Hair Care: ಕೂದಲು ಕಪ್ಪಾಗಿಸಲು ಇನ್ನು ಹೇರ್ ಡೈ, ಹೇರ್ ಕಲರ್ ಬೇಡ – ಈ ನೀರಿನಿಂದ ಸ್ನಾನ ಮಾಡಿದ್ರೆ ಸಾಕು
Fenugreek For Premature White Hair: ಕೂದಲಿನ ರಕ್ಷಣೆಗೆ (Hair Care)ಎಲ್ಲರೂ ಒಂದಲ್ಲ ಒಂದು ಹರಸಾಹಸ ಪಡುವುದು ಸಹಜ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚಿನವರು ಬಿಳಿ ಕೂದಲಿನ (White Hair)ಸಮಸ್ಯೆ ಎದುರಿಸುತ್ತಿದ್ದಾರೆ. ಇಂದಿನ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿಯಿಂದ ಚಿಕ್ಕ ವಯಸ್ಸಿನಲ್ಲೇ ಹೆಚ್ಚಿನವರಿಗೆ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದ್ದು, ಇದಕ್ಕೆ ಈ ಸರಳ ಟಿಪ್ಸ್ ಫಾಲೋ (Fenugreek For Premature White Hair)ಮಾಡಿ ಪರಿಹಾರ ಕಂಡುಕೊಳ್ಳಿ.
ಚಿಕ್ಕವಯಸ್ಸಿನಲ್ಲಿ ಕೂದಲು ಬಿಳಿಯಾಗುವುದರಿಂದ ಹೆಚ್ಚಿನ ಮಂದಿ ಮುಜುಗರಕ್ಕೆ ಒಳಗಾಗುತ್ತಾರೆ. ಕೂದಲು ಬಿಳಿಯಾದರೆ ಕೆಮಿಕಲ್ ಇರುವ ಹೇರ್ ಡೈ ಬಳಸುವ ಅಭ್ಯಾಸ ಹೆಚ್ಚಿನವರು ರೂಡಿಸಿಕೊಳ್ಳುತ್ತಾರೆ. ಇದರಿಂದ ಕೂದಲು ಹಾಳಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ಕೆಮಿಕಲ್ ಬಳಕೆ ಮಾಡುವ ಬದಲಿಗೆ ಸಿಂಪಲ್ ಮನೆ ಮದ್ದು ಬಳಸಿ ನೋಡಿ!
ಮೆಂತ್ಯೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಮರು ದಿನ ಬೆಳಿಗ್ಗೆ ಅದನ್ನು ರುಬ್ಬಿಕೊಂಡು ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚುವ ಅಭ್ಯಾಸ ಮಾಡಿಕೊಳ್ಳಿ. ಈ ವಿಧಾನವನ್ನು ಕೆಲವು ದಿನಗಳವರೆಗೆ ಅಳವಡಿಸಿಕೊಂಡರೆ ಕೂದಲು ನೈಸರ್ಗಿಕವಾಗಿ ಕಪ್ಪಾಗಲಿದೆ. ನಿಮ್ಮ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗಿಸಲು, ಮೆಂತ್ಯೆಯೊಂದಿಗೆ ಬೆಲ್ಲವನ್ನು ಸೇವಿಸಬಹುದು. ಈ ಎರಡನ್ನೂ ಜೊತೆಯಾಗಿ ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಮೆಂತ್ಯೆ ಮತ್ತು ಬೆಲ್ಲವು ಕೂದಲಿನ ಕಪ್ಪು ಬಣ್ಣ ಹೊಂದಲು ನೆರವಾಗುವ ಜೊತೆಗೆ ಕೂದಲು ಹೊಳೆಯುವಂತೆ ಮಾಡುತ್ತದೆ. ಇದಲ್ಲದೇ ಕೂಡಲಿ ಉದುರುವಿಕೆ ಮತ್ತು ಬೋಳು ತಲೆ ಮೊದಲಾದ ಸಮಸ್ಯೆಗಳನ್ನು ತಡೆಯುತ್ತದೆ.
ಮೆಂತ್ಯೆಯನ್ನು ಬೇರೆ ಬೇರೆ ವಿಧಾನಗಳಲ್ಲಿ ಕೂಡ ಬಳಕೆ ಮಾಡಬಹುದು. ಈ ನಿಟ್ಟಿನಲ್ಲಿ ಮೆಂತ್ಯೆ ನೀರನ್ನು ಚೆನ್ನಾಗಿ ಕುದಿಸಿ ಆರಿಸಿ. ಹೀಗೆ ಕುದಿಸಿ ತಣ್ಣಗಾಗಿಸಿದ ನೀರಿನ್ನು ಕೂದಲಿಗೆ ಹಚ್ಚಿ 15 ನಿಮಿಷಗಳ ನಂತರ ಬಿಡಿ. ಇದೇ ನೀರಿನಿಂದ ಕೂದಲನ್ನು ತೊಳೆಯಿರಿ. ಇದನ್ನು ಕೆಲವು ದಿನಗಳವರೆಗೆ ಮಾಡುವ ಮೂಲಕ ಬಿಳಿ ಕೂದಲಿನ ಸಮಸ್ಯೆ ಸಂಪೂರ್ಣವಾಗಿ ಪರಿಹಾರ ಪಡೆಯಬಹುದು.