Chattisgarh: 7 ಬಾರಿ ಗೆದ್ದಿದ್ದ ‘ಕೈ’ ಶಾಸಕನನ್ನು ಹೀನಾಯವಾಗಿ ಸೋಲಿಸಿದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ !! ಇದರ ಹಿಂದಿತ್ತು ಮಗನ ಸಾವಿನ ಸೇಡು

Chattisgarh: ದೇಶದ ಜನರ ಚಿತ್ತ ಪಂಚ ರಾಜ್ಯ ಚುನಾವಣೆಗಳ ಫಲಿತಾಂಶದತ್ತನೆ ಕಿತ್ತು ರಾಜ್ಯಗಳ ಮತ ಎಣಿಕೆ ನಡೆದಿದ್ದು ಅದರಲ್ಲಿ ಮೂರು ರಾಜ್ಯಗಳಾದ ರಾಜಸ್ಥಾನ ಮಧ್ಯಪ್ರದೇಶ ಹಾಗೂ ಛತ್ತೀಸ್ಗಡದಲ್ಲಿ(Chattisgarh) ಬಿಜೆಪಿಯು ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯನ್ನು ಹಡೆದಿದೆ. ಇದರ ಎಡೆಯಲ್ಲಿ ಬಿಜೆಪಿಯ ಈ ಸಂಭ್ರಮದ ನಡುವೆ ಭಾರೀ ಗಮನ ಸೆಳೆಯುವ ನಾಯಕ ಎಂದರೆ ಛತ್ತೀಸಗಡದಲ್ಲಿ ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿ ಶಾಸಕ !! ಇವರ ಗೆಲುವು ಸಾಮಾನ್ಯವಾದದ್ದಲ್ಲ. ಅದರ ಹಿಂದೆ ನ್ಯಾಯದ ಹಂಬಲವಿದೆ, ಮನ ಮಿಡಿಯುವ ಘಟನೆ ಇದೆ, ಸಾವೊಂದರ ಸೇಡಿದೆ.

ಎಲ್ಲಾ ಎಕ್ಸಿಟ್ ಪೋಲ್ ಗಳ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವಂತೆ ಛತ್ತೀಸಗಡದಲ್ಲಿ ಬಿಜೆಪಿ(BJP) ಅಭೂತಪೂರ್ವ ಗೆಲವು ಸಾಧಿಸಿದೆ. ಈ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯಾದ ಈಶ್ವರ್ ಸಾಹು ಎಂಬುವವರ ಗೆಲುವಿನ ಹಿಂದಿನ ಕುತೂಹಲಕಾರಿ ವಿಷಯವೊಂದನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್(BL Santosh) ಟ್ವೀಟ್ ಮಾಡಿದ್ದು ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗಿದೆ.

ಹೌದು, ಛತ್ತೀಸಘಡ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿತ್ತು. ಸಾಜಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಈಶ್ವರ್ ಸಾಹು, ಪ್ರತಿಸ್ಪರ್ಧಿ, ಕಾಂಗ್ರೆಸ್‌ನಿಂದ 7 ಬಾರಿ ಶಾಸಕನಾಗಿ ಆಯ್ಕೆಯಾದ ರವೀಂದ್ರ ಚೌಬೆಯನ್ನು ಸೋಲಿಸಿ ದಾಖಲೆ ಬರೆದಿದ್ದಾರೆ. ಈಶ್ವರ್ ಸಾಹು ರಾಜಕಾರಣಿ ಅಲ್ಲ. ಒಬ್ಬ ಕೂಲಿ ಕಾರ್ಮಿಕ. ತನ್ನ ಪುತ್ರ ಮನ ಸಾವಿನ ಸೇಡಿಗಾಗಿ ಈಶ್ವರ್ ಅವರು ಗೆಲುವನ್ನು ಪಡೆದಿದ್ದಾರೆ. ಸಾಜಾ ಕ್ಷೇತ್ರದಿಂದ ಸ್ಪರ್ಧಿಸಿದ ಈಶ್ವರ್ ಸಾಹು ಬರೋಬ್ಬರಿ 5,196 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈಶ್ವರ್ ಸಾಹು 1,01,789 ಮತಗಳನ್ನು ಪಡೆದರೆ, ಕಾಂಗ್ರೆಸ್ ಪ್ರಮುಖ ನಾಯಕನಾಗಿ, ಚತ್ತಿಸಘಡ ವಿರೋಧ ಪಕ್ಷದ ನಾಯಕನಾಗಿ, ಸಂಸದಿಯ ವ್ಯವಹಾರ ಸಚಿವನಾಗಿದ್ದ ರವೀಂದ್ರ ಚೌಬೆ 96,593 ಮತ ಪಡೆದಿದ್ದಾರೆ.

