ್ನು ಓದಿ: Vastu Tips: ಕಾರಲ್ಲಿ ಈ ವಸ್ತುಗಳನ್ನು ಇಟ್ಟರೆ ವಾಸ… […]

Leave A Reply

Your email address will not be published.