PM Narendra Modi: ಇನ್ಮುಂದೆ ಯಾರೂ ನನ್ನನ್ನು ಹೀಗೆ ಕರೆಯಕೂಡದು – ಪ್ರಧಾನಿ ಮೋದಿಯ ಅಚ್ಚರಿ ಹೇಳಿಕೆ

Political news PM Narendra Modi requested the party members to don't call this name

aadarniya Modiji: ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರಿಗೆ ತಮ್ಮನ್ನು ಮೋದಿಜಿ(modiji), ಆದರಣೀಯ ಮೋದಿಜಿ(aadarniya modiji), ಶ್ರೀ ಮೋದಿಜಿ(Shri Modiji) ಎಂದು ಕರೆಯಬಾರದು ಎಂದು ತಿಳಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿಯ (Bharatiya Janata Party) ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸಂಸದೀಯ ಸಭೆಯಲ್ಲಿ ನರೇಂದ್ರ ಮೋದಿಯವರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಹೆಸರಿನ ಮುಂದೆ ಇಲ್ಲವೇ ಹಿಂದೆ ವಿಶೇಷಣವನ್ನು ಸೇರಿಸಿ ಹೇಳುವುದರಿಂದ ತಮಗೂ ಹಾಗೂ ಈ ದೇಶದ ಜನರ ನಡುವೆ ಅಂತರದ ಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ. ನಾನು ಪಕ್ಷದ ಒಬ್ಬ ಸಣ್ಣ ಕಾರ್ಯಕರ್ತನಾಗಿದ್ದು, ಜನರು ನಾನೂ ಕೂಡ ಅವರ ಕುಟುಂಬದ ಸದಸ್ಯನಂತೆ ಭಾವಿಸುತ್ತಾರೆ. ಶ್ರೀ ಅಥವಾ ಆದರಣೀಯ ವಿಶೇಷಣಗಳನ್ನು ಸೇರಿಸಬೇಡಿ. ನಾನು ನಿಮ್ಮಲ್ಲೊಬ್ಬ ಎಂದು ಭಾವಿಸಿ ಎಂದು ಹೇಳಿದ್ದಾರೆ ಎಂದು ಸಂಸದರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಇದನ್ನು ಓದಿ: NPS Cancellation: ರಾಜ್ಯದಲ್ಲಿ OPS ಜಾರಿ – ಸರ್ಕಾರದಿಂದ ಹೊರಬಿತ್ತು ಬಿಗ್ ಅಪ್ಡೇಟ್ !!

1 Comment
Leave A Reply

Your email address will not be published.