ಇದನ್ನು ಓದಿ: Hair Care: ಕೂದಲು ಕಪ್ಪಾಗಿಸಲು ಇನ್ನು ಹೇರ್ ಡೈ, ಹೇರ್ ಕಲರ್ ಬೇಡ – ಈ ನೀರಿನಿಂದ ಸ್ನಾನ ಮಾಡಿದ್ರೆ ಸಾಕು

ಅಂದಹಾಗೆ ಈಶ್ವರ್ ಸಾಹು ಅವರ ಮಗ ಹಿಂಸಾಚಾರದಲ್ಲಿ ಕಿಡಿಗೇಡಿಗಳ ಗುಂಪಿನಿಂದ ಹತ್ಯೆಗೀಡಾಗಿದ್ದರು. ಹತ್ಯೆಗೈದ ಗುಂಪಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಇದರಿಂದ ಬೇಸತ್ತಿದ್ದ ಸಾಹು ಅವರು ಕಾಂಗ್ರೆಸ್ ವಿರುದ್ಧ ಪ್ರಜಾಪ್ರಭುತ್ವದ ಮಾರ್ಗದಲ್ಲೇ ಹೋರಾಟ ನಡೆಸಲು ಮುಂದಾಗಿದ್ದರು. ಅಧಿಕಾರದಲ್ಲಿದ್ದ ಕಾಂಗ್ರೆಸ್‌ನಿಂದ ಈಶ್ವರ್‌ಗೆ ಯಾವುದೇ ನೆರವು ಸಿಗಲಿಲ್ಲ. ಇತ್ತ ಆರೋಪಿಗಳು ಜೈಲಿನಿಂದ ಸುಲಭವಾಗಿ ಬಿಡುಗಡೆಯಾಗಿದ್ದರು. ಆದರೆ ಈಶ್ವರ್ ಸಾಹು ಹೋರಾಟ ನಿಲ್ಲಿಸಿರಲಿಲ್ಲ. ಈಶ್ವರ್ ಸಾಹುಗೆ ಬಿಜೆಪಿ ಸಾಥ್ ನೀಡಿತ್ತು. ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದ್ದು, ತಮಗಾದ ಅನ್ಯಾಯದ ವಿರುದ್ಧ ಸಿಡಿದು ಗೆಲುವು ಸಾಧಿಸಿದ್ದಾರೆ.

ಮಗನ ಸಾವು ಸಂಭವಿಸಿದ್ದು ಹೇಗೆ?
2023ರ ಎಪ್ರಿಲ್ ತಿಂಗಳಲ್ಲಿ ಬಿರಾನ್‌ಪುರ್ ಗ್ರಾಮದಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳ ಸೈಕಲ್ ಡಿಕ್ಕಿಯಾಗಿತ್ತು. ಮುಸ್ಲಿಂ ವಿದ್ಯಾರ್ಥಿ ಸೈಕಲ್ ಹಾಗೂ ಹಿಂದೂ ವಿದ್ಯಾರ್ಥಿ ಸೈಕಲ್ ಡಿಕ್ಕಿಯಾಗಿ ವಾಗ್ವಾದ ಆರಂಭಗೊಂಡಿತ್ತು. ಈ ವೇಳೆ ಮುಸ್ಲಿಂ ವಿದ್ಯಾರ್ಥಿ, ಹಿಂದೂ ವಿದ್ಯಾರ್ಥಿಗೆ ಗಾಜಿನ ಬಾಟಲಿ ಮೂಲಕ ಹಲ್ಲೆ ಮಾಡಿದ್ದು. ಈ ವೇಳೆ ಎರಡು ಗುಂಪುಗಳ ಘರ್ಷಣೆ ಆರಂಭಗೊಂಡಿತು. ಮಾಹಿತಿ ತಿಳಿಯುತ್ತಿದ್ದಂತೆ ಜಿಹಾದಿ ಮನಸ್ಥಿತಿ ಯವಕರ ಗುಂಪು ಸ್ಥಳಕ್ಕೆ ಧಾವಿಸಿತ್ತು. ಮಚ್ಚು ಲಾಂಗ್ ಹಿಡಿದು ಬಿರನ್‌ಪುರ್ ಗ್ರಾಮದಲ್ಲಿ ಭೀಕರ ದಾಳಿ ನಡೆಸಿತ್ತು. ಈ ವೇಳೆ ಮನೆಯೊಳಗಿದ್ದ ಈಶ್ವರ್ ಸಾಹು ಪುತ್ರ 22 ವರ್ಷದ ಭುವನೇಶ್ವ ಸಾಹುವನ್ನು ಜಿಹಾದಿಗಳು ಹೊರಗೆಳೆದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಘಟನೆಯ ಬಗ್ಗೆ ಅರಿವೇ ಇಲ್ಲದ ಭುವನೇಶ್ವರ್ ಸಾಹು ಅಮಾನುಷವಾಗಿ ಕೊಲೆಯಾದನು.

ಈ ಕುರಿತು ಪೋಸ್ಟ್ ಹಾಕಿರುವ ಬಿ ಎಲ್ ಸಂತೋಷ್ ಅವರು .ಎಲ್.ಸಂತೋಷ್, ಈತ ಈಶ್ವರ್ ಸಾಹು. ಛತ್ತೀಸಗಢ ರಾಜ್ಯದ ಬಿಜೆಪಿ ಅಭ್ಯರ್ಥಿ. 7 ಬಾರಿ ಗೆದ್ದಿದ್ದ ಕಾಂಗ್ರೆಸ್ ಶಾಸಕ ರವೀಂದ್ರ ಚೌಬೆ ಅವರನ್ನು ಸಾಹು ಸೋಲಿಸಿದ್ದಾರೆ. ಈ ವ್ಯಕ್ತಿಯ ಮಗ ಗುಂಪು ಹಿಂಸಾಚಾರದಲ್ಲಿ ಹತ್ಯೆಗೀಡಾಗಿದ್ದರು. ಆ ಗಲಭೆಕೋರರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಇಂದು ಸಾಹು ಪ್ರಜಾಪ್ರಭುತ್ವ ಯುದ್ಧದಲ್ಲಿ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

Leave A Reply

Your email address will not be published.