Gmail New Feature: ಜೀಮೇಲ್ ಬಳಕೆದಾರರಿಗೆ ಸಂತಸದ ಸುದ್ದಿ !! ಕೇಳಿದ್ರೆ ಖಂಡಿತಾ ಖುಷಿ ಪಡ್ತೀರಾ

Technology news Google Introduces Bulk Select Feature in Gmail for Android and ios

Gmail New Feature: ಗೂಗಲ್ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಜಿಮೇಲ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ (Gmail New Feature)ಬಿಡುಗಡೆ ಮಾಡಿದ್ದು, ಈ ಮೂಲಕ ಜಿಮೇಲ್ ಬಳಕೆದಾರರಿಗೆ ಖುಷಿಯ ಸುದ್ದಿ ಹೊರ ಬಿದ್ದಿದೆ.

ಅಂಡ್ರಾಯಿಡ್ ಮತ್ತು ಐಓಎಸ್ ಸಾಧನಗಳಲ್ಲಿ ಜೀಮೇಲ್(Gmail New Features)ಮೊಬೈಲ್ ಅಪ್ಲಿಕೇಶನ್‌ನಲ್ಲಿ ಗೂಗಲ್ ಹೊಸ ವೈಶಿಷ್ಟ್ಯವನ್ನು ಪ್ರಾರಂಭ ಮಾಡಿದೆ. ಈ ವೈಶಿಷ್ಟ್ಯವು ಒಂದೇ ಟ್ಯಾಪ್‌ನೊಂದಿಗೆ ಇಮೇಲ್ ಥ್ರೆಡ್-ಲಿಸ್ಟ್‌ನಲ್ಲಿ ಸಂದೇಶಗಳ ಬ್ಯಾಚ್ ಅನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಟ್ಟಿದೆ. ಈ ವೈಶಿಷ್ಟ್ಯವು ಎಲ್ಲಾ ಗೂಗಲ್ ವರ್ಕ್ ಪ್ಲೇಸ್ ಗ್ರಾಹಕರಿಗೆ ಮತ್ತು ವೈಯಕ್ತಿಕ ಗೂಗಲ್ ಖಾತೆಗಳನ್ನು(Technology News In Kannada) ಹೊಂದಿರುವ ಬಳಕೆದಾರರಿಗೆ ದೊರೆಯಲಿದೆ.

 

ಗೂಗಲ್ ಶೀಟ್ಸ್ ಅಪ್ಲಿಕೇಶನ್‌ನಲ್ಲಿ ಹೊಸ ಚಾರ್ಟ್ ಕಾಪಿ ಮತ್ತು ಪೇಸ್ಟ್ ಆಯ್ಕೆಗಳನ್ನು ಗೂಗಲ್ ಬಿಡುಗಡೆ ಮಾಡಿದ್ದು, ಈ ಆಯ್ಕೆಗಳು ಎಲ್ಲಾ ಐಓಎಸ್ ಸಾಧನಗಳಲ್ಲಿ ಸಿಗಲಿದೆ. ಹೊಸ ಆಯ್ಕೆಗಳ ಜೊತೆಗೆ ಬಳಕೆದಾರರು ಅದೇ ಸ್ಪ್ರೆಡ್‌ಶೀಟ್‌ನಲ್ಲಿ ಅಥವಾ ಇನ್ನೊಂದು ಸ್ಪ್ರೆಡ್‌ಶೀಟ್‌ನಲ್ಲಿ ಚಿತ್ರ ಅಥವಾ ನಕಲಿ ಚಾರ್ಟ್‌ನಂತೆ ಚಾರ್ಟ್ ಅನ್ನು ನಕಲಿಸಲು ಅವಕಾಶವಿದೆ. ಈ ವೈಶಿಷ್ಟ್ಯಕ್ಕೆ ಇದೀಗ ಗೂಗಲ್ ವರ್ಕ್ ಪ್ಲೇಸ್ ಗ್ರಾಹಕರು ಮತ್ತು ವೈಯಕ್ತಿಕ ಗೂಗಲ್ ಖಾತೆದಾರರು ಪ್ರವೇಶಿಸಬಹುದು.

 

 

ಅಂಡ್ರಾಯಿಡ್ ಮತ್ತು ಐಓಎಸ್ ಸಾಧನಗಳಿಗೆ ಅಪ್‌ಡೇಟ್‌ನಲ್ಲಿ ಕಂಪನಿಯು, ‘ಜಿಮೇಲ್ ಅಪ್ಲಿಕೇಶನ್‌ನಲ್ಲಿ ಟ್ಯಾಪ್ ಮಾಡುವ ಮೂಲಕ ಇಮೇಲ್ ಥ್ರೆಡ್ ಪಟ್ಟಿಯಲ್ಲಿ ಒಂದು ಬ್ಯಾಚ್ ಸಂದೇಶಗಳನ್ನು ಆಯ್ಕೆ ಮಾಡಲು ಅನುಮತಿಸುವ ವೈಶಿಷ್ಟ್ಯವನ್ನು ಪ್ರಾರಂಭಿಸಲಿದೆ. ಈ ವೈಶಿಷ್ಟ್ಯವನ್ನು ಬಳಕೆ ಮಾಡಲು ಬಳಕೆದಾರರು ಸೆಲೆಕ್ಟ್ ಆಲ್ ಐಕಾನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದು ಎಲ್ಲಾ ಸಂದೇಶಗಳನ್ನು ಆಯ್ಕೆ ಮಾಡಲಿದ್ದು, ಬಳಕೆದಾರರು ನಂತರ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸಂದೇಶಗಳನ್ನು ಅಳಿಸಲು ಅವಕಾಶವಿದೆ. ಲೇಬಲ್ ಮಾಡಬಹುದು ಇಲ್ಲವೇ ಮೂವ್ ಮಾಡಬಹುದಾಗಿದ್ದು, ಈ ವೈಶಿಷ್ಟ್ಯ ಇನ್ನೂ ಅಭಿವೃದ್ಧಿ ಹಂತದಲ್ಲಿದೆ.

ಇದನ್ನೂ ಓದಿ : ಹುಡುಗನ ತುಟಿಗೆ ತುಟಿಯಿಟ್ಟು ಮೇಘ ಶೆಟ್ಟಿ ಇದೇನು ಮಾಡಿದ್ರು ?! ವೈರಲ್ ಆಗೇಬಿಡ್ತು ವಿಡಿಯೋ

Leave A Reply

Your email address will not be published.