Kisan Credit Card : ರೈತರೇ, ಸಾಲ ಸೌಲಭ್ಯ, ಸರ್ಕಾರದ ಸವಲತ್ತು ಬೇಕಂದ್ರೆ ಇದೊಂದು ಕಾರ್ಡ್ ಮಾಡಿಸಿ ಸಾಕು – ಎಲ್ಲವೂ ನಿಮ್ಮ ಮನೆ ಬಾಗಿಲಿಗೇ ಬರುತ್ತೆ!!

Kisan Credit Card: ರೈತರ ನೆರವಿಗೆ ಕೇಂದ್ರ ಸರ್ಕಾರ (Central Government)ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ರೈತರಿಗೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM Kisan Yojana) ಯೋಜನೆಯನ್ನು ಸರ್ಕಾರ ನಡೆಸುತ್ತಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ(Agricultural Activity)ಸುಲಭವಾಗಿ ಸಾಲಗಳನ್ನು ಪಡೆಯಬಹುದು. ಈ ಕಿಸಾನ್ ಕ್ರೆಡಿಟ್ ಕಾರ್ಡ್‌(Kisan Credit Card)ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ :

ನ್ಯಾಷನಲ್‌ ಬ್ಯಾಂಕ್ ಆಫ್ ಇಂಡಿಯಾ (Nabard) ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಈ ಕ್ರೆಡಿಟ್ ಕಾರ್ಡ್ (Kisan Credit Card)ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯದ ಜೊತೆಗೆ ಉಳಿತಾಯ ಖಾತೆಯನ್ನು ಕೂಡ ಹೊಂದಬಹುದು. ರೈತರು ಈ ಕಾರ್ಡ್ ಮೂಲಕ ಎರಡು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕೃಷಿಗಾಗಿ ಬ್ಯಾಂಕುಗಳಿಗೆ ಅಲೆದಾಡುವ ಬದಲು ಹೂಡಿಕೆಯನ್ನು ಸಾಲದ ರೂಪದಲ್ಲಿ ಪಡೆಯಬಹುದಾಗಿದೆ. ಸುಲಭ ಕಂತುಗಳಲ್ಲಿ ಪಾವತಿಸುವ ಸಂಭವ ಕೂಡ ಇದ್ದು, ಈ ಕ್ರೆಡಿಟ್ ಕಾರ್ಡ್ ನೆರವಿಂದ ನೀವು ಉಳಿತಾಯ ಖಾತೆಯನ್ನು ಕೂಡ ತೆರೆಯಬಹುದು. ಒಂದೇ ಖಾತೆಯಲ್ಲಿ ಹಣವನ್ನು ಉಳಿಸುವ ಮತ್ತು ಪ್ರತ್ಯೇಕ ಖಾತೆಗಳ ಬದಲು ಅದೇ ಖಾತೆಯಲ್ಲಿ ಸಾಲಗಳನ್ನು ಪಡೆಯುವ ಅವಕಾಶ ಕೂಡ ಇದೆ.

ಇದನ್ನು ಓದಿ: Health Card: ಇನ್ಮುಂದೆ BPL ಕಾರ್ಡ್ ದಾರರಿಗೆ ಮಾತ್ರವಲ್ಲ APL ಕಾರ್ಡ್ ಇರುವವರಿಗೂ ಸಿಗುತ್ತೆ ಈ ಸೌಲಭ್ಯ- ಸರ್ಕಾರದಿಂದ ಭರ್ಜರಿ ಹೊಸ ಘೋಷಣೆ

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

* ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ವೆಬ್ ಸೈಟ್ ಗೆ ಭೇಟಿ ನೀಡಿ.
* ಅಲ್ಲಿ ನೀವು ಕಿಸಾನ್ ಕಾರ್ಡ್ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು.
* ಈ ಯೋಜನೆಗೆ ಅರ್ಹ ಎಲ್ಲಾ ಲಕ್ಷಣಗಳಿದ್ದರೆ ಪ್ರಕ್ರಿಯೆ ಪೂರ್ಣಗೊಂಡು 15 ದಿನಗಳಲ್ಲಿ ಕಾರ್ಡ್ ವಿತರಿಸಲಾಗುತ್ತದೆ.

Leave A Reply

Your email address will not be published.