Health Care: ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವವರೆ ಹುಷಾರ್ – ಇಂದೇ ನಿಲ್ಲಿಸಿ ಈ ಅಭ್ಯಾಸ !! ಇದರಿಂದ ಏನೇನಾಗುತ್ತೆ ಗೊತ್ತಾ?!

Health Care: ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಶೀತ, ಕೆಮ್ಮು, ನೆಗಡಿಯಂತಹ ಆರೋಗ್ಯ (Health Care) ಸಮಸ್ಯೆಗಳು ಬಹುತೇಕರಿಗೆ ಕಾಡುತ್ತಿದೆ. ಆದರೆ ನಿಮ್ಮ ಮನೆಯಲ್ಲಿ ವೇಗವಾಗಿ ಚಳಿಗಾಲದ ಸೋಂಕುಗಳು ಹರಡಲು ಒದ್ದೆ ಬಟ್ಟೆಗಳು ಕೂಡ ಕಾರಣವಾಗಬಹುದು.

ಹೌದು, ಹೆಚ್ಚಾಗಿ ಹೊರಗಡೆಗಿಂತ ವೇಗವಾಗಿ ಮನೆಯೊಳಗೆ ಬಟ್ಟೆ ಒಣಗುತ್ತವೆ ಎಂಬ ಕಾರಣದಿಂದ ಚಳಿಗಾಲದಲ್ಲಿ ಮನೆಯೊಳಗೆ ಫ್ಯಾನ್ ಆನ್ ಮಾಡಿ ಬಟ್ಟೆಗಳನ್ನು ಒಣಗಿಸುವ ಅಭ್ಯಾಸವನ್ನು ಸಾಕಷ್ಟು ಜನರು ಹೊಂದಿರುತ್ತಾರೆ. ಆದರೆ ಮನೆಯೊಳಗೆ ಒದ್ದೆ ಬಟ್ಟೆಯನ್ನು ಒಣಗಿಸುವ ಅಭ್ಯಾಸ ಫಂಗಸ್ ಸೇರಿದಂತೆ ಹಲವು ರೀತಿಯ ಸೋಂಕುಗಳು ಕಾಣಿಸಿಕೊಳ್ಳಲು ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಮುಖ್ಯವಾಗಿ ಈ ಕುರಿತು, ಮ್ಯಾಂಚೆಸ್ಟರ್‌ನ ರಾಷ್ಟ್ರೀಯ ಆಸ್ಪರ್‌ಜಿಲೊಸಿಸ್ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ‘ಮನೆಯೊಳಗೆ ಒದ್ದೆ ಬಟ್ಟೆಯನ್ನು ಒಣಗಿಸುವ ಅಭ್ಯಾಸ ಸೈನಸ್ ಮತ್ತು ಅಲರ್ಜಿಗಳು ಮಕ್ಕಳಲ್ಲಿ ನ್ಯುಮೋನಿಯಾವನ್ನು ಉಂಟುಮಾಡಬಹುದು. ಇದಲ್ಲದೇ ಶ್ವಾಸಕೋಶದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದು ತಿಳಿದುಬಂದಿದೆ.

ಇದನ್ನು ಓದಿ: Assembly Session : ಗಾಂಧಿ ಮೇಲೋ, ಬಸವಣ್ಣ ಮೇಲೋ ?! ಅಧಿವೇಶನದಲ್ಲಿ ಹುಟ್ಟಿಕೊಂಡಿತು ಹೊಸ ವಿವಾದ

ಮನೆಯಲ್ಲಿ ಬಟ್ಟೆಗಳನ್ನು ಒಣಗಿಸುವುದು ಕೋಣೆಯಲ್ಲಿ ತೇವಾಂಶವನ್ನು 30 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ, ಇದು ಆರ್ಸ್ಪೆಜಿಲ್ಲಸ್ ಫ್ಯೂಮಿಗೇಟಸ್ ಎಂಬ ಶಿಲೀಂಧ್ರದ ಬೀಜಕಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಉಸಿರಾಟದ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಒಂದು ವೇಳೆ ನಿಮ್ಮ ಒದ್ದೆಯಾದ ಬಟ್ಟೆಗಳನ್ನು ಮನೆಯಲ್ಲಿಯೇ ಒಣಗಿಸಬೇಕಾದರೆ, ಕೆಲವು ಸಲಹೆಗಳನ್ನು ಅನುಸರಿಸಬೇಕು. ನೀರನ್ನು ಸಂಪೂರ್ಣವಾಗಿ ಹಿಂಡಿದ ನಂತರವೇ ಒಣಗಿಸಬೇಕು. ಇನ್ನು ಬಟ್ಟೆ ತೊಳೆಯುವಾಗ ನೀರಿನಲ್ಲಿ 2 ಚಮಚ ವಿನೆಗರ್ ಸೇರಿಸಿ. ಇದರಿಂದ ಮನೆ ಕೆಟ್ಟ ವಾಸನೆ ಬರದಂತೆ ನೋಡಿಕೊಳ್ಳುತ್ತದೆ.

Leave A Reply

Your email address will not be published.