Suicide case: ಬೆಳಗಿನ ತಿಂಡಿ ಕೊಡದ ಅಮ್ಮ- ಪ್ರಾಣವನ್ನೇ ಕಳೆದುಕೊಂಡ ಮಗ

Mahatashra Suicide Case: ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಗೆ(Suicide Case) ಶರಣಾಗುತ್ತಿರುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಈ ನಡುವೆ, ಮಹಾರಾಷ್ಟ್ರದ ನಾಗ್ಪುರದಲ್ಲಿ ಅಮ್ಮ ಬೆಳಗ್ಗೆ ತಿಂಡಿ ಸಿದ್ದ ಪಡಿಸಿಲ್ಲ ಎಂಬ ಕಾರಣಕ್ಕಾಗಿ ಮಗನೊಬ್ಬ ಆತ್ಮಹತ್ಯೆಗೆ ಶರಣಾಗಿರುವ (Mahatashra Suicide Case)ಘಟನೆ ವರದಿಯಾಗಿದೆ.

ಕನ್ಹನ್ ಪಿಂಪ್ರಿ ಪ್ರದೇಶದ ನಿವಾಸಿಯಾದ 17 ವರ್ಷದ ಯುವಕನೊಬ್ಬ ಶುಕ್ರವಾರ ಬೆಳಗ್ಗೆ ತನ್ನ ತಾಯಿಯೊಂದಿಗೆ ಜಗಳವಾಡಿದ್ದಾನೆ. ತಾಯಿ ಬೆಳಗಿನ ತಿಂಡಿಯನ್ನು ಸಿದ್ದ ಪಡಿಸಿಲ್ಲ ಎಂದು ಕೋಪಗೊಂಡು ಮನೆಯಿಂದ ಹೊರ ಹೋಗಿದ್ದ ಎನ್ನಲಾಗಿದೆ. ಹೀಗಾಗಿ,ಪೋಷಕರು ಮಗ ಕಾಣೆಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಯುವಕನ ಪತ್ತೆಗೆ ಶೋಧ ಕಾರ್ಯ ನಡೆಸಿದ ಸಂದರ್ಭ ಭಾನುವಾರ ಬೆಳಗ್ಗೆ ರೈಲ್ವೇ ಹಳಿಯ ಬಳಿಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ (Mahatashra Suicide Case)ಕಂಡುಬಂದಿದ್ದ. ಸದ್ಯ, ನ್ಯೂಕ್ಯಾಂಪ್ಟಿ ಪೊಲೀಸರು ಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ನಿಮಗೇನಾದರೂ ಅತಿಯಾಗಿ ಬೆವರುತ್ತಿದೆಯೇ? ನಿರ್ಲಕ್ಷ್ಯ ಮಾಡಬೇಡಿ, ಕಾರಣ ತಿಳಿಯಿರಿ!

1 Comment
  1. […] ಇದನ್ನು ಓದಿ: Suicide case: ಬೆಳಗಿನ ತಿಂಡಿ ಕೊಡದ ಅಮ್ಮ- ಪ್ರಾಣವನ್… […]

Leave A Reply

Your email address will not be published